ಮನೋರಂಜನೆ

ಐದು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ ರಕ್ಷಿತ್ ಶೆಟ್ಟಿ- ಪುಣ್ಯಕೋಟಿ ಚಿತ್ರಕ್ಕೆ 100 ಕೋಟಿ ಬಜೆಟ್.

ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಯುವ ಪೀಳಿಗೆಯಲ್ಲಿ ಅತ್ಯಂತ ಪ್ರಸಿದ್ದಿಯಾಗಿರುವ ಕನ್ನಡ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು ಗಾಂಧಿನರದ ಬಹು ಬೇಡಿಕೆ ನಟನಾಗಿ ಪರಿಣಮಿಸುತ್ತಿದ್ದಾರೆ ರಕ್ಷಿತ್. ಅವರ ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷಗಳೇ ಕಳೆದರೂ ರಕ್ಷಿತ್‌ ಶೆಟ್ಟಿ ಅಭಿನಯದ ಯಾವೊಂದು ಚಿತ್ರ ಕೂಡ ತೆರೆ ಕಂಡಿಲ್ಲ. ತೆರೆ ಕಾಣುವುದಿರಲಿ ಯಾವ ಚಿತ್ರ ಕೂಡ ಶೂಟಿಂಗ್ ಕೂಡ ಮೊಗಿದಿಲ್ಲ.. ಸದ್ಯ ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಇದೀಗ ನಾಲ್ಕು ವರ್ಷಗಳ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ.

ಉಳಿದವರು ಕಂಡಂತೆ ಎಂಬ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕ ಮತ್ತು ನಟನಾಗಿ ಹೊಸ ಪ್ರೇಕ್ಷಕ ವರ್ಗವನ್ನೇ ಸೃಷ್ಟಿಸಿ ನೆಲೆ ಕಂಡುಕೊಂಡ ರಕ್ಷಿತ್ ಶೆಟ್ಟಿ ಇದೀಗ ಎರಡನೇ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ, ಅದು ಪುಣ್ಯಕೋಟಿ… ಈ ಚಿತ್ರವನ್ನು ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಬಜೆಟ್‌ನ ಸಿನಿಮಾ ರೀತಿಯಲ್ಲಿ ಮೇಕಿಂಗ್ ಮಾಡುವುದಕ್ಕೆ ಚಿತ್ರತಂಡ ಹೊರಟಿದೆ. ಈಗಾಗಲೇ ಕತೆ ಸಿದ್ಧವಾಗಿದ್ದು, ರಕ್ಷಿತ್ ಶೆಟ್ಟಿ ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಮಾರು 300 ವರ್ಷಗಳ ಹಿಂದಿನ ಸ್ಥಿತಿಗತಿ, ವಾತಾವರಣವನ್ನು ನೆನಪಿಸುವ ಚಿತ್ರವಾಗಿರುತ್ತದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಆಪ್ತ ಗೆಳೆಯ ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಗೆಳೆಯನಿಗೆ ಶುಭಾಶಯ ಕೋರಿದ್ದಾರೆ.. ಪುಣ್ಯಕೋಟಿಯ ಕಥೆಯನ್ನು ಪ್ರೀತಿಯ ಗೆಳೆಯ ರಕ್ಷಿತ್ ಶೆಟ್ಟಿ ಮತ್ತೆ ಹೇಳಲು ಹೊರಟಿದ್ದಾನೆ. ಬೆಸ್ಟ್‌ ಆಫ್ ಲಕ್ ಮಗಾ, ಹೊಸ ಪಯಣದ ಆರಂಭ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಚಿತ್ರದ ಒಟ್ಟು 100 ಕೋಟಿ ಎಂದು ಅಂದಾಜಿಸಲಾಗಿದ್ದು ಈ ನಿಟ್ಟಿನಲ್ಲಿ ನಟ ರಕ್ಷಿತ್ ಶೆಟ್ಟಿ ಕೂಡ ತಯಾರಿ ನಡೆಸಿಕೊಂಡಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top