fbpx
ಉಪಯುಕ್ತ ಮಾಹಿತಿ

ನಿಮ್ಮ ಮೇಲೆ ಕೆಟ್ಟ ಕಣ್ಣಿನ ದೃಷ್ಟಿ ಬಿದ್ರೆ ಆಗಬಾರದ ಅನಾಹುತ ಎಲ್ಲ ಆಗುತ್ತೆ ಅದಕ್ಕೆ ಸೈ0ದವ ಲವಣ ಬಳಸಿ ಕೆಟ್ಟ ಕಣ್ಣಿನ ದೃಷ್ಟಿನ ಪರಿಹಾರ ಮಾಡಿಕೊಳ್ಳುವುದನ್ನು ಮರೆಯಬೇಡಿ

ಎಂತಾ ಕೆಟ್ಟ ಕಣ್ಣಿನ ದೃಷ್ಟಿ ಆದ್ರು ಬಹಳ ಸುಲಭವಾಗಿ ತೆಗೆಯೋಕೆ  ಸೈ0ದವ ಲವಣ ಬಳಸಿದ್ರೆ ಸಾಕು .

 

 

ಸೈ0ದವ ಲವಣದ (ಉಪ್ಪು) ಮಹತ್ವಗಳು.

ಇದು ಹಿಮದ ಗೆಡ್ಡೆಯ ಆಕೃತಿ ಹೊಂದಿರುವ ಉಪ್ಪು.ಇದು ನೋಡುವುದಕ್ಕೆ ದೊಡ್ಡದಾದ ಐಸ್ ಗೆಡ್ಡೆಯ ರೀತಿಯಲ್ಲಿ ಇರುತ್ತದೆ.ಇದಕ್ಕೆ ಅಧಿಪತಿ ಚಂದ್ರನಾಗಿದ್ದಾನೆ.ಗೆಡ್ಡೆಯ ಆಕೃತಿಯಲ್ಲಿರುವ ಇದನ್ನು ದೃಷ್ಟಿದೋಷ ನಿವಾರಣೆಗೆ ಉಪಯೋಗಿಸುವರು.ದೃಷ್ಟಿದೋಷ ನಿವಾರಣೆಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅಥವಾ ಮನೆಯ ಹೊರಗಡೆ ಒಂದು ಬಕೆಟ್ನಲ್ಲಿ ನೀರನ್ನು ಇಟ್ಟು ಯಾರಿಗೆ ದೃಷ್ಟಿ ತೆಗೆಯಬೇಕೋ ಅವರನ್ನು ಮನೆಗೆ ಒಳಗೆ ಕೂಡಿಸಿ ಎರಡು ಬಾರಿ ನಿವಾಳಿಸಿ ಎರಡು ಬಾರಿ ಯಾಕೆಂದರೆ ಅದು ಚಂದ್ರನ ಸಂಖ್ಯೆ ಆದ್ದರಿಂದ ಬಲಗಡೆಯಿಂದ ಎರಡು ಬಾರಿ ಮತ್ತು ಎಡಗಡೆಯಿಂದ ಎರಡು ಬಾರಿ ಒಟ್ಟಿಗೆ ನಾಲ್ಕೂ ಬಾರಿ ನಿವಾಳಿಸಿ ಹೊರಗೆ ಇಟ್ಟಿರುವ ನೀರಿನಲ್ಲಿ ಹಾಕಬೇಕು.ಈ ರೀತಿ ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಮಾಡಬೇಕು.ಹೀಗೆ ಮಾಡಿದರೆ ಸಮಸ್ತ ದೃಷ್ಟಿದೋಷ ನಿವಾರಣೆಯಾಗುತ್ತದೆ.

 

 

 

