ಸಮಾಚಾರ

ಟಿಪ್ಪು ಜಯಂತಿಯಿಂದ ಸಿಎಂ HDK ದೂರ: ಜಮೀರ್​ ಅಹ್ಮದ್​ ಹೇಳಿದ್ದಿಷ್ಟು.

ಭಾರೀ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದು, ಇದೀಗ ಆಚರಣೆಗೂ ಸರ್ಕಾರ ರೆಡಿಯಾಗಿದೆ. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕುರಿತ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆ ಇದೆ.

ನಾಳೆ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಸರು ಪ್ರಕಟಿಸಲಾಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಲ್ಪ ಸಂಖ್ಯಾತ ಸಚಿವ ಜಮೀರ್​ ಅಹ್ಮದ್​ ಖಾನ್​, “ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ಗೈರಾಗುತ್ತಿಲ್ಲ. ಕಾರ್ಯಕ್ರಮ ಆಯೋಜನೆಗೆ ಮುನ್ನವೇ ಸಿಎಂ ಈ ಬಗ್ಗೆ ತಿಳಿಸಿದ್ದರು. ಟಿಪ್ಪು ಜಯಂತಿಯಂದೇ ಸಿಎಂಗೆ ಚಿಕಿತ್ಸೆ ನಿಗದಿಯಾಗಿದ್ದು, ಆಮಂತ್ರಣದಲ್ಲಿ ತಮ್ಮ ಹೆಸರನ್ನು ಹಾಕಬೇಡಿ ಎಂದಿದ್ದರು.. ಆದರೆ ಅರೋಗ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಗೈರಾಗುವ ಪರಿಸ್ಥಿತಿ ಬಂದಿದೆ. ನಮಗೆ ಅವರ ಆರೋಗ್ಯವೇ ಮುಖ್ಯ. ನನ್ನ ಮತ್ತು ಕುಮಾರಸ್ವಾಮಿಯವರ ಸಂಬಂಧ ಚನ್ನಾಗಿಯೇ ಇದೆ.” ಎಂದು ಹೇಳಿದ್ದಾರೆ.

” ಪ್ರತಿ ವರ್ಷವೂ ಜೆಡಿಎಸ್​ ಕಚೇರಿಯಲ್ಲಿ ನಾವು ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಎಲ್ಲರಿಗೂ ಕುಮಾರಸ್ವಾಮಿ ಆರೋಗ್ಯ ಮುಖ್ಯ. ಈ ಹಿನ್ನಲೆಯಲ್ಲಿ ಸಿಎಂ ಅವರನ್ನು ಒತ್ತಾಯಿಸಲು ಹೋಗಿಲ್ಲ.” ಎಂದು ಜಮೀರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top