ಭವಿಷ್ಯ

ಕಾರ್ತಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡಿ ಕಾರ್ತಿಕ ಸೋಮವಾರದ ದಿನ ಈ ಪರಿಹಾರ ಮಾಡಿದ್ರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಮಾಯವಾಗುತ್ತೆ

ಕಾರ್ತಿಕ ಮಾಸದಲ್ಲಿ ಮಾಡಬೇಕಾದ ಕೆಲಸಗಳು ಮತ್ತು ಸೋಮವಾರ ಉಪ್ಪಿನಿಂದ ಈ ಪರಿಹಾರವನ್ನು ಮಾಡಿದರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ .
ಇಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ಮಾಸದಲ್ಲಿ ದೈವಿತತ್ವ ಬಲ ಪಡೆಯುತ್ತದೆ. ದನ ಹಾಗೂ ಧರ್ಮಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತವೆ. ಈ ತಿಂಗಳಲ್ಲಿ ದೈವಿರೂಪವಾದ ತುಳಸಿಯನ್ನು ಬೆಳೆಸಿ ಮದುವೆ ಮಾಡಲಾಗುತ್ತದೆ. ಅಂದರೆ ತುಳಸಿ ವಿವಾಹವನ್ನು ಕೂಡ ಮಾಡಲಾಗುತ್ತದೆ. ದೀಪದಾನ ಮಾಡುವುದರಿಂದ ಸಾಕಷ್ಟು ಲಾಭವಿದೆ ಎಂದು ನಂಬಲಾಗಿದೆ.ಕಾರ್ತಿಕ ಮಾಸದಲ್ಲಿ ಹಣ್ಣುಗಳ ಸೇವನೆಯನ್ನು ಹೆಚ್ಚಾಗಿ ಮಾಡಬೇಕು. ದ್ವಿದಳ ಧಾನ್ಯಗಳ ಸೇವನೆ ನಿಷಿದ್ಧ. ಸೂರ್ಯನ ಕಿರಣಗಳ ಕೆಳಗೆ ಕುಳಿತು ಕೊಳ್ಳುವುದು ಶುಭಫಲ ನೀಡುತ್ತದೆ. ಕಾರ್ತಿಕ ಮಾಸದಲ್ಲಿ ಮಧ್ಯಾಹ್ನದ ಸಮಯದಲ್ಲಿ ಮಲಗಬಾರದು. ಶ್ರೀ ಹರಿಗೆ ಪ್ರಿಯವಾದ ಮಾಸವಿದು.ಕಾರ್ತಿಕ ಮಾಸದಲ್ಲಿ ಪ್ರತಿದಿನ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪೂಜೆಯನ್ನು ತಪ್ಪದೇ ಮಾಡಿ. ಗುಲಾಬಿ ಬಣ್ಣದ ಬಟ್ಟೆ ಧರಿಸಿ ವ್ರತವನ್ನು ಮಾಡಿ.ತುಳಸಿ ಗಿಡದ ಬಳಿ ಸಂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು.ಆದರೆ ಭಾನುವಾರದ ದಿನ ಮಾತ್ರ ದೀಪ ಹಚ್ಚಬಾರದು.

 

 

 

ಇಂತಹ ಪವಿತ್ರವಾದ ಕಾರ್ತಿಕ ಮಾಸದಲ್ಲಿ ಈ ಉಪಾಯವನ್ನು ಮಾಡಿ…ಪ್ರಸ್ತುತ ಕಾಲದಲ್ಲಿ ಪ್ರತಿಯೊಬ್ಬರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮನೆಯಲ್ಲಿ ಶಾಂತಿ ಇಲ್ಲದಿರುವುದು, ದಂಪತಿಗಳ ನಡುವೆ ಮನಸ್ತಾಪಗಳು, ಆರ್ಥಿಕವಾಗಿ ಸಮಸ್ಯೆಗಳು, ಅನಾರೋಗ್ಯ ಸಮಸ್ಯೆಗಳು ಹೀಗೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.ಈ ವಿಧವಾಗಿ ಸಮಸ್ಯೆಗಳನ್ನು ಅನುಭವಿಸುವವರು ಸೋಮವಾರದ ದಿನ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ನಿಮಗೆ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಸೋಮವಾರದ ದಿನ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನವನ್ನು ಮಾಡಿ ನಿಮ್ಮ ಮನೆಯ ಹತ್ತಿರ ಇರುವ ಶಿವನ ದೇವಸ್ಥಾನಕ್ಕೆ ಹೋಗಬೇಕು.ಹೀಗೆ ಹೋಗುವಾಗ ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ಸಹ ತೆಗೆದುಕೊಂಡು ಹೋಗಬೇಕು. ಅಲ್ಲಿ ನಲ್ಲಿಯ ಹತ್ತಿರ ಹೋಗಿ ಆ ನಲ್ಲಿಯನ್ನು ತಿರುಗಿಸಿ ಕೈ ಮುಷ್ಠಿಯಲ್ಲಿರುವ ಕಲ್ಲುಪ್ಪನ್ನು ನಲ್ಲಿಯ ಕೆಳಗೆ ಹಿಡಿಯಬೇಕು.ಈ ಕ್ರಿಯೆಯನ್ನು ಬೆಳಗಿನ ಜಾವ ಆರು ಗಂಟೆಯಿಂದ ಏಳು ಗಂಟೆಯ ಮಧ್ಯದಲ್ಲಿ ಮಾಡಬೇಕು. ಏಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿ ಚಂದ್ರನ ಪ್ರಭಾವ ಹೆಚ್ಚಾಗಿರುತ್ತದೆ.ಚಂದ್ರನು ಮನಃಶಾಂತಿಯನ್ನು ನೀಡುವುದರಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸಹ ದೊರೆಯುತ್ತದೆ. ಆದ್ದರಿಂದ ಬೆಳಗಿನ ಜಾವ ಆರು ಗಂಟೆಯಿಂದ ಏಳು ಗಂಟೆಯ ಮಧ್ಯಕಾಲದಲ್ಲಿ ಉಪಾಯವನ್ನು ಮಾಡಬೇಕು.ಹೀಗೆ ಮಾಡುವಾಗ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಎಂದು ಸಂಕಲ್ಪ ಮಾಡಿ ಕೊಳ್ಳಬೇಕು.ಉಪ್ಪಿನ ಮೇಲೆ ನೀರು ಬಿದ್ದಾಗ ಹೇಗೆ ಉಪ್ಪು ಬೇಗ ಕರಗಿ ಹೋಗುತ್ತದೆ. ಹಾಗೆಯೇ ಅದೇ ರೀತಿಯಲ್ಲಿ ಶೀಘ್ರವಾಗಿ ನಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತಾ ಹೋಗುತ್ತದೆ.ಹೀಗೆ ಈ ಕ್ರಿಯೆಯನ್ನು ಪ್ರತಿ ಸೋಮವಾರದ ದಿನ ಮಾಡಿದರೆ ಒಳ್ಳೆಯದು. ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗಿ ನೀವು ಸಂತೋಷದಿಂದ ಇರುತ್ತೀರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top