ದೃಷ್ಟಿದೋಷವೂ ಮಕ್ಕಳಿಗೆ ಬೇಗ ತಾಗುತ್ತದೆ.ಇದಕ್ಕೆ ಕಣ್ಣೆಸರು ಎಂದು ಕೂಡ ಅಡು ಭಾಷೆಯಲ್ಲಿ ಕರೆಯುವರು.ಈ ರೀತಿ ದೃಷ್ಟಿಯಾದ ಮಕ್ಕಳು ಊಟ ಮಾಡುವುದಿಲ್ಲ,ನಿದ್ರೆ ಮಾಡುವುದಿಲ್ಲ,ಚೀರಾಡುತ್ತಾರೆ,ಅಳುತ್ತಾರೆ, ಅಂತಹ ಮಕ್ಕಳಿಗೆ ಸೈ0ದವ ಲವಣದಿಂದ 21 ಬಾರಿ ಅಂದರೆ 21 ದಿನ ದೃಷ್ಟಿಯನ್ನು ತೆಗೆಯಬೇಕು.ಇನ್ನು ಮಕ್ಕಳಲ್ಲಿ ಮಲಬದ್ಧತೆ, ಹೊಟ್ಟೆಯುಬ್ಬರ ಇರುವವರಿಗೆ ಸೈ0ದವ ಲವಣವನ್ನು ನೀರಿನಲ್ಲಿ ಕರಗಿಸಿ ಪ್ರತಿದಿನ ಸ್ವಲ್ಪ ಸ್ವಲ್ಪವೇ ಒಂದು ಚಮಚದಷ್ಟು ಕುಡಿಸುತ್ತಿದರೆ ಬೇಗ ಗುಣಮುಖರಾಗುತ್ತಾರೆ.ಕೈ ಮಸುಕು ಎಲ್ಲರಿಗೂ ತಿಳಿದೆದೆ ಅಲ್ಲವೇ.ಕೆಲವರು ಇದ್ದನೆ ರೂಢಿಯಲ್ಲಿ ಇಟ್ಟುಕೊಂಡಿರುತ್ತಾರೆ.ಇಂತಹದನ್ನು ಬಗೆಹರಿಸುವ ಶಕ್ತಿ ಮತ್ತು ಸಾಮರ್ಥ್ಯ ಈ ಸೈ0ದವ ಲವಣಕ್ಕೆ ಇದೆ.ಇನ್ನೂ ಮನೆಯಲ್ಲಿರುವವರಿಗೆ ಅಂದರೆ ಹೊಸದಾಗಿ ಮನೆ ಕಟ್ಟಿದವರಿಗೆ,ಮನೆಯ ಹೊರಗಡೆ ಹೋದರೆ ಖುಷಿ, ಮನೆಯ ಒಳಗೆ ಬಂದರೆ ದುಃಖ,ಕಷ್ಟ,ಜಗಳ ಮನಸ್ಸಿಗೆ ನೋವುಂಟಾಗುವುದು ಇಂತಹ ಕಷ್ಟಗಳನ್ನು ಎದುರಿಸುತ್ತಿರುವವರು, ಇದು ಕೂಡ ಕಣ್ಣಿನ ದೃಷ್ಟಿಯಿಂದಲೇ.ಈ ದೃಷ್ಟಿ ಎಂಥದ್ದು ಎಂದರೆ ದೊಡ್ಡ ಬಂಡೆಯ ಕಲ್ಲನ್ನು ಕೂಡ ಕರಗಿಸುವ ಶಕ್ತಿ ಇರುತ್ತದೆ. ಈ ಲವಣದಿಂದ ಪ್ರತೀ 15 ದಿನಕ್ಕೊಮೆ ದೃಷ್ಟಿಯನ್ನು ನಿವಾಳಿಸಿ ತೆಗೆದರೆ ನಿವಾರಣೆಯಾಗುತ್ತದೆ.

