fbpx
ಕನ್ನಡ

ವಿಯೆಟ್ನಾಂನಲ್ಲಿ ಪತ್ತೆಯಾಯ್ತು ಕನ್ನಡದ ‘ಕಾಲ’- ಮಿಸಾನ್‌ ಸ್ಮಾರಕಗಳ ನಡುವೆ ಕಂಡ ಕನ್ನಡ ಲಿಪಿ.

ಅಚ್ಚರಿದಾಯಕ ಬೆಳವಣಿಗೆಯೊಂದರಲ್ಲಿ ದೂರದ ವಿಯೆಟ್ನಾಂಗೂ ಮತ್ತು ಕರ್ನಾಟಕಕ್ಕೂ ಏನಾದರೂ ಸಂಭಂದವಿದೆಯಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಅಷ್ಟಕ್ಕೂ ಕರ್ನಾಟಕದಿಂದ ಸಾವಿರಾರು ಮೈಲಿ ದೂರವಿರುವ ವಿಯೆಟ್ನಾಮ್ ಬಗ್ಗೆ ಇದ್ದಕ್ಕಿದ್ದಂತೆ ಈ ರೀತಿ ಸಂಶಯ ಮೂಡಲು ಕಾರಣ ಏನು ಅಂತೀರಾ? ಮುಂದೆ ಓದಿ..

ವಿಯೆಟ್ನಾಮ್ ನ ಮಿಸಾನ್‌ ಸ್ಮಾರಕಗಳ ಮಧ್ಯೆ ಕನ್ನಡ ಲಿಪಿ ಪತ್ತೆಯಾಗಿದ್ದು, ವಿಯೆಟ್ನಾಂ ಮತ್ತು ಕರ್ನಾಟಕದ ನಡುವೆ ಹೊಸ ಐತಿಹಾಸಿಕ ಸಂಬಂಧದ ಅಧ್ಯಾಯವೊಂದು ತೆರೆದುಕೊಂಡಿದೆ.. ವಿಯೆಟ್ನಾಂ ದೇಶದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿರುವ, ಅಲ್ಲಿನ ಭಾರತೀಯ ಸಾಂಸ್ಕೃತಿಕ ರಾಯಭಾರಿ ಜಿ.ಬಿ. ಹರೀಶ್‌ ಹಾಗೂ ಅವರ ಪತ್ನಿ ಎಂ.ಆರ್‌. ಗಿರಿಜಾ, ಮಿಸಾನ್‌ ಸ್ಮಾರಕಗಳ ಭಗ್ನಾವಶೇಷಗಳ ಮಧ್ಯೆ ಈ ಕನ್ನಡ ಲಿಪಿಯನ್ನು ಪತ್ತೆ ಮಾಡಿದ್ದಾರೆ.

ಒಂದು ಭಗ್ನಾವಶೇಷದ ಮೇಲೆ ‘ಚಾಮ್‌’ ಲಿಪಿಯಿದ್ದು ಅದರ ಮಧ್ಯೆ ‘ಕಾಲ’ ಎಂಬ ಕನ್ನಡ ಪದವಿದೆ.. ಅದು ಕದಂಬರ ಕಾಲದ ಬರಹ ಎಂದು ಊಹಿಸಲಾಗಿದ್ದು ಕುತೂಹಲ ಮೂಡಿಸಿದೆ.. ಈ ಲಿಪಿಯಿಂದ ಕನ್ನಡಿಗರು ಸಾಗರೋತ್ತರ ಸಂಪರ್ಕ ಹೊಂದಿದ್ದರು ಎಂಬ ಹೊಸ ಅದ್ಯಾಯವೊಂದು ತೆರೆದುಕೊಂಡಿದೆ.

ಏನಿದು ಮಿಸಾನ್?
ವಿಯೆಟ್ನಾಂ ಯುದ್ಧ ಸಂದರ್ಭದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇಲ್ಲಿನ ಹಲವು ಸ್ಮಾರಕಗಳು ಧ್ವಂಸಗೊಂಡಿದ್ದವು. ಅವುಗಳಲ್ಲಿ ಮಿಸಾನ್ ಸ್ಮಾರಕಗಳು ಪ್ರಮುಖವಾದವು.. ಈ ಊರಿನಲ್ಲಿ ಪುರಾತನವಾದ ಹಲವು ಹಿಂದೂ–ಬೌದ್ಧ ದೇವಾಲಯಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top