fbpx
ಉಪಯುಕ್ತ ಮಾಹಿತಿ

ಈ ಕೊಂಬೆ ತಂದು ಈ ಸುಲಭವಾದ ಉಪಾಯಗಳು ಮಾಡಿದ್ರೆ ಹಣದ ಸಮಸ್ಯೆ , ಮಕ್ಕಳ ಮೇಲಿನ ಕೆಟ್ಟ ದೃಷ್ಟಿ, ಓದಿನ ಸಮಸ್ಯೆ ಆದಷ್ಟು ಬೇಗ ದೂರವಾಗುತ್ತೆ

ಈ ಕೊಂಬೆ ತಂದು ಈ ಸುಲಭವಾದ ಉಪಾಯಗಳು ಮಾಡಿದ್ರೆ  ಹಣದ ಸಮಸ್ಯೆ , ಮಕ್ಕಳ ಮೇಲಿನ ಕೆಟ್ಟ ದೃಷ್ಟಿ, ಓದಿನ ಸಮಸ್ಯೆ ಆದಷ್ಟು ಬೇಗ ದೂರವಾಗುತ್ತೆ.ಈ ಕೊಂಬೆ ತಂದು ನಿಮ್ಮ ಬೀರುವಿನಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುವುದು.

ಈ ಕೊಂಬೆಯನ್ನು ತಂದು ನಿಮ್ಮ ಮನೆಯಲ್ಲಿ ಅಲ್ಮೆರಾದಲ್ಲಿ ಇಟ್ಟುಕೊಂಡರೆ ಹಣದ ಸುರಿಮಳೆಯಾಗುವುದು ಖಂಡಿತ .ಮಾನವನ ಜೀವನ ಕಷ್ಟ- ಸುಖಗಳ ಸಮ್ಮಿಲನ. ಸುಖದ ಕ್ಷಣಗಳು ಆನಂದವನ್ನು ನೀಡಿದರೆ, ದುಃಖದ ಮತ್ತು ಕಷ್ಟದ ಕ್ಷಣಗಳು ಸಾಕಷ್ಟು ದುಃಖವನ್ನು ನೋವನ್ನು ನೀಡುತ್ತವೆ . ಚಿಕ್ಕಪುಟ್ಟ ಸಮಸ್ಯೆಗಳು ಮನುಷ್ಯನಿಗೆ ಬಂದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಜೀವನವನ್ನು ಸಾಗಿಸುತ್ತಾ ಇರುತ್ತಾನೆ. ಜೀವನದ ಪೂರ್ತಿಯಾಗಿ ಕೊನೆಯವರೆಗೆ ಸಮಸ್ಯೆಗಳ ಸುಳಿಯಲ್ಲಿ ಅಥವಾ ಚಕ್ರದಲ್ಲಿ ಬಿದ್ದು ತೊಡಗುತ್ತಾ ಇರುತ್ತಾನೆ. ಆ ಮನುಷ್ಯ ದಿಕ್ಕು ತಪ್ಪಿ ಹೋಗುತ್ತಾನೆ. ಈ ಸಮಸ್ಯೆಗಳ ಸುಳಿಯಲ್ಲಿ ಬಿದ್ದ ಮನುಷ್ಯನು ನೊಂದು ಬೆಂದು ಬಳಲಿ ಹೋಗುತ್ತಾನೆ. ಸಮಸ್ಯೆಗಳ ಸುಳಿಯಿಂದ ಚಕ್ರವ್ಯೂಹದಿಂದ ಹೊರಬರಲು ದಿಕ್ಕು ತೋಚವುದಿಲ್ಲ. ಆಲೋಚನೆಗಳು ಬರುವುದೇ ಇಲ್ಲ, ಸಮಸ್ಯೆಗಳಿಗೆ ಇರುವ ಪರಿಹಾರವನ್ನು ಈಗ ನಾವು ತೆಗೆದುಕೊಳ್ಳೋಣ.

