ಆರೋಗ್ಯ

ಥೈರಾಯಿಡ್ ಸಮಸ್ಯೆ ಇವಾಗ ಯಾವ ವಯಸ್ಸಿನವರಿಗೂ ಸೀಮಿತ ಅಲ್ಲ , ಇದನ್ನ ತಡೀಬೇಕಾದ್ರೆ ಅಥವಾ ಪರಿಹಾರ ಮಾಡ್ಕೋಬೇಕಾದ್ರೆ ಈ 8 ಮನೆಮದ್ದು ಮಿಸ್ ಮಾಡ್ದೆ ಮಾಡಿ.

ಥೈರಾಯಿಡ್ ಒಂದು ಆರೋಗ್ಯ ಸಮಸ್ಯೆ,ಥೈರಾಯಿಡ್ ಈ ಹೆಸರು ಕೇಳಿದರೆ ಸಾಕು ಇತ್ತೀಚೆಗೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಶೀತ-ನೆಗಡಿಯಂತೆ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಇದೀಗ ಥೈರಾಯ್ಡ್ ಕೂಡ ಒಂದು. ಶೇಕಡಾ 75ರಷ್ಟು ಜನರನ್ನು ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ, ಆಹಾರ, ಹಾಗೂ ಜೀವನ ಶೈಲಿ. ಒತ್ತಡ, ಆತಂಕ,ಚಿಂತೆ ಥೈರಾಯಿಡ್ ಸಮಸ್ಯೆಗೆ ಮೂಲ ಕಾರಣ ಹಾಗಾಂತ ಇದು ಭಯಾನಕ ಕಾಯಿಲೆಯೇನು ಅಲ್ಲ.ಕುತ್ತಿಗೆಯ ಮುಂಬಾಗದಲ್ಲಿರುವ ಒಂದು ಗ್ರಂಥಿಯನ್ನು ಥೈರಾಯಿಡ್ ಎಂದು ಕರೆಯಲಾಗುತ್ತದೆ .

ಥೈರಾಯಿಡ್ ಹಾರ್ಮೋನ್ ಗಳನ್ನು ಉತ್ಪಾದಿಸುವುದು ಇವುಗಳ ಕೆಲಸ.ಥೈರಾಯಿಡ್ ಒಂದು ಚಿಕ್ಕ ಗ್ರಂಥಿ , ಕೆಳ ಕುತ್ತಿಗೆಯ ಭಾಗದಲ್ಲಿ ಇರುತ್ತದೆ ದೇಹದ ಅಗತ್ಯವಾದ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ,  ಹಾರ್ಮೋನ್ ಥೈರಾಕ್ಸಿನ್, ಥೈರಾಯಿಡ್ ಗ್ರಂಥಿಯಿಂದ ಉತ್ಪತ್ತಿಯಾಗುತ್ತಿರುತ್ತದೆ.ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾದ ಥೈರಾಯ್ಡ್ ಶ್ರವಿಸುವ ಹಾರ್ಮೋನುಗಳು ಸರಿಯಾಗಿದ್ದರೆ ದೇಹದ ಎಲ್ಲಾ ಚಟುವಟಿಕೆಗಳು ನಾರ್ಮಲ್ ಆಗಿ ಇರುತ್ತದೆ ಆದರೆ ಇದರ ಶ್ರವಿಸುವಿಕೆ ಹೆಚ್ಚಾದರೆ, ಹೈಪರ್ ಥೈರಾಯ್ಡ್, ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ, ಐಯೋಡಿನ್ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಥೈರಾಯಿಡ್ ಸಮಸ್ಯೆ ಗುಣ ಲಕ್ಷಣಗಳು:

ಒಣ ಚರ್ಮ, ೨.ಅತಿಯಾಗಿ ಬೆವರುವಿಕೆ, ೩.ತುಂಬಾ ಸುಸ್ತಾ ಆಗ್ತಾ ಇರುತ್ತೆ, ೪.ಕೂದಲು ಉದರುವಿಕೆ, ೬.ಯಾವಾಗಲು ಶೀತ,೭.ಜಾಸ್ತಿ ಮರೆವು ದೇಹ ತೂಕ ದಿನ ದಿನ ತುಂಬಾ ಜಾಸ್ತಿ ಆಗ್ತಾ ಹೋಗತ್ತೆ

ಮನೆಮದ್ದು :

ಬೇವಿನ ಎಣ್ಣೆ:ದಿನ ಊಟ ಮಾಡುವ 1 ಘಂಟೆ ಮುಂಚೆ ಸ್ವಲ್ಪ ಬೇವಿನ ಎಣ್ಣೆಯನ್ನು ನಿಮ್ಮ ಮೂಗಿನ ಹೊಳ್ಳೆಗೆ ಹಾಕಿಕೊಳ್ಳಿ ಇದು ನಿಮ್ಮ ಗಂಟಲು ಊದುವಿಕೆಯನ್ನು ಕಡಿಮೆ ಮಾಡುತ್ತದೆ.

