ಸಮಾಚಾರ

ಹ್ಯಾಟ್ರಿಕ್ ಹೀರೊ ಶಿವಣ್ಣನ ಹೊಸ ಚಿತ್ರಕ್ಕೆ ಸಿಕ್ತು ಅದ್ದೂರಿ ಚಾಲನೆ.

ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ಯಾಕಂದ್ರೆ ಶಿವಣ್ಣನ ಕೈಯಲ್ಲಿರುವ ಸಿನಿಮಾಗಳನ್ನು ನೋಡಿದರೆ ಎಂಥವರೂ ಕಂಗಾಲಾಗುತ್ತಾರೆ. ಸಧ್ಯ ಶಿವಣ್ಣನ ರುಸ್ತುಂ, ಕವಚ, ದ್ರೋಣ ಚಿತ್ರಗಳೂ ಒಂದಷ್ಟು ಭಾಗಗಳ ಚಿತ್ರೀಕರಣವನ್ನು ಮುಗಿಸಿಕೊಂಡಿವೆ. ಈಗಿರುವಾಗ ಮತ್ತೊಂದು ಸಿನಿಮಾದಲ್ಲಿ ಶಿವಣ್ಣ ತೊಡಗಿಸಿಕೊಳ್ಳುತ್ತಿದ್ದಾರೆ.

ಪಿ.ವಾಸು ನಿರ್ದೇಶನದಲ್ಲಿ ಮತ್ತು ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತಲ್ಲಾ ಆ ಸಿನಿಮಾ ಇಂದು ಸೆಟ್ಟೇರಿದೆ..ಚಿತ್ರದ ಮುಹೂರ್ತ ಹೆಚ್.ಎಸ್.ಆರ್ ಬಡಾವಣೆಯ ಶ್ರೀಬಸವೇಶ್ವರ ಗಾಯತ್ರಿ ದೇವಿ ದೇವಾಲಯದಲ್ಲಿ ನೆರವೇರಿತು.

 

 

ದ್ವಾರಕೀಶ್‌ ಬ್ಯಾನರ್‌ನಲ್ಲಿ ಯೋಗಿ ದ್ವಾರಕೀಶ್‌ ನಿರ್ಮಾಣದಲ್ಲಿ ಸೆಟ್ಟೇರ್ತಿರೋ ದ್ವಾರಕೀಶ್‌ ಬ್ಯಾನರ್‌ನ 52ನೇ ಚಿತ್ರದಲ್ಲಿ ರಚಿತಾ ರಾಮ್ ಅವರು ಶಿವಣ್ಣನಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಅನಂತನಾಗ್, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ಮುಂತಾದ ಪ್ರಮುಖರು ನಟಿಸುತ್ತಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಮಾಡುತ್ತಿದ್ದು ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಉಳಿದಂತೆ ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

ಡಿಸೆಂಬರ್ 10 ರಿಂದ ಶೂಟಿಂಗ್ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು, ಆಗಸ್ಟ್ 9 2019 ರಂದು ವರಮಹಾಲಕ್ಷ್ಮಿ ಹಬ್ಬವಿದ್ದು ಅಂದೇ ಸಿನಿಮಾ ರೀಲಿಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.. ಅಂದಹಾಗೆ ಈ ಚಿತ್ರಕ್ಕೆ ‘ಆನಂದ್’ ಎಂದು ಟೈಟಲ್ ಇಡಲು ಚಿಂತಿಸಲಾಗುತ್ತಿದ್ದು ಇನ್ನಷ್ಟೇ ಫೈನಲ್ ಆಗಬೇಕಿದೆ. “ಆನಂದ್‌’ ಶಿವರಾಜಕುಮಾರ್‌ ಅವರ ಮೊದಲ ಚಿತ್ರ. ಈಗ ಮತ್ತೂಮ್ಮೆ ಈ ಟೈಟಲ್‌ನಡಿ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top