fbpx
ದೇವರು

ಕಾರ್ತಿಕ ಮಾಸದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಯಾಕೆ ಶ್ರೇಷ್ಠ,ಯಾವ್ಯಾವ ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ರೆ ಒಳ್ಳೆಯದು ಗೊತ್ತಾ

ಕಾರ್ತಿಕ ಮಾಸದಲ್ಲಿ ಶಿವನ ನಾಮ ಸ್ಮರಣೆ, ಶಿವನ ದರ್ಶನ, ಶಿವನ ದೇವಾಲಯಗಳಿಗೆ ಯಾತ್ರೆಯನ್ನು ಮಾಡುವುದು ಒಂದು ಪ್ರತೀತಿಯಾಗಿದೆ. ಕಾರ್ತಿಕ ಮಾಸದಲ್ಲಿ ಜ್ಯೋತಿರ್ಲಿಂಗ ದರ್ಶನವನ್ನು ಮಾಡಬೇಕು.
ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಮಾಡಬೇಕು ? ಆದರೆ ಅದು ಕಷ್ಟ. ದ್ವಾದಶ ಎಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನವನ್ನು ನಾವು ಮಾಡಲಿಲ್ಲ, ಸಾಧ್ಯವಾಗಲಿಲ್ಲ ಎಂದರೂ ಪರವಾಗಿಲ್ಲ, ನಮ್ಮ ಹತ್ತಿರದಲ್ಲಿ ಇರುವ ಯಾವುದಾದರೂ ಒಂದು ಜ್ಯೋತಿರ್ಲಿಂಗ ದೇವಾಲಯಕ್ಕೆ ಸೋಮವಾರದ ದಿನ ಹೋಗಿ ಯಥಾನುಶಕ್ತಿ ನಿಮ್ಮ ಕೈಲಾದ ಸೇವೆಯನ್ನು ಮಾಡಿ ,ದೀರ್ಘದಂಡ ನಮಸ್ಕಾರವನ್ನು ಮಾಡಿ.
ಜೊತೆಗೆ ಕಾರ್ತಿಕ ಮಾಸದಲ್ಲಿ ಶಿವ ನಾಮವನ್ನು ಜಪಿಸಿದರೆ ವ್ಯವಸ್ಥಿತವಾದ ಅನುಕೂಲಗಳನ್ನು ಪಡೆಯುತ್ತೀರ.

 

 

 

ನೀವು ಏನೇ ಕಾರ್ಯಗಳನ್ನು ಮಾಡಲು ಹೋದರು ದೈವಾನುಗ್ರಹ ಬೇಕೇಬೇಕು. ಶಿವನ ಅನುಗ್ರಹ ಬೇಕು.ಅದಕ್ಕೆ ಗ್ರಾಮೀಣ ಭಾಷೆಯಲ್ಲಿ ಹಿರಿಯರು ಹೇಳುತ್ತಾರೆ.ಶಿವ ಕೊಟ್ಟರೆ ನಾವು ವ್ಯವಸ್ಥಿತವಾಗಿ ಅನುಕೂಲಗಳನ್ನು ಪಡೆಯ ಬಹುದೇ ವಿನಹ ಮನುಷ್ಯ ಕೊಡುವುದು ಶಾಶ್ವತವಲ್ಲ.ಆ ಶಿವನ ಅನುಗ್ರಹ ಬಂದಾಗ ಯಾವ ಗ್ರಹದ ಬಲ ನಮ್ಮ ಮೇಲೆ ಇಲ್ಲ ಎಂದರೂ ಸಹಿತ ಮದುವೆ ಮುಂಜಿ ಮತ್ತು ಶುಭ ಕಾರ್ಯಗಳು ನಡೆಯುತ್ತವೆ. ಗೃಹ ಪ್ರವೇಶ, ಆಸ್ತಿ ಖರೀದಿ, ಎಲ್ಲವೂ ನಡೆಯುತ್ತದೆ. ಜನ್ಮದಲ್ಲೇ ಶನಿ ಇದ್ದರೂ ಸಹಿತ ಅದೆಷ್ಟೊ ಜನಕ್ಕೆ ಅಧಿಕಾರಗಳು ಪ್ರಾಪ್ತಿಯಾಗುತ್ತದೆ. ಅದಕ್ಕೆ ಶಿವನ ಅನುಗ್ರಹ ಎನ್ನುವುದು ಬೇಕು. ಶಿವನ ಅನುಗ್ರಹ ಪಡೆಯುವುದಕ್ಕೆ ಈ ಕಾರ್ತಿಕ ಮಾಸ ತುಂಬಾ ಪವಿತ್ರವಾದದ್ದು.

ಈ ಕಾರ್ತಿಕ ಮಾಸದಲ್ಲಿ ಹುಣ್ಣಿಮೆ ಬರಲಿದೆ,ಅದನ್ನು ಕಾರ್ತಿಕ ಹುಣ್ಣಿಮೆಯೆಂದು ಕರೆಯಲಾಗುತ್ತದೆ.ಈ ದಿನ ತುಂಬಾ ವಿಶೇಷವಾಗಿದ್ದು, ಪೌರ್ಣಮಿಯ ದಿನ ಶಿವಾಲಯಕ್ಕೆ ಹೋಗಬೇಕು, ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಬೇಕು.ಆದ್ದರಿಂದ ಎಲ್ಲರೂ ಕಾರ್ತಿಕ ಮಾಸವನ್ನು ಸದುಪಯೋಗ ಪಡುಸಿಕೊಳ್ಳಿ ಶಿವನ ಕೃಪೆಗೆ ಪಾತ್ರರಾಗಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top