ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಲಕ್ಕಿ ಯಾವೆಲ್ಲ ದೋಷ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುತ್ತಂತೆ ಗೊತ್ತಾ

ಜ್ಯೋತಿಷ್ಯ ಶಾಸ್ತ್ರದಲ್ಲಿ ಏಲಕ್ಕಿಯಿಂದ ಯಾವೆಲ್ಲಾ ಪರಿಹಾರಗಳನ್ನು ಮಾಡಿಕೊಳ್ಳಬಹುದು ಎಂದು ನಿಮಗೆ ಗೊತ್ತೇ ?
ಭಾರತದಲ್ಲಿ ಏಲಕ್ಕಿಯ ಪ್ರಯೋಗ ತುಂಬಾ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿದೆ. ಅದು ಪೂಜಾ, ಮಸಾಲೆ ಮತ್ತು ಸಿಹಿ ಪದಾರ್ಥಗಳನ್ನು ತಯಾರು ಮಾಡುವುದಕ್ಕೆ ಸಹ ಇವೆಲ್ಲದರಲ್ಲೂ ಏಲಕ್ಕಿಯನ್ನು ಬಳಸಲಾಗುತ್ತದೆ.ಏಲಕ್ಕಿಯನ್ನು ಹಾಕಿ ಟೀ ತಯಾರು ಮಾಡುವುದರಿಂದ ಟೀ ಸ್ವಾದ ಮತ್ತು ರುಚಿ ಹೆಚ್ಚಾಗುತ್ತದೆ.

 

 

 

ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲಕ್ಕಿಯಿಂದ ಮಾಡಬಹುದಾದ ಸರಳ ಉಪಾಯಗಳನ್ನು ನಾವು ಇಂದು ತಿಳಿದುಕೊಳ್ಳೋಣ. ಅವು ಸಿರಿ, ಸುಖ ,ಸಂಪತ್ತನ್ನು ಹೆಚ್ಚಿಸುವುದರಲ್ಲಿ ಸಹಾಯವಾಗುತ್ತದೆ.ಒಂದು ತುಪ್ಪದ ದೀಪವನ್ನು ಹಚ್ಚಿ ಅದರೊಳಗೆ ಒಂದು ಏಲಕ್ಕಿಯನ್ನು ಹಾಕಿ ಅದನ್ನು ಲಕ್ಷ್ಮಿ ದೇವಿಯ ಮುಂದೆ ಪ್ರಜ್ವಲಿಸಬೇಕು. ಹೀಗೆ ಮಾಡುವುದರಿಂದ ಧನ ಪ್ರಾಪ್ತಿಯಾಗಿ ಲಕ್ಷ್ಮಿ ದೇವಿಯೂ ಕೂಡ ಪ್ರಸನ್ನಗೊಳ್ಳುತ್ತಾಳೆ.
ನಿಮ್ಮ ವಿವಾಹವು ತುಂಬಾ ತಡ ವಾಗುತ್ತಿದ್ದರೆ ಈ ಪ್ರಯೋಗವನ್ನು ನೀವು ಗುರುವಾರದ ದಿನ ಮಾಡಬೇಕು. ದೇವಿಯ ದೇವಾಲಯದಲ್ಲಿ ಗುರುವಾರದ ದಿನ ಸಂಜೆ 2 ಏಳಕ್ಕಿಯ ಜೊತೆಗೆ, ಐದು ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತೆಗೆದುಕೊಂಡು ಹೋಗಿ ಒಂದು ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚಿ ,ಶುದ್ಧ ಜಾಲವನ್ನು ಸಹ ಅರ್ಪಿಸಬೇಕು. ನೀವು ಸ್ತ್ರೀಯಾಗಿದ್ದರೆ ಗುರುವಾರದ ದಿನ ಸಂಜೆ ಮಾಡಬೇಕು. ನೀವು ಪುರುಷರಾಗಿದ್ದರೆ ಶುಕ್ರವಾರದ ಸಂಜೆಯ ಸಮಯದಲ್ಲಿ ಮಾಡಬೇಕು. ಹೀಗೆ ಮಾಡುವುದರಿಂದ ಬೇಗನೆ ನಿಮ್ಮ ವಿವಾಹ ನೆರವೇರುತ್ತದೆ.

ನೀವು ತುಂಬಾ ಶ್ರಮ ಪಟ್ಟರೂ ಸಹ ನಿಮಗೆ ಉತ್ತಮವಾದ ಕೆಲಸ ಮತ್ತು ಉದ್ಯೋಗದಲ್ಲಿ ಬಡ್ತಿ ಮತ್ತು ಧನ ಪ್ರಾಪ್ತಿಯಾಗುತ್ತಿಲ್ಲ ಎಂದರೆ….., ಇಂದಿನಿಂದ ಪ್ರತಿದಿನ ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಒಂದು ಏಲಕ್ಕಿಯನ್ನು ಕಟ್ಟಿ ಇಟ್ಟುಕೊಂಡು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಮತ್ತು ಬೆಳಗ್ಗೆ ಅದನ್ನು ಯಾವುದಾದರೂ ಬಡವರಿಗೆ ಅಥವಾ ಹೊರಗಡೆ ವ್ಯಕ್ತಿಗಳಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿಯಾಗುತ್ತದೆ.

