ಸಮಾಚಾರ

“ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ” ಬಿಜೆಪಿ ಸಂಸದ ನಳಿನ್ ಅವಹೇಳನ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಸಂಸದ ನಳಿನ್​ ಕುಮಾರ್ ಕಟೀಲ್​ ನಾಲಿಗೆ ಹಳಿಬಿಟ್ಟಿದ್ದಾರೆ. ರಾಜ್ಯಸರ್ಕಾರದ ವತಿಯಿಂದ ಶನಿವಾರ ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿಎಂ HDK ವಿರುದ್ಧ ತಾಕಿಸುವ ಬರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

” ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರು ಹಾಕಿಸಿಕೊಂಡಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸದೇ ಆಚೆಯೂ ಅಲ್ಲ ಈಚೆಯೂ ಅಲ್ಲ ಅಂತಿದ್ದಾರೆ.. ಈ ಮೂಲಕ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬುದನ್ನು ತೋರಿಸಿದ್ದಾರೆ.” ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಟಿಪ್ಪು ಒಬ್ಬ ಮತಾಂಧ. ಹಿಂದೂ ವಿರೋಧಿ. ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ. ಮತಾಂಧ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಆಚರಣೆ ಮಾಡಿದರು. ಹೀಗಾಗಿ ಕುಮಾರಸ್ವಾಮಿ ಟಿಪ್ಪುವಿನ ಬದಲು ಸಿದ್ದರಾಮಯ್ಯ ಜಯಂತಿ ಮಾಡಬಹುದಾಗಿತ್ತು.. ಟಿಪ್ಪುವಿನ ಖಡ್ಗ ಪಡೆದ ವಿಜಯ ಮಲ್ಯ ಸೋತು ಸುಣ್ಣವಾದ್ರು. ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ್ರು. ಮುಂದೆ ಕುಮಾರಸ್ವಾಮಿಯೂ ಅಧಿಕಾರ ಕಳ್ಕೊಂಡು ಕಾಡಿಗೆ ಹೋಗಲಿದ್ದಾರೆ ಎಂದು ಕಟೀಲ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top