fbpx
ಉಪಯುಕ್ತ ಮಾಹಿತಿ

ಪೆನ್ ಕ್ಯಾಪ್‍ಗಳ ಮೇಲೇಕೆ ತೂತಿರುತ್ತೆ ಗೊತ್ತಾ? ನೀತಿ ಮುಚ್ಚಿದ ತೂತು ತರಲಿದೆ ಆಪತ್ತು

ನಾವು ಎಷ್ಟೇ ಹೈಟೆಕ್ ಆಗಿರಬಹುದು. ಆದರೆ ಕಾಗದ ಪೆನ್‍ಗಳಿಲ್ಲದೆ ಇರಲಾದೀತೇ? ಪೆನ್‍ಗಳು ನಮ್ಮ ದೈನಂದಿನ ಅಗತ್ಯವಸ್ತುಗಳಲ್ಲಿ ಒಂದು. ಅದರಲ್ಲೂ ಡಾಟ್‍ಪೆನ್‍ಗಳು ಹೆಚ್ಚು ಆಪ್ಯಾಯಮಾನ. ಆದರೆ ಇಂತಹ ಡಾಟ್ ಪೆನ್‍ಗಳ ಕ್ಯಾಪ್‍ಗಳ ಮೇಲೇಕೆ ತೂತು ಎಂದು ಬಹುತೇಕರು ಯೋಚಿಸಿರುವುದು ಅಪರೂಪವೇ ಸರಿ.ಇಂಕ್ ಒಣಗಿ – ಹೆಚ್ಚು ಪೆನ್ ಖರೀದಿ ಮಾಡಲೆಂದೇ ಕ್ಯಾಪ್ ಮೇಲಿನ ಹೊಳ್ಳೆ ಗಳ ಮೂಲಕ ಗಾಳಿಯಾಡಿ ದರೆ ಇಂಕ್ ಒಣಗುತ್ತಾ ಹೋಗಲಿದೆ. ಹಾಗೆ ಒಣಗುತ್ತಾ ಹೋದಲ್ಲಿ ರಿಫಿಲ್ ಬೇಗ ಖಾಲಿಯಾಗಿ ಹೆಚ್ಚಿನ ಪೆನ್‍ಗಳನ್ನು ಖರೀದಿ ಮಾಡಲೆಂಬ ಉದ್ದೇಶವೇ? ಖಂಡಿತ ಅಲ್ಲ.

 

 

ಸಮಾನಾಂತರ ಒತ್ತಡ.

 

 

 

ಕ್ಯಾಪ್‍ಮೇಲೆ ಸಣ್ಣ ತೂತುಗಳಿದ್ದರೆ ಪೆನ್ ಕ್ಯಾಪ್ ತೆಗೆದು ಹಾಕಿ ಮಾಡುವುದು ಸುಲಭವಾಗಲಿದೆ. ಒಂದು ವೇಳೆ ತೂತಿಲ್ಲದ ಕ್ಯಾಪ್ ಬಳಸಿದರೆ ಹಾಕಿ ತೆಗೆದು ಮಾಡುವುದು ಕಷ್ಟವಾಗಲಿದೆ. ಗಾಳಿಯ ಸಮಾನಾಂತರ ಒತ್ತಡಕ್ಕಾಗಿ ಮುಚ್ಚಳ ಮೇಲೆ ಹೊಳ್ಳೆ ಮಾಡಿರುತ್ತಾರೆಂಬ ವಾದವೂ ಇದೆ.

ನೈಜ ಸತ್ಯವೇನು?

ಹಿಂದೆಲ್ಲಾ ಪೆನ್‍ಗಳ ಕ್ಯಾಪ್‍ಗಳ ಮೇಲೆ ದೊಡ್ಡ ಮಣಿಯನ್ನು ಇರಿಸಲಾಗುತ್ತಿತ್ತು. ಪೆನ್ ಅಂದ ಹೆಚ್ಚಿಸುವ ಉದ್ದೇಶದೊಂದಿಗೆ ಆಕಸ್ಮಿಕವಾಗಿ ನುಂಗದಿರಲು ಹೀಗೆ ಮಾಡಲಾಗುತ್ತಿತ್ತು. ಈಗ ಮಣಿಯಾಕಾರದ ಬದಲಿಗೆ ತೂತು ಕ್ಯಾಪಿನ ಪೆನ್‍ಗಳನ್ನು ತಯಾರಿಯಾಗುತ್ತಿದೆ. ನುಂಗಿದರೆ ಗಂಟಲಿನ ಗಾಳಿ ನಳಿಕೆಯಲ್ಲಿ ಕ್ಯಾಪ್ ಸಿಲುಕಿದರೂ ಅದರಲ್ಲಿನ ತೂತುಗಳ ಮೂಲಕ ಉಸಿರಾಟಕ್ಕೆ ಅನುಕೂಲವಾಗಲಿದೆ. ಪ್ರಾಣಾಪಾಯದಿಂದ ಪಾರಾಗಬಹುದು. ಹೀಗಾಗಿ ಪೆನ್ ಕ್ಯಾಪ್‍ಗಳ ಮೇಲೆ ತೂತು ಅಗತ್ಯ.ನೀತಿ ಮುಚ್ಚಿದ ತೂತು ತರಲಿದೆ ಆಪತ್ತು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top