ಭವಿಷ್ಯ

ಈ 5 ರಾಶಿಯವರು ತುಂಬಾ ಬುದ್ಧಿವಂತರು ಹಾಗೂ ಯಾರಿಂದಲೂ ಇವರನ್ನು ಗೆಲ್ಲಲು ಸಾಧ್ಯವಿಲ್ಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವರ ಜ್ಞಾನ ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಅವರ ಬಗ್ಗೆ ಅವರ ರಾಶಿ, ನಕ್ಷತ್ರ ಮತ್ತು ಜನ್ಮ ಕುಂಡಲಿಯ ಮೂಲಕ ತಿಳಿಯಬಹುದು. ನಮಗಿರುವ 12 ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಹುಟ್ಟಿದಾಗಿನಿಂದಲೇ ಬುದ್ಧಿ ಹೆಚ್ಚು.ಇವರು ಯಾವ ಕೆಲಸವನ್ನು ಪ್ರಾರಂಭಿಸಿದರೂ ಅದರಲ್ಲಿ ವಿಜಯವನ್ನು ಸಾಧಿಸುತ್ತಾರೆ ಎಂದು ಆ ಪಂಡಿತರು ಹೇಳುತ್ತಾರೆ. ಆ ರಾಶಿಗಳು ಯಾವುವು ? ಎಂದು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ:ಇವರು ಅಮೋಘವಾದ ಬುದ್ಧಿ ಶಕ್ತಿಯನ್ನು ಹೊಂದಿರುತ್ತಾರೆ, ಬೇರೆಯವರ ಬುದ್ಧಿ ಶಕ್ತಿಗಿಂತ ಇವರಿಗೆ ಬುದ್ಧಿ ಶಕ್ತಿ ಹೆಚ್ಚಾಗಿರುತ್ತದೆ. ಯಾವ ಯಾವ ಸಂದರ್ಭಗಳಲ್ಲಿ ಯಾವ ರೀತಿ ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಒಂದು ಸಮಸ್ಯೆ ಎದುರಾದಾಗ ಎಲ್ಲಾ ಕಡೆಗಳಿಂದ ಆಲೋಚನೆ ಮಾಡಿ, ಈ ಹೇಗೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ಎಲ್ಲರ ಅಭಿಪ್ರಾಯವನ್ನು ತೆಗೆದುಕೊಂಡು ಸುಲಭವಾಗಿ ಆ ಸಮಸ್ಯೆಯನ್ನು ದೂರ ಮಾಡಿಕೊಳ್ಳುತ್ತಾರೆ.ವಿಭಿನ್ನವಾಗಿ ಆಲೋಚನೆ ಮಾಡಿ ನೂತನವಾಗಿ ಕಾರ್ಯವನ್ನು ಮಾಡಿ ಎಲ್ಲರ ಮುಂದೆ ಅವರು ಏನು ಎನ್ನುವುದನ್ನು ತೋರಿಸಿ ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಎಷ್ಟೇ ಸಮಸ್ಯೆಗಳು ಎದುರಾದರೂ ಹೋರಾಡುವ ಶಕ್ತಿ ಇವರಲ್ಲಿ ಹೆಚ್ಚಾಗಿದೆ . ಒಂದು ಸಮಸ್ಯೆ ಎದುರಾದಾಗ ಎಲ್ಲಾ ಕಡೆಗಳಿಂದ ಆಲೋಚನೆ ಮಾಡಿ ಹೇಗೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ಎಲ್ಲರ ಅಭಿಪ್ರಾಯವನ್ನು ತೆಗೆದುಕೊಂಡು ಸುಲಭವಾಗಿ ಆ ಸಮಸ್ಯೆಯನ್ನು ದೂರ ಮಾಡಿಕೊಳ್ಳುತ್ತಾರೆ.