ಹುಣಸೇಹಣ್ಣು ಮತ್ತು ಹುಣಸೇಕಾಯಿ ಇದರಲ್ಲಿರುವ ವಿಟಮಿನ್ ಸಿ ಸಮೃದ್ಧಿಯಾಗಿ ಆರೋಗ್ಯಕ್ಕೆ ದೊರೆಯುವುದು. ಉತ್ತಮ ಪೋಷಕಾಂಶಗಳನ್ನು ನೀಡುವಂತಹ ಗುಣ ಕೂಡ ಹುಣಸೆ ಹಣ್ಣಿನಲ್ಲಿ ಇದೆ. ಹುಣಸೆ ಹಣ್ಣಿನಿಂದ ತಕ್ಷಣ ಬಾಯಿಯಲ್ಲಿ ನೀರೂರುವುದು ಖಂಡಿತ. ಯಾಕೆಂದರೆ ಪ್ರತಿಯೊಬ್ಬರಿಗೂ ಇದರ ಅನುಭವ ಇರುತ್ತದೆ.

 

 

 

ಪ್ರತಿಯೊಬ್ಬರೂ ಚಿಕ್ಕವರಿರುವಾಗ ಉಪ್ಪು ಸಕ್ಕರೆ ಮತ್ತು ಹುಣಸೇ ಹಣ್ಣಿನ ಈ ಮಿಶ್ರಣವನ್ನು ತಿಂದಿರುತ್ತೀರ.ಈಗಲೂ ಅದು ನೆನಪಿಗೆ ಬರುತ್ತದೆ ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ. ಅದರಲ್ಲೂ ಬಸರಿ ಹೆಣ್ಣಿಗೆ ಆ ಹುಣಸೆಹಣ್ಣು ಅಮೃತವಿದ್ದಂತೆ. ಇಂತಹ ಹುಣಸೆ ಹಣ್ಣಿನಿಂದ ಯಾರಿಗೂ ಗೊತ್ತಿರದ ವಿಷಯಗಳನ್ನು ನಿಮ್ಮಗೆ ನಾವು ಹೇಳುತ್ತಿದ್ದೇವೆ. ಇದರಿಂದ ನಿಮ್ಮ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳು ತೊಲಗಿ ಹೋಗುತ್ತವೆ. ಇದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ . ಗೊತ್ತಿರುವವರು ಮಾತ್ರ ಪಾಲಿಸಿ ಹೇಳಿದ್ದಾರೆ .ಹಣ ವೃದ್ಧಿಯಾಗಬೇಕೆಂದು ಬಯಸುವವರು, ಹಣದ ಸಮಸ್ಯೆ ಬಗೆಹರಿಯಬೇಕೆಂದು ಬಯಸುವವರು, ಇದೊಂದು ಉಪಾಯವನ್ನು ಮಾಡಿದರೆ ಸಾಕು.ಹುಣಸೇ ಗಿಡದ ರೆಂಬೆಯನ್ನು ತಂದು ನಿಮ್ಮ ಬೀರುವಿನಲ್ಲಿ,ತಿಜೋರಿಯಲ್ಲಿ ಅಥವಾ ಅಲ್ಮಿರಾದಲ್ಲಿ ನೀವು ಹಣವನ್ನು ಇಡುವ ಸ್ಥಳದಲ್ಲಿ ಇಟ್ಟರೂ ಸಾಕು. ಅದರಿಂದ ಧನ ವೃದ್ಧಿಯಾಗುತ್ತದೆ. ದಿನೇ ದಿನೇ ಅಭಿವೃದ್ಧಿ ಹೊಂದುತ್ತಾರೆ. ಹೀಗೆ ಹುಣಸೆ ಹಣ್ಣಿನ ಗಿಡದ ಎಲೆ ಇರುವ ರೆಂಬೆಯನ್ನು ತಂದಿಟ್ಟು ಕೊಂಡರೆ ಸಾಕು.

