fbpx
ಆರೋಗ್ಯ

ದಾಳಿಂಬೆ ಹಣ್ಣು ಮಾತ್ರ ಅಲ್ಲ ಹೂವು ಕೂಡ ಈ 9 ಲಾಭಗಳನ್ನು ತಂದುಕೊಡುತ್ತೆ ಅಂತ ತಿಳ್ಕೊಂಡ್ಮೇಲೆ ನೀವು ಬಳಸೋಕೆ ಶುರು ಮಾಡ್ತೀರಾ

ದಾಳಿಂಬೆಯ ತವರೂರು ಇರಾನ್. ೧೭ ನೇ ಶತಮಾನದಲ್ಲಿ ವರಾಹಮಿಹಿರನು ಬರೆದ ಬೃಹತ್ ಸಂಹಿತೆಯಲ್ಲಿ ಇದರ ಉಲ್ಲೇಖವಿದೆ.ದಾಳಿಂಬೆ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ಉಲ್ಲೇಖವಿದೆ.ದಾಳಿಂಬೆಯು ಪೊದೆಯಂತೆ ಬೆಳೆಯುವ ಚಿಕ್ಕಮರ.ಈ ಗಿಡದ ಹಣ್ಣು, ಹೂವು ,ತಿರುಳು, ಕಾಂಡ, ತೊಗಟೆ ಔಷಧಿಗಾಗಿ ಉಪಯುಕ್ತ.

 

 

 

 

ಬನ್ನಿ ಈಗ ದಾಳಿಂಬೆ ಹೂವು ಯಾವ ರೀತಿ ದೇಹಕ್ಕೆ ಉಪಯೋಗ ಎಂದು ತಿಳಿದುಕೊಳ್ಳೋಣ.

 ಬಿಳಿ ಮುಟ್ಟು ಸಮಸ್ಯೆ :30 ತಾಜಾ ದಾಳಿಂಬೆ ಮೊಗ್ಗುಗಳನ್ನು 10 ಕಪ್ಪು ಮೆಣಸು ಗಳನ್ನು ಸೇರಿಸಿ ಜಜ್ಜಿ ಅರ್ಧ ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ ಮೂರು ವಾರಗಳ ಕಾಲ ಸೇವಿಸಬೇಕು.

ಹೃದಯ ರೋಗ:ಹೃದಯ ಸಂಬಂಧಿತ ರೋಗ ಅಕಾಲಿಕ ಸಾವಿನ ಸಾಮಾನ್ಯ ಕಾರಣವಾಗಿದೆ , ದಾಳಿಂಬೆ ಹೃದಯ ರೋಗದ ವಿರುದ್ಧ ಹೋರಾಡುತ್ತದೆ ಇದು ಕೊಲೆಸ್ಟರಾಲ್ ಪ್ರೊಫೈಲ್ ಅನ್ನು ಸುಧಾರಿಸುತ್ತದೆ

ಕ್ಯಾನ್ಸರ್ ಸಮಸ್ಯೆ:ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯ ಕ್ಯಾನ್ಸರ್ ಆಗಿದೆ, ಅಲ್ಪಾವಧಿಗೆ ಎರಡು ಬಾರಿ ಪಿಎಸ್ಎ ಮಟ್ಟವನ್ನು ಹೊಂದಿದ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಸಾವಿನ ಅಪಾಯವನ್ನು ಎದುರಿಸುಸುತ್ತಾರೆ. ದಾಳಿಂಬೆ ಹೂವಿನ ರಸವು ಸಾವಿನ ಅಪಾಯದಿಂದ ರಕ್ಷಿಸುತ್ತದೆ.

ಮೂಗಿನ ರಕ್ತ ಸೋರುವಿಕೆ ನಿಲ್ಲುತ್ತದೆ:ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ರಸವನ್ನು ಹಿಂಡಿ ಮೂಗಿನ ಹೊಳ್ಳೆಗಳಿಗೆ ಹಾಕಿ ಕೊಳ್ಳಬೇಕು ಹೀಗೆ ಮಾಡಿದರೆ ಮೂಗಿನ ರಕ್ತ ಸೋರುವಿಕೆ ನಿಲ್ಲುತ್ತದೆ.

ಮೊಡವೆ ಸಮಸ್ಯೆ:ದಾಳಿಂಬೆ ಹೂವು ಮತ್ತು ಅರಿಸಿನ ಸೇರಿಸಿ ಚೆನ್ನಾಗಿ ಜಜ್ಜಿ ಮುಖದ ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಹೀಗೆ ಒಂದು ವಾರ ಮುಂದುವರಿಸಿದರೆ ಮೊಡವೆಯ ಸಮಸ್ಯೆ ದೂರವಾಗುತ್ತದೆ .

ಜಂತು ಹುಳು ಸಮಸ್ಯೆ:ದಾಳಿಂಬೆ ಅರ್ಧ ಹಿಡಿಯಷ್ಟು ಹೂವುಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟ ನೀರು ಸೇರಿಸಿ ,ಸ್ವಲ್ಪ ಎಳ್ಳು ಹಾಕಿ ಕಾಯಿಸಿ , ಆ ರಸವನ್ನು ನಂತರ ಸೋಸಿಕೊಂಡು ಅದಕ್ಕೆ ಒಂದು ಹನಿ ಹರಳೆ ಎಣ್ಣೆ ಸೇರಿಸಿಕುಡಿದರೆ ಜಂತು ಹುಳು ಸಮಸ್ಯೆ ದೂರವಾಗುತ್ತದೆ.

ಮೂಖದ ಕಾಂತಿ ಹೆಚ್ಚಿಸುತ್ತದೆ:

 

 

 

ದಾಳಿಂಬೆ ಅರ್ಧ ಹಿಡಿಯಷ್ಟು ಹೂವುಗಳನ್ನು ತೆಗೆದುಕೊಂಡು ಜಜ್ಜಿ ಅದಕ್ಕೆ ಗುಲಾಭಿ ಜಲವನ್ನು ಸೇರಿಸಿ ಮುಖಕ್ಕೆ ಹಚ್ಚಿ ಕೊಳ್ಳಿ ಹೀಗೆ ಮಾಡಿದರೆ ಮುಖದ ಮೇಲಿನ ಕಲೆ ಮಾಯವಾಗುವುದಲ್ಲದೆ, ಸುಕ್ಕು ಕಡಿಮೆಯಾಗುತ್ತದೆ , ಮುಖದ ಅಂದ ಹೆಚ್ಚುತ್ತದೆ.

ಸಕ್ಕರೆ ಖಾಯಿಲೆ ದೂರ:ದಾಳಿಂಬೆ ಅರ್ಧ ಹಿಡಿಯಷ್ಟು ಹೂವುಗಳನ್ನು ತೆಗೆದುಕೊಂಡು ಅದರ ಕಾಲು ಭಾಗದಷ್ಟು ಅರಿಸಿನ ಹಾಗು ಎರಡು ಎಲೆ ಅಮೃತ ಬಳ್ಳಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುವುದು .

ಹಲ್ಲಿನ ರಕ್ತ ಸೋರುವಿಕೆ ನಿಲ್ಲುತ್ತದೆ:ದಾಳಿಂಬೆ ಹೂವನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಸ್ವಲ್ಪ ಉಪ್ಪು ಬೆರೆಸಿ ಹಲ್ಲು ಉಜ್ಜುತ್ತಾ ಬಂದರೆ ಹಲ್ಲಿನ ರಕ್ತ ಸೋರುವಿಕೆ ನಿಲ್ಲುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top