 

 

 

ಸಿಂಹ ರಾಶಿ:ಇವರು ಬುದ್ದಿಗೆ ರಾಜರು. ಸಿಂಹ ರಾಶಿಯವರು ಹೆಸರಿಗೆ ತಕ್ಕಂತೆ ಇವರು ಉನ್ನತ ಸ್ಥಾನದಲ್ಲಿಯೇ ಇರುತ್ತಾರೆ. ಎಂತಹ ಪರಿಸ್ಥಿತಿಯಲ್ಲಿಯಾದರೂ ಇವರು ಯಾವದನ್ನು ಬೇಕಾದರೂ ಎದುರಿಸುವ ಸಾಮರ್ಥ್ಯ ಇರುವವರು.ಹೋರಾಡುವ ತತ್ವಕ್ಕೆ ಇನ್ನೊಂದು ಹೆಸರಾಗಿ ಇವರು ಇರುತ್ತಾರೆ.ಯಾವ ಕೆಲಸ ಮಾಡಿದರೆ ಯಾವ ಸಮಸ್ಯೆಗಳು ಬರುತ್ತವೆ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ಮೊದಲೇ ಆಲೋಚನೆ ಮಾಡಿರುತ್ತಾರೆ.
ಕನ್ಯಾ ರಾಶಿ:ಇವರು ಎಲ್ಲೇ ಇದ್ದರೂ ಒಳ್ಳೆಯ ಆಲೋಚನೆ ಮಾಡುವವರು, ಪ್ರತಿಷ್ಠೆಯನ್ನು ಪಡೆದಿರುತ್ತಾರೆ, ಇವರಿಗೆ ಯಾವ ಸಮಸ್ಯೆಗಳು ಎದುರಾದರೂ ಅದನ್ನು ಒಂದು ಪದ್ಧತಿ ಪ್ರಕಾರವೇ ಆ ಸಮಸ್ಯೆಯನ್ನು ಎದುರಿಸುತ್ತಾರೆ. ಇವರು ಪ್ರಣಾಳಿಕೆ ಬದ್ಧವಾಗಿ ತುಂಬಾ ಆಲೋಚನೆ ಮಾಡಿ ಸಮಸ್ಯೆಯನ್ನು ಎದುರಿಸಿ ವಿಜಯವನ್ನು ಸಾಧಿಸುತ್ತಾರೆ. ಇವರು ಗಣಿತದಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ. ಬೇರೆಯವರ ಪ್ರತಿಭೆಯನ್ನು ಸಹ ಸುಲಭವಾಗಿ ಗುರುತಿಸುತ್ತಾರೆ. ಉತ್ತಮವಾದ ಜ್ಞಾಪಕಶಕ್ತಿ ಇವರಿಗೆ ಹೆಚ್ಚಾಗಿರುತ್ತದೆ.
ತುಲಾ ರಾಶಿ:ಇವರಿಗೆ ಹೆಚ್ಚಿನ ಜ್ಞಾನ ಇರುತ್ತದೆ. ಏಟಿಗೆ ಎದುರೇಟು ನೀಡುವ ಸಾಮರ್ಥ್ಯ ಇರುವವರು, ಇವರು ಇರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಎದುರಿಸುತ್ತಾರೆ .
ಕುಂಭ ರಾಶಿ:ಇವರು ಆತುರದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ, ಇವರಿಗೆ ದೂರದೃಷ್ಟಿ ಸಹ ಹೆಚ್ಚಾಗಿರುತ್ತದೆ. ಬೇರೆಯವರಿಗೆ ಹೋಲಿಸಿಕೊಂಡರೆ ಈ ರಾಶಿಯವರಿಗೆ ಸಹನೆ ತುಂಬಾ ಹೆಚ್ಚಾಗಿರುತ್ತದೆ. ಪ್ರತಿ ವಿಷಯದಲ್ಲಿಯೂ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ಎಲ್ಲಾ ಸತ್ಯ ಮತ್ತು ಅಸತ್ಯ ವಿಷಯಗಳನ್ನು ಶೇಖರಣೆ ಮಾಡಿ ನಂತರ ಸಮಸ್ಯೆಗಳನ್ನು ಎದುರಿಸಿ ಅದರಲ್ಲಿ ಜಯ ಶೀಲರಾಗುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top