 

 

 

ಇನ್ನು ಮಕ್ಕಳಲ್ಲಿ ಜ್ಞಾಪಕ ಶಕ್ತಿ ಬೆಳೆಯಲು.. ಹಾಗೂ ಓದಿದ ವಿಷಯಗಳನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು, ಪರೀಕ್ಷೆಯ ಸಮಯದಲ್ಲಿ ಉತ್ತರಗಳು ಚೆನ್ನಾಗಿ ನೆನಪಿಗೆ ಬರಲು ಕೆಲವು ಹುಣಸೆ ಹಣ್ಣಿನ ಎಲೆಗಳನ್ನು ಗುರುವಾರದ ದಿನ ಅವರ ಪುಸ್ತಕದಲ್ಲಿ ಇಟ್ಟು ಭದ್ರಪಡಿಸಲು ತಿಳಿಸಿ. ಹೀಗೆ ಮಾಡುವುದರಿಂದ ಓದಿನ ಮೇಲೆ ಆಸಕ್ತಿ ಹೆಚ್ಚಾಗಿ, ಜ್ಞಾಪಕ ಶಕ್ತಿ ಖಚಿತವಾಗಿಯೂ ಹೆಚ್ಚಾಗುತ್ತದೆ.

ಇನ್ನು ಕೆಲವರಿಗೆ ಊಟ ಸೇರದೆ ಊಟ ಮಾಡಬೇಕು ಅಂದರೆ ಊಟ ನೋಡಿದ ತಕ್ಷಣ ಹೇಸಿಗೆ ಬರುತ್ತದೆ. ಅಂಥವರು ಹುಣಸೆ ಹಣ್ಣಿನ ರೆಂಬೆಗಳನ್ನು ತೆಗೆದುಕೊಂಡು ಏಳು ಬಾರಿ ಮೇಲಿನಿಂದ ಕೆಳಗೆ ದೃಷ್ಟಿ ತೆಗೆದು ಹೊರಗೆ ಹಾಕಬೇಕು. ಹೀಗೆ ಮಾಡುವುದರಿಂದ ಊಟದ ಮೇಲಿನ ದೃಷ್ಟಿ ತೊಲಗುತ್ತದೆ.ಇನ್ನೂ ನರ ದೃಷ್ಟಿ ಅಂದರೆ ಮನುಷ್ಯನ ದೃಷ್ಟಿ ತಗಲಿರುವವರು ಹುಣಸೆ ಹಣ್ಣಿನ ರೆಂಬೆಗಳನ್ನು ತೆಗೆದುಕೊಂಡು ಏಳು ಬಾರಿ ತಿರುಗಿಸಿ ದೃಷ್ಟಿ ತೆಗೆದು ನಂತರ ಹುಣಸೆ ಕೊಂಬೆಗಳನ್ನು ಸುಟ್ಟು ಬಿಡಬೇಕು. ಸುಟ್ಟ ನಂತರ ಅದರ ಮೇಲೆ ನೀರು ಹಾಕಬೇಕು. ಹೀಗೆ ಮಾಡಿದರೆ ನರ ದೃಷ್ಟಿ ತೊಲಗುವುದು.ಹೀಗೆ ಈ ಪರಿಹಾರಗಳನ್ನು ಪಾಲಿಸಿದರೆ ನಿಮಗೆ ತೊಂದರೆಯನ್ನು ಕೊಡುತ್ತಿರುವ ಇತರೆ ಸಮಸ್ಯೆಗಳು ಕೂಡ ದೂರವಾಗಿ ಬಿಡುತ್ತವೆ. ಇನ್ನೂ ಹುಣಸೇ ಗಿಡದ ಈ ರೆಂಬೆಯ ಉಪಾಯದ ಪರಿಹಾರ ಅಂತೂ ತುಂಬಾ ಚೆನ್ನಾಗಿಯೇ ಕಾರ್ಯವನ್ನು ನಿರ್ವಹಿಸುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top