ಮನೋರಂಜನೆ

ಮಾಜಿ ವಿಶ್ವ ಸುಂದರಿಗೆ ಅಮ್ಮನಾದ ಮೇಲೆ ಕೂಡಿ ಬಂತು ಕಂಕಣ ಭಾಗ್ಯ

ಮಾಜಿ ವಿಶ್ವ ಸುಂದರಿ, ನಟಿ, ರೂಪದರ್ಶಿ ‘ಸುಶ್ಮಿತಾ ಸೇನ್ ದಕ್ಷಿಣ ಭಾರತದ ಹೈದರಾಬಾದ್ ಚೆಲುವೆ. 1994 ರಲ್ಲಿ ‘ಮಿಸ್ ಯುನಿವರ್ಸ್’ ಕೀರೀಟ ಧರಸಿದ ಪ್ರಪ್ರಥಮ ಭಾರತೀಯ ಮಹಿಳೆ. ಅದೇ ವರ್ಷ ಐಶ್ವರ್ಯ ರೈ ವಿಶ್ವಸುಂದರಿ ಪಟ್ಟ ಪಡೆದದ್ದು. ಸುಶ್ಮಿತಾ ಮದುವೆಯಾಗದ್ದೆ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಬೆಳೆಸುತ್ತಿದ್ದಾರೆ.ಮೊದಲನೇ ಮಗುವನ್ನು 2000ರ ಇಸವಿಯಲ್ಲಿ ದತ್ತು ಪಡೆದಿದ್ದರೆ, ಎರಡನೇ ಪುತ್ರಿಯನ್ನು 2010ರಲ್ಲಿ ದತ್ತು ಪಡೆದುಕೊಂಡಿದ್ದರು.

 

 

 

ದು ಕಾಲದಲ್ಲಿ ವಿಶ್ವ ಸುಂದರಿ ಕೀರ್ತಿಯ ಕಿರೀಟ ಧರಿಸಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ನಟಿ ಸುಶ್ಮಿತಾ ಸೇನ್ ಅವಾಗವಾಗ ಕೆಲ ವಿಷಯಗಳಿಗೆ ಸುದ್ದಿಯಾಗುತಲಿದ್ರು,ಈ ಸಲ ಸುಶ್ಮಿತಾ ಸುದ್ದಿಯಾಗಿರುವುದು ಈ ವಿಷಯಕ್ಕೆ ಸುಷ್ಮಿತಾ ಸೇನ್​ ತಮ್ಮ ಬಾಯ್​ಫ್ರೆಂಡ್​ ಜೊತೆ ಮದುವೆಯಾಗಲು ರೆಡಿಯಾಗಿದರಂತೆ,ಹೌದು, ಇತ್ತೀಚೆಗೆ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮನ್ ಶಾಲ್ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಫೊಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಮುಂಬರುವ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಜೋಡಿ ನಿರ್ಧರಿಸಿವೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿಬರುತ್ತಿವೆ.

ಸುಶ್ಮಿತಾ ಹಾಗೂ ರೋಹ್ಮನ್ ಕೆಲವು ತಿಂಗಳ ಹಿಂದೆ ಫ್ಯಾಶನ್ ಗಾಲಾ ಎಂಬ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಭೇಟಿ ವೇಳೆ ಇಬ್ಬರು ಪರಸ್ಪರ ಸ್ನೇಹ ಬೆಳಸಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಗೆ ತಿರುಗಿದೆ. ಅಲ್ಲದೇ ಕೆಲವು ವಾರಗಳ ಹಿಂದೆಯಷ್ಟೇ, ರೋಹ್ಮನ್ ಸುಶ್ಮಿತಾಗೆ ಪ್ರಪೋಸ್ ಮಾಡಿದ್ದರು. ಪ್ರಪೋಸಲ್‍ಗೆ ಸುಶ್ಮಿತಾ ಒಪ್ಪಿಗೆ ನೀಡಿ, ಒಟ್ಟಿಗೆ ಓಡಾಡುತ್ತಿದ್ದರು. ಸುಶ್ಮಿತಾ ಹಾಗೂ ರೋಹ್ಮನ್ 2019 ರಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿಪ್ರಕಟವಾಗಿದೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top