ಸಮಾಚಾರ

ದೇಹದಾನ ಮಾಡಿ ಇತರರಿಗೂ ಮಾದರಿಯಾದ ಶಿವರಾಜ್‌ ಕುಮಾರ್ ಮತ್ತು ಸಹೋದರರು.

ನೇತ್ರದಾನ ಮಾಡಿ ಮಾದರಿಯಾಗಿದ್ದ ಡಾ.ರಾಜಕುಮಾರ್ ಮಕ್ಕಳು ಕೂಡ ಅವರ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ತಮ್ಮ ಸಹೋದರರು ಸೇರಿದಂತೆ ತಾವು ಕೂಡ ದೇಹದಾನ ಮಾಡುವುದಾಗಿ ಹೇಳಿದ್ದಾರೆ ಶಿವರಾಜ್‌ ಕುಮಾರ್‌. ಹೌದು, ಸದ್ಯ ಕವಚ ಸಿನಿಮಾದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಈ ಚಿತ್ರದ ಈ ಸಿನಿಮಾದ ಟೀಸರ್‌ ರಿಲೀಸ್‌ ವೇಳೆ, ಇಂಥದ್ದೊಂದು ಮಾದರಿಯ ಕಾರ್ಯಕ್ಕೆ ಅವರು ಕೈ ಹಾಕಿದ್ದಾರೆ.

ಡಾ ರಾಜ್ ಕುಮಾರ್ ಕಣ್ಣುಗಳನ್ನು ದಾನ ಮಾಡಿದ ನಂತರ ಅವರ ಅಭಿಮಾನಿಗಳು ಸಹ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಈಗ ಕಣ್ಣು ದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿಯೇ ಅವರ ಪುತ್ರರಾದ ಡಾ ಶಿವ ರಾಜ್ ಕುಮಾರ್ ದೇಹದಾನ ಮಾಡಲು ನಿರ್ಧರಿಸಿದ್ದಾರೆ.

ಕವಚ ಸಿನಿಮಾದಲ್ಲಿ ಶಿವಣ್ಣ ಕುರುಡನ ಪಾತ್ರವನ್ನು ಮಾಡಿದ್ದಾರೆ ಹಾಗಾಗಿಯೇ ಅನೇಕ ಅಂಧ ಮಕ್ಕಳ ಸಮ್ಮುಖದಲ್ಲಿ ಟೀಸರ್ ಬಿಡುಗಡೆ ಮಾಡಲಾಯಿತು. ಈ ವೇಳೆ ದೇಹದಾನ ಮಾಡುವ ಬಗ್ಗೆ ಮಾತನಾಡಿದ ಶಿವಣ್ಣ “ಅಪ್ಪಾಜಿ ನೇತ್ರದಾನ ಮಾಡಿ, ಇತರರಿಗೆ ಬೆಳಕಾಗಿದ್ದಾರೆ. ಹಾಗಾಗಿಯೇ ನಾವು ಕೂಡ ದೇಹದಾನಕ್ಕೆ ಮುಂದಾಗಿದ್ದೇವೆ. ನಾವು ಸತ್ತ ನಂತರ ನಮ್ಮ ದೇಹವೂ ಕೂಡ ಇತರರಿಗೆ ಉಪಯೋಗಕ್ಕೆ ಬರಲಿ ಎಂಬುದು ನಮ್ಮ ಆಸೆಯಾಗಿದೆ. ಹಾಗಾಗಿಯೇ ಇಂಥದ್ದೊಂದು ನಿರ್ಧಾರಕ್ಕೆ ನಾವು ಬಂದಿದ್ದೇವೆ’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಅಣ್ಣಾವ್ರ ಮಕ್ಕಳ ಈ ನಿರ್ಧಾರಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೂಡ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top