ಮನೋರಂಜನೆ

ಸಕತ್ ಇಂಟೆರೆಸ್ಟಿಂಗ್ ಆಗಿದೆ ರಾಜ್ ಮೊಮ್ಮಗನ ‘ಅನಂತು V/S ನುಸ್ರುತ್’ ಟ್ರೈಲರ್.

ಚಿತ್ರರಂಗದಲ್ಲಿ ನೆಲೆಯೂರಲು ಸತತ ಪ್ರಯತ್ನ ಪಡುತ್ತಿರುವ ಡಾ.ರಾಜ್ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಅವರ ಮೊದಲೆರಡು ಚಿತ್ರಗಳು ಗೆಲ್ಲಬಹುದು ಅನ್ನೋ ನಂಬಿಕೆ ಇತ್ತು. ಆದರೆ ಕೆಲವೊಂದು ತಪ್ಪಿನಿಂದಾಗಿ ಆ ಚಿತ್ರ ಬಿನಯ್ ಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವನ್ನು ತಂದು ಕೊಡುವಲ್ಲಿ ವಿಫಲವಾಯಿತು. ಇದೀಗ ಅವರ ಮೂರನೇ ಚಿತ್ರವಾದ ಅನಂತು vs ನುಶ್ರುತ್ ಚಿತ್ರ ಮೇಲೂ ಕೂಡ ನಿರೀಕ್ಷೆಗಳು ಬೆಟ್ಟಮಾಡಿಕೊಂಡಿದ್ದು ಚಿತ್ರದ ಟ್ರೈಲರ್ ಆ ನಿರೀಕ್ಷೆಯನ್ನು ಹೆಚ್ಚಿಸಿದೆ.

ವಿನಯ್ ಅಭಿನಯದ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ, ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ವಿನಯ್ , ಸುಧೀರ್ ಶಾನುಭೋಗ್ ನಿರ್ದೇಶನದ ಚೊಚ್ಚಲ ಚಿತ್ರ ಅನಂತು v/s ನುಸ್ರತ್ ,ಟೀಸರ್ ವೀಕ್ಷಕರ ಗಮನ ಸೆಳೆಯುತ್ತಿದೆ.

 

 

ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದು, ಚಿತ್ರದ ಟ್ರೈಲರ್ ಕೂಡಾ ಅನಂತು ಮತ್ತು ನುಸ್ರತ್ ನಡುವಿನ ಪ್ರೇಮ ಕಥೆಯನ್ನು ಹೇಳಹೊರಟಿದೆ , ನಾಯಕಿ ಲತಾ ಹೆಗ್ಗಡೆ ಮುದ್ದುಮುದ್ದಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ , ಸುನಾದ್ ಗೌತಮ್ ಸಂಗೀತ ನಿರ್ದೇಶನ ಮಾಡಿದ್ದು ರವಿಶಂಕರ್, ಗುರು ಪ್ರಸಾದ್, ಭಗವಾನ್ ಮುಂತಾದವರ ತಾರಾಗಣವಿದೆ.

‘ಅನಂತು V/S ನುಸ್ರತ್’ ಚಿತ್ರ ಬಿಡುಗಡೆಗೆ ಬಹುತೇಕ ತಯಾರಾಗಿದ್ದು, ಡಿಸೆಂಬರ್ ತಿಂಗಳ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ರಾಜ್ ಕುಟುಂಬದ ಮೂರನೇ ತಲೆಮಾರಿಗೆ ಇದು ಮೊದಲ ದೊಡ್ಡ ಹಿಟ್ ಆಗುತ್ತಾ ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top