ತಿಂಡಿ ತೀರ್ಥ

ನೋಡಿದ್ರೆ ಸಾಕು ಬಾಯಲ್ಲಿ ನೀರು ಬಿಡೋ ಹರಬಾರ ಕಬಾಬ್ ಮಾಡೋದು ಹೇಗೆ ಗೊತ್ತ.

 ಬಾಯಲ್ಲಿ ನೀರು ಬಿಡೋ ಹರಬಾರ ಕಬಾಬ್ ಮಾಡುವ ವಿಧಾನ

 

 

 

ಬೇಕಾಗುವ ಪದಾರ್ಥ:
ಕಟ್ಟು ಪಾಲಕ್ ಸೊಪ್ಪು
ಎಣ್ಣೆ
೧ ಚಮಚ ಹಸಿ ಮೆಣಸಿನ ಕಾಯಿ
ಸ್ವಲ್ಪ ಕ್ಯಾಪ್ಸಿಕಂ

ಹುರಳಿ ಕಾಯಿ ಕಾಲು ಕೆಜಿ
ಬಟಾಣಿ ಕಾಲು ಕೆಜಿ
ಸಿಪ್ಪೆ ತೆಗೆದ ಆಲೂಗೆಡ್ಡೆ ಕಾಲು ಕೆಜಿ
ಪನೀರ್ ಸ್ವಲ್ಪ
ಕೊತಂಬರಿ ಸೊಪ್ಪು

೧ ಚಮಚ ಕಾರ್ನ್ ಫ್ಲೋರ್
೧ ಚಮಚ ಬ್ರೆಡ್ ಕ್ರ್ಮ್ಪ್ಸ್
೧ ಚಮಚ ಧನಿಯ ಪುಡಿ
೧ ಚಮಚ ಅಚ್ಚ ಕಾರದ ಪುಡಿ
ರುಚಿಗೆ ತಕಷ್ಟು ಉಪ್ಪು

 

 

 

ಮಾಡುವ ವಿಧಾನ:ಪಾಲಕ್ ಸೊಪ್ಪು ,ಕ್ಯಾಪ್ಸಿಕಂ ,ಹುರಳಿ ಕಾಯಿ,ಬಟಾಣಿ ಮತ್ತು ಆಲೂಗೆಡ್ಡೆ ಯನ್ನು ಚೆನ್ನಾಗಿ ಬೇಯಿಸಿಕೊಂಡು ,ತರಿತರಿಯಾಗಿ ರುಬ್ಬಿಕೊಳ್ಳಬೇಕು ,ರುಬ್ಬಿಕೊಂಡ ನಂತರ ಅದಕ್ಕೆ ಸ್ವಲ್ಪ ಪನ್ನೀರು ,ಕೊತಂಬರಿ ಸೊಪ್ಪು ,೧ ಚಮಚ ಕಾರ್ನ್ ಫ್ಲೋರ್ ,ಚಮಚ ಬ್ರೆಡ್ ಕ್ರ್ಮ್ಪ್ಸ್ ,೧ ಚಮಚ ಧನಿಯ ಪುಡಿ ,೧ ಚಮಚ ಅಚ್ಚ ಕಾರದ ಪುಡಿ ಮತ್ತು ರುಚಿಗೆ ತಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು .ನಂತರ ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಚಪಟ್ಟೆ ಆಕಾರದಲ್ಲಿ ಮಾಡಿಕೊಂಡು ಎಣ್ಣೆಯಲ್ಲಿ ಕರಿದುಕೊಳ್ಳಬೇಕು.ಸುಲಭವಾಗಿ ಹರಬಾರ ಕಬಾಬ್ ಮಾಡಿಕೊಂಡು ತಿನ್ನಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top