ಇತರೆ

ಐಫೋನ್ ಕೊಳ್ಳಲು ಮಳಿಗೆಗೆ ಬರೋಬ್ಬರಿ ಒಂದು ಲಕ್ಷ ರಷ್ಯನ್ ರುಬೆಲ್ಸ್ ಚಿಲ್ಲರೆ ನಾಣ್ಯಗಳನ್ನ ಬಾತ್ ಟಬ್ ನಲ್ಲಿ ತಂದ ಭೂಪ .

ಐಫೋನ್ ಎಂದರೆ  ಯಾರಿಗೆ ಇಷ್ಟವಿಲ್ಲ ಹೇಳಿ? ಐಫೋನ್ ಕೊಳ್ಳುವುದು ಎಷ್ಟೋ ಜನರ ಕನಸಾಗಿದೆ. ಇದೆ ರೀತಿ ಐಫೋನ್ ಕೊಳ್ಳಬೇಕೆಂಬ ಕನಸು ಹೊಂದಿರುವ ರಷ್ಯಾದ ಒಬ್ಬ ವ್ಯಕ್ತಿ ಸಯ್ಯಾಟೊಸ್ಲಾವ್‌ ಕೊವೆಲೆಂಕೊ ತನ್ನ ಕೆಲವು ಸ್ನೇಹಿತರೊಂದಿಗೆ ಒಂದು ಬಾತ್ ಟಬ್ ಭರ್ತಿ ಒಂದು ಲಕ್ಷ ರಷ್ಯನ್ ರುಬೆಲ್ಸ್ ಚಿಲ್ಲರೆ ನಾಣ್ಯಗಳನ್ನ ಐಫೋನ್ ಮಳಿಗೆಗೆ ತಂದು ಕೊಟ್ಟು ನೂತನವಾಗಿ ಬಿಡುಗಡೆಯಾದ ಆಪಲ್ ಐಫೋನ್ ಎಕ್ಸ್ ಎಸ್ ಮೊಬೈಲ್ ಅನ್ನು ಖರೀದಿಸಿದ್ದಾರೆ.

ಬರೋಬ್ಬರಿ 350 ಕೆಜಿ ತೂಕದ ಬಾತ್ ಟಬ್ ಅನ್ನು ಮಾಲ್ ಒಳಗೆ ಬಿಡಲು ಮೊದಲು ಭದ್ರತಾ ಸಿಬ್ಬಂದಿ ಒಪ್ಪದೇ ಇದ್ದಾಗ ಕೊವೆಲೆಂಕೊ ಭದ್ರತಾ ಸಿಬ್ಬಂದಿಗಳ ಮನವೊಲಿಸಿ ನಂತರ ಅವರ ಅನುಮತಿಯ ಮೇರೆಗೆ ಮಳಿಗೆಗೆ ಕೊಂಡೊಯ್ದಿದ್ದಾರೆ. ಕೊವೆಲೆಂಕೊ ಐಫೋನ್ ಕೊಳ್ಳಲು ನೀಡಿದ ಮೊತ್ತ ೧೪೦೦ ಡಾಲರ್ ಚಿಲ್ಲರೆ ನಾಣ್ಯಗಳಾಗಿದೆ. ಇದನ್ನು ಕಂಡ ಮಳಿಗೆಯ ಮಾಲೀಕ ಬೆಕ್ಕಸ ಬೆರಗಾಗಿದ್ದಾನೆ.

 

 

 

 

ಕೊವೆಲೆಂಕೊ ಇವೆಲ್ಲವನ್ನು ವಿಡಿಯೊ ಮಾಡಿದ್ದು, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಷ್ಯಾದ ಅನೇಕ ಮಳಿಗೆಗಳಲ್ಲಿ ಚಿಲ್ಲರೆ ಸಮಸ್ಯೆ ದಿನನಿತ್ಯದ ಕಿರಿಕಿರಿಯಾಗಿದ್ದು . ಎಷ್ಟೋ ಬಾರಿ ಸರಿಯಾದ ಚಿಲ್ಲರೆ ನೀಡದಿದ್ದರೆ ಮಾರಾಟಗಾರರು ವಸ್ತುಗಳನ್ನೇ ಗ್ರಾಹಕರಿಗೆ ಮಾರದ ಪರಿಸ್ಥಿತಿ ಏರ್ಪಟ್ಟಿದ್ದು . ಈ ಸಮಸ್ಯೆಯ ಬಗ್ಗೆ ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top