fbpx
ಮನೋರಂಜನೆ

ಯಶ್​ ತುಂಬಾ ಕೆಟ್ಟವರು ಅನ್ನೋ ಫೀಲಿಂಗ್​ ಕೊಡ್ತಾರಂತೆ ಚಿನ್ನಾರಿ ಮುತ್ತ ವಿಜಯ್​ ರಾಘವೇಂದ್ರ

ಚಿನ್ನಾರಿ ಮುತ್ತ ವಿಜಯ್​​ ರಾಘವೇಂದ್ರ ನಟಿಸಿ ಹಾಗೂ ಇದೆ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ರೋ ‘ಕಿಸ್ಮತ್​ ; ಸಿನಿಮಾ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗ್ಲೆ ಈ ಸಿನಿಮಾ ಎಲ್ಲರ ಗಮನ ಸೆಳೆದಿದ್ದು, ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಹಾಗೂ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿದೆ. ಈ ಸಿನಿಮಾ ಅನೇಕ ಸ್ಟಾರ್​ಗಳು ಶುಭ ಕೋರಿದ್ದು. ಇದೀಗ ರಾಕಿಂಗ್ ಸ್ಟಾರ್ ಯಶ್, ‘ಕಿಸ್ಮತ್’ ಚಿತ್ರಕ್ಕೆ ಶುಭವಾಗಲಿ ಎಂದು ಒಂದು ವೀಡಿಯೋ ಮೂಲಕ ಶುಭ ಹಾರೈಸಿದ್ದಾರೆ.

ಹಾಗದರೆ ವಿಡಿಯೋ ದಲ್ಲಿ ರಾಕಿಂಗ್ ಸ್ಟಾರ್ ಯಶ್ ಏನ್ ಹೇಳಿದ್ದಾರೆ?

 

‘ ನಾನು ತುಂಬಾ ಜನರನ್ನು ನೋಡಿದ್ದೀನಿ. ಆದ್ರೆ ರಾಘು ತುಂಬಾ ಸ್ಪೆಷಲ್ ‘ ಎಂದಿದ್ದಾರೆ ಯಶ್ . ವಿಜಯ್ ರಾಘವೇಂದ್ರ ಮತ್ತು ಯಶ್​ ಹಲವು ದಿನದ ಸ್ನೇಹಿತರು. ಈ ಹಿಂದೆ ಇವರಿಬ್ಬರೂ ‘ಗೋಕುಲ’ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ತನ್ನ ಸ್ನೇಹಿತನ ಬಗ್ಗೆ ಮಾತನಾಡಿದ ಯಶ್​​, ” ರಾಘು ಜೊತೆ ಇದ್ದಾಗಲೆಲ್ಲ ನಾನು ತುಂಬಾ ಕೆಟ್ಟವನು ಅನ್ನೋ ಫೀಲಿಂಗ್​​ ಕೊಡ್ತಾನೆ. ಯಾಕಂದ್ರೆ ನಾನೇ ತುಂಬಾ ಒಳ್ಳೆಯವನ್ನು ಅನ್ನೋ ಫೀಲಿಂಗ್​​ನಲ್ಲಿ ನಾನಿರುತ್ತೀನಿ ಆದ್ರೆ ಅವನು ನನಗಿಂತ ತುಂಬಾ ಒಳ್ಳೆವನು ಅದಕ್ಕಾಗಿ ನನಗೆ ಆ ಫೀಲಿಂಗ್​​ ಬರುತ್ತೆ. ಎಷ್ಟೋ ವಿಷಯದಲ್ಲಿ ನಾನು ಅವನನ್ನು ಫಾಲೋ ಮಾಡ್ಬೇಕು ಅಂತ ಅನ್ಕೋತಿನಿ ಅಷ್ಟು ಶಿಸ್ತು ಅವನಿಗಿದೆ. ನಾನು ತುಂಬಾ ಜನರನ್ನು ನೋಡಿದ್ದೀನಿ. ಆದ್ರೆ ರಾಘು ತುಂಬಾ ಸ್ಪೆಷಲ್ ” ಎಂದಿದ್ದಾರೆ .

 

ಮಾತು ಮುಂದುವರೆಸಿ ‘ನನ್ನ ಫ್ರೆಂಡ್ ರಾಘು ಫಸ್ಟ್​​ ಟೈಮ್​​ ಒಂದು ಸಿನಿಮಾ ಡೈರೆಕ್ಷನ್​​ ಮಾಡಿದ್ದಾನೆ. ಇದೇ ವಾರ ಆ ಸಿನಿಮಾ ಬಿಡುಗಡೆಯಾಗುತ್ತಿದೆ. ಅವನಿಗೆ ಒಳ್ಳೆದಾಗ್ಲಿ ‘ ಎಂದು ಶುಭಾಹಾರೈಸಿದ್ದಾರೆ ಯಶ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top