ನಿಮ್ಮ ಜಾತಕದಲ್ಲಿ ಶುಕ್ರ ನೀಚ ಸ್ಥಾನದಲ್ಲಿದ್ದರೆ ಅದರ ಪರಿಣಾಮ ಕೆಟ್ಟದಾಗಿದ್ದರೆ, ನೀವು ಒಂದು ಲೋಟ ನೀರನ್ನು ತೆಗೆದುಕೊಂಡು 2 ಏಲಕ್ಕಿಯನ್ನು ಅದರೊಳಗೆ ಹಾಕಿ, ಅರ್ಧ ಲೋಟ ನೀರು ಆಗುವವರೆಗೆ ಅದನ್ನು ಚೆನ್ನಾಗಿ ಆ ನೀರನ್ನು ಕುದಿಸಿ, ನಂತರ ಆ ನೀರನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಹಾಕಿಕೊಂಡು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ವಾಹನಕ್ಕೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆಗಳಿದ್ದರೆ ನಿವಾರಣೆಯಾಗುತ್ತವೆ ಅಥವಾ ವಾಹನದ ವಿಷಯಗಳಲ್ಲಿ ಲಾಭವಾಗುತ್ತದೆ.

 

 

 

ನೀವು ಸುಂದರವಾದ ಪತ್ನಿಯನ್ನು ಪಡೆಯಬೇಕು ಎಂದಿದ್ದರೆ, ಪ್ರತಿ ಗುರುವಾರ 5 ಏಲಕ್ಕಿಯನ್ನು ಮತ್ತು ಹಳದಿ ಬಣ್ಣದ ವಸ್ತ್ರದ ಜೊತೆಗೆ ಯಾವುದಾದರೂ ವ್ಯಕ್ತಿಗೆ ದಾನ ಮಾಡಿ. ಈ ಉಪಾಯವನ್ನು ನೀವು ಐದು ಗುರುವಾರದ ದಿನ ಮಾಡಬೇಕು. ಈ ಉಪಾಯದಿಂದ ಅವಶ್ಯವಾಗಿ ನಿಮಗೆ ಲಾಭವಾಗುತ್ತದೆ.ಪತಿಯ ಪ್ರೀತಿ ಪತ್ನಿಗೆ ಕಡಿಮೆಯಾಗಿದೆ ಎಂದು ಅನಿಸಿದರೆ ಅಥವಾ ನಿಮ್ಮ ಪತಿ ನಿಮ್ಮ ಕಡೆ ಕಡೆಗೆ ಗಮನ ಹರಿಸುತ್ತಿಲ್ಲ ಎಂದಾದರೆ…. ಶ್ರೀಕೃಷ್ಣನ ನಾಮಸ್ಮರಣೆ ಮಾಡಿ ಶುಕ್ರವಾರದ ದಿನ 3 ಏಲಕ್ಕಿಯನ್ನು ನಿಮ್ಮ ಶರೀರಕ್ಕೆ ಸ್ಪರ್ಶಿಸಿ ನಂತರ ನಿಮ್ಮ ಕರ್ಚಿಫ್ ಅಥವಾ ಕರ ವಸ್ತ್ರದಲ್ಲಿ ಏಲಕ್ಕಿಯನ್ನು ಕಟ್ಟಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಶನಿವಾರದ ದಿನ ಬೆಳಗ್ಗೆ ಅದೇ ಏಲಕ್ಕಿಯನ್ನು ಪುಡಿ ಮಾಡಿ ಯಾವುದಾದರೂ ಊಟದಲ್ಲಿ ಹಾಕಿ ನಿಮ್ಮ ಪತಿಗೆ ಸೇವನೆ ಮಾಡಲು ಕೊಡಿ. ಹೀಗೆ ಮಾಡುವುದರಿಂದ ನಿಮಗೆ ಲಾಭವಾಗುತ್ತದೆ. ಗಮನದಲ್ಲಿರಿಸಿಕೊಳ್ಳಿ ಈ ರೀತಿ ನೀವು ಮೂರು ಶುಕ್ರವಾರ ಮಾಡಬೇಕು ಅಥವಾ ನೀವು ರವಿವಾರದ ದಿನ ಬೇಕಾದರೂ ಈ ಉಪಾಯವನ್ನು ಮಾಡಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top