ಎಳ್ಳೆಣ್ಣೆ:ಥೈರಾಯಿಡ್ ಇರುವವರಿಗೆ ಅವರ ಗಂಟಲು ಯಾವಾಗೂ ಊದಿಕೊಂಡಿರುತ್ತದೆ ಮತ್ತು ಊಟ ತಿನ್ನಲು ಕೂಡ ಕಷ್ಟ ಪಡುತಾ ಇರುತ್ತಾರೆ ,ಎಳ್ಳೆಣ್ಣೆಯಿಂದ ಅವರ ಗಂಟಲನ್ನು ದಿನ ಮಸಾಜ್ ಮಾಡುವುದರಿಂದ ಗಂಟಲು,ಊದಿಕೊಂಡಿರುವುದು ಕಡಿಮೆ ಆಗುತ್ತದೆ.

ಶುಂಠಿ ಟೀ:

 

 

 

ದಿನ 2 ಸಲ ಶುಂಠಿ ಟೀ ಮತ್ತು ಅದಕ್ಕೆ 1 ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಥೈರಾಯಿಡ್ ಕಡಿಮೆ ಆಗುತ್ತದೆ.

ಧನ್ಯ ಅಥವಾ ಕೊತ್ತಂಬರಿ ಬೀಜ:ನೀರನ್ನು ಬಿಸಿ ಮಾಡ್ಕೊಂಡ್ ಅದಕ್ಕೆ 2 ಚಮಚ ಧನ್ಯ ಅಥವಾ ಕೊತ್ತಂಬರಿ ಬೀಜ ಹಾಕಿ ನಂತರ ಆ ನೀರನ್ನು ಶೋಧಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ದಿನ ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಥೈರಾಯಿಡ್ ಕಡಿಮೆ ಆಗುತ್ತದೆ.

ಬೆಚ್ಚಗಿರೋ ಹಾಲು ಮತ್ತು ಕೊಬ್ಬರಿ ಎಣ್ಣೆ:ದಿನ ಒಂದು ಲೋಟ ಬೆಚ್ಚಗಿರೋ ಹಾಲಿಗೆ ಒಂದು ಚಮಚ ಪ್ಯೂರ್ ಕೊಬ್ಬರಿ ಎಣ್ಣೆ ಸೇರಿಸಿ ಕುಡಿಬೇಕು ,ಕುಡಿದು ವ್ಯತ್ಯಾಸ ನೀವೇ ನೋಡಿ.

ಆಪಲ್ ಸಿಡೆರ್ ವಿನೆಗರ್ :ಒಂದು ಲೋಟ ಬೆಚ್ಚಗಿರೋ ನೀರಿಗೆ ಒಂದು ಚಮಚ ಆಪಲ್ ಸಿಡೆರ್ ವಿನೆಗರ್ ಮತ್ತು ಒಂದು ಚಮಚ ಜೇನು ತುಪ್ಪ ಸೇರಿಸಿ ದಿನ ಕುಡಿಯಿರಿ.

ಮೆಣಸು ,ಶುಂಠಿ ಮತ್ತು ಹಿಪ್ಪಲಿ :ಮೆಣಸು ,ಶುಂಠಿ ಮತ್ತು ಹಿಪ್ಪಲಿನ ತಗೊಂಡು ಪುಡಿ ಮಾಡಿ ಇಟ್ಕೊಳಿ ,ಒಂದು ಲೋಟ ಬೆಚ್ಚಗಿರೋ ನೀರಿನ ಜೊತೆ ಈ 3 ಪುಡಿಯ ಮಿಶ್ರಣವನ್ನು 1/2 ಚಮಚ ಹಾಕಿ ದಿನ ಕುಡಿದ್ರೆ ನಿಮ್ಮ ಥೈರಾಯಿಡ್ ಕಡಿಮೆ ಆಗುತ್ತದೆ.

ಮೀನು:ವಾರಕ್ಕೆ 2 ರಿಂದ 3 ಸಲ ಮೀನನ್ನು ತಿನ್ನುವುದರಿಂದ ಥೈರಾಯಿಡ್ ಕಡಿಮೆ ಆಗುತ್ತದೆ.ಅಷ್ಟೇ ಅಲ್ಲದೆ ದಿನ ನಿತ್ಯ ಈ ಆಹಾರಗಳನ್ನು ಸೇವಿಸಿ ಅವು ಯಾವುವೆಂದರೆ .ಅಣಬೆ, .ಗೋಧಿ ಹುಲ್ಲಿನ ರಸ, ಸೋರೆಕಾಯಿ, ಸ್ಟ್ರಾಬೆರಿ, ಕಿರು ಧಾನ್ಯಗಳು , ಅರಿಸಿನದ ಹಾಲು , ನೀರು ಹೆಚ್ಚಾಗಿ ಸೇವಿಸಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top