ದೃಷ್ಟಿಯನ್ನು ನಿವಾರಿಸುವ ಶಕ್ತಿ ವಿಶೇಷವಾಗಿ ಚಂದ್ರನಲ್ಲಿದೆ.ಪೌರ್ಣಮಿಯಂದು ದೃಷ್ಟಿಯನ್ನು ತೆಗೆದರೆ ಒಳ್ಳೆಯದು.ಈ ಸೈ0ದವ ಲವಣ ಬಹಳ ಉಪಯೋಗಕಾರಿ ಮನುಷ್ಯರ ದೃಷ್ಟಿ ಅಷ್ಟೇ ಅಲ್ಲ ಪಕ್ಷಿ,ಕಾಗೆ,ಪ್ರಾಣಿಗಳು,ಭುಚರ ದೃಷ್ಟಿ ಗಳು ಮನೆಯ ಮೇಲೆ,ವಾಹನಗಳ ಮೇಲೆ ಬಿದ್ದರೆ ಅಥವಾ ಸರ್ಪಗಳು ಪದೇ ಪದೇ ವಾಹನಗಳಿಗೆ ಎದುರಾಗಿ ಸಿಕ್ಕಿದರೆ ಕೆಂಪು ಬಟ್ಟೆಯೊಳಗೆ ಕಟ್ಟಿ ಮನೆಯ ಬಾಗಿಲ ಮೇಲೆ ಅಥವಾ ವಾಹನಗಳಿಗೆ ಎದುರಿನಲ್ಲಿ ಕಟ್ಟುವುದರಿಂದ ದೃಷ್ಟಿ ಹಾಕುವವರಿಗೆ ತಿರುಗಿಸಿ ದೃಷ್ಟಿ ಹೊಡೆಯುತ್ತದೆ .ನಿಮ್ಮ ಮನೆಯಲ್ಲಿ ಅಕ್ಕ ಪಕ್ಕ ತೆಂಗಿನ ಮರಗಳಿದ್ದು ಪೂರ್ತಿಯಾಗಿ ಕಾಯಿ ಹಿಡಿದುಕೊಂಡು ಇದ್ದರೆ ಸಾಮಾನ್ಯವಾಗಿ ಜನರ ದೃಷ್ಟಿ ಬಿದ್ದೆ ಬೀಳುತ್ತದೆ.ತೆಂಗಿನ ಮರಕ್ಕೂ ಕೂಡ ಒಂದು ಬಟ್ಟೆಯಲ್ಲಿ ಸೈ0ದವ ಲವಣ ವನ್ನು ಕಟ್ಟಿ ಮರಕ್ಕೆ ಕಟ್ಟಿದರೆ ಯಾರ ದೃಷ್ಟಿಯು ತಾಗುವುದಿಲ್ಲ. ಯಾವುದೇ ಮರಕ್ಕಾಗಲಿ ಗಿಡಕ್ಕಾಗಲಿ ಈ ರೀತಿ ಮಾಡಿದರೆ ಕಣ್ಣ ದೃಷ್ಟಿ ತಾಗಲುವುದಿಲ್ಲ.

ಭಾನುವಾರ ಅದಿವಾರ ಆದ್ದರಿಂದ ಭಾನುವಾರ ಹಾಗೂ ಗುರುವಾರದ ದಿನ ಮತ್ತು ಪೌರ್ಣಮಿಯಂದು ದೃಷ್ಟಿದೋಷ ನಿವಾರಣೆಗೆ ಒಳ್ಳೆಯ ದಿನ.ಸೈ0ದವ ಲವಣವನ್ನು ನೀರಿನಲ್ಲಿ ಸ್ವಲ್ಪ ಕರಗಿಸಿ ಮತ್ತು ಎದ್ದುoಬೆ ಗಿಡದ ರಸಕ್ಕೆ ಸ್ವಲ್ಪವನ್ನು ಸೇರಿಸಿ ಪ್ರತಿದಿನ ಒಂದು ಅಥವಾ ಎರಡು ಚಮಚದಷ್ಟು ಕುಡಿಯುತ್ತಿದ್ದರೆ ಎಂತಹ ವಶೀಕರಣದ ಮದ್ದಾಗಿದ್ದರು ವಾಂತಿ ಅಥವಾ ಬೇದಿಯ ಮೂಲಕ ದೇಹದಿಂದ ಹೊರಗೆ ಬರುತ್ತದೆ.ಎಂತಹ ದೃಷ್ಟಿ ಯಾಗಿದ್ದರು,ವಶೀಕರಣದ ವಾಗಿದ್ದರು,ಪರಿಹಾರ ಮಾಡುವ ಸಾಮರ್ಥ್ಯ ಈ ಸೈ0ದವ ಲವಣಕ್ಕೆ ಇದೆ.ಇದರಿಂದ ಎಲ್ಲರಿಗೂ ಅನುಕೂಲ ಉಂಟಾಗುತ್ತದೆ.ಮನುಷ್ಯರಿಗೆ ಅಷ್ಟೇ ಅಲ್ಲದೆ ನೀವು ಮನೆಯಲ್ಲಿ ಯಾವುದಾದರೂ ಪ್ರಾಣಿಗಳನ್ನು ಸಾಕಿದ್ದಲ್ಲಿ ಉದಾಹರಣೆಗೆ.. ಬೆಕ್ಕು,ನಾಯಿ,ಹಸು,ಕರು,ಎಮ್ಮೆ, ಹೀಗೆ ಯಾವುದೇ ಪ್ರಾಣಿಗೂ ಕೂಡ ದೃಷ್ಟಿಯಾಗಿದ್ದಲಿ ಇದರಿಂದ ದೃಷ್ಟಿ ತೆಗೆದರೆ ನಿವಾರಣೆಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top