fbpx
ವಿಶೇಷ

ಫಿನ್ಲಂಡ್ ಶಿಕ್ಷಣ ಪದ್ಧತಿಯ ಕುರಿತಾದ ಸ್ವಾರಸ್ಯಕರ ಸಂಗತಿಗಳನ್ನು ನೀವು ತಪ್ಪದೆ ಓದಲೇಬೇಕು.

ಯಾವುದೇ ಒಂದು ದೇಶ ಶೈಕ್ಷಣಿಕ ವಾಗಿ ತನ್ನನು ತಾನೂ ಒಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದಾದಲ್ಲಿ ಆ ದೇಶದ ಶಿಕ್ಷಣ ಪದ್ದತಿಯಲ್ಲಿ ಅನೇಕ ವಿಶೇಷತೆಗಳು ಇರಬೇಕು ಹಾಗೂ ಆಗಿಂದ್ದಾಗೆ ಶಿಕ್ಷಣ ಪದ್ದತಿಗಳೂ ನವೀಕರಣಗೊಳ್ಳುತ್ತಿರಬೇಕು. ಮುಂದುವರೆದ ದೇಶಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಆ ದೇಶಗಳ ಕ್ಷಿಪ್ರ ಗತಿಯ ಬದಲಾವಣೆಗೆ ಆ ಆ ದೇಶದ ಶಿಕ್ಷಣ ಪದ್ದತಿಯೇ ಬಹುದೊಡ್ಡ ಕಾರಣ ಎಂದು ಗೊತ್ತಾಗಿಬಿಡುತ್ತದೆ. ಹೀಗಿರುವಾಗ ಇಡೀ ಜಗತ್ತಿನ್ನಲ್ಲೇ ಶಿಕ್ಷಣ ಪದ್ದತಿಯಲ್ಲಿ ಜಪಾನ್ ದೇಶ ಮುಂಚೂಣಿಯಲ್ಲಿದ್ದು, ಈ ಸಾಲಿಗೆ ಸಾವಿರ ಸರೋವರಗಳ ನಾಡೆಂದು ಹೆಸರುವಾಸಿಯೆಯಾದ ಫಿನ್ಲಂಡ್ ಸಹ ಸೇರ್ಪಡೆಯಾಗಿದೆ.

 

ನಾವೀಗ ಫಿನ್ಲಂಡ್ ಶಿಕ್ಷಣ ಪದ್ಧತಿಯ ವಿಶೇಷತೆಗಳನ್ನು ಓದಿ ತಿಳಿದುಕೊಳ್ಳೋಣ :

 

1. ಫಿನ್ಲಂಡ್ ನಲ್ಲಿ ಮಗು ಶಾಲೆಗೆ ಹೋಗುವುದು ತನ್ನ 7 ನೆ ವಯಸ್ಸಿನಲ್ಲಿ.

2. ಮಗುವಿಗೆ 7 ವರ್ಷ ಆಗುವ ತನಕ ಮನೆಯಲ್ಲಿ ಮತ್ತು ಮನೆಯ ಹೊರಗಿನ ವಾತಾವರಣದಲ್ಲಿ ಕಂಡಿದ್ದನ್ನು ಮಾತ್ರ ಗಮನಿಸಿ ಕಲಿಯಲು ಅಲ್ಲಿ ಪ್ರೋತ್ಸಾಹಿಸಲಾಗುತ್ತದೆ.

3. ಮಕ್ಕಳು 7 ರಿಂದ 12 ನೆಯ ವಯಸ್ಸಿನವರೆಗೆ ಶಾಲೆಯಲ್ಲಿ 50% ಸಮಯವನ್ನು, ಮತ್ತು 50% ಸಮಯವನ್ನು ರಜೆಯಲ್ಲಿ ಕಳೆಯುವ ವ್ಯವಸ್ಥೆ ಮಾಡಿದ್ದು. ಇದರಿಂದಾಗಿ ಮಕ್ಕಳಿಗೆ ಶಾಲೆ ಯಾವುದೇ ಕಾರಣಕ್ಕೂ ಕಿರಿಕಿರಿ ಎನಿಸುವುದಿಲ್ಲವಂತೆ.

4. ಶಾಲೆಯ ಸಮಯವೂ ಕಡಿಮೆ ಇದ್ದೂ. ಓದಿನಷ್ಟೇ, ಕ್ರೀಡೆ, ಕಲೆ, ಸಂಗೀತ ಕ್ಕೂ ಸಮಯ ಮೀಸಲಿಡುತ್ತಾರೆ.

5. ಮಕ್ಕಳು ಸುಸ್ತಾದರೆ ರೆಸ್ಟ್ ತೆಗೆದುಕೊಳ್ಳಲು ರಿಲಾಕ್ಸಿಂಗ್ ರೂಮ್ ಗಳಿರುತ್ತವೆ.

6. 13 ನೆಯ ವಯಸ್ಸಿನವರೆಗೂ ಗ್ರೇಡಿಂಗ್, ರಿಪೋರ್ಟ್ ಕಾರ್ಡ್ ಕೊಡುವ ಪದ್ಧತಿ ಇಲ್ಲ. ಆದುದರಿಂದ ಮಕ್ಕಳಿಗೆ ಶಾಲೆಯಲ್ಲಿ ಒಂದಿಷ್ಟೂ ಒತ್ತಡ ಇರುವುದಿಲ್ಲ.

7. ಒಂದು ವೇಳೆ ಪೋಷಕರಿಗೆ ಮಕ್ಕಳ ಪ್ರಗತಿಯನ್ನು ತಿಳಿಯುವ ಕುತೂಹಲವಿದ್ದರೆ ಅದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

8. ನಮ್ಮ ದೇಶದಲ್ಲಿ ಮಕ್ಕಳಿಗೆ ಹೋಂ ವರ್ಕ್ ದೇ ಭಾರಿ ಟೆನ್ಶನ್ ಆದರೆ ಫಿನ್ಲಂಡ್ ನಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಇರುವುದಿಲ್ಲ. ಹೋಮ್ ವರ್ಕ್ ಮಾಡಲು ಇಷ್ಟವಿದ್ದವರು ತಮಗೆ ಇಷ್ಟವಾದ
ವಿಷಯದ ಮೇಲೆ ಹೋಮ್ ವರ್ಕ್ ಮಾಡಬಹುದು.

9. ಶಾಲೆಯಲ್ಲಿ ಒಬ್ಬ ವೈದ್ಯರು ಮಕ್ಕಳ ಆರೋಗ್ಯ ಸಲಹೆಗಾಗಿ ಸದಾ ಸಿದ್ದರಿರುತ್ತಾರೆ.

10. ಒಂದು ಶಾಲೆಯಲ್ಲಿ ಗರಿಷ್ಟ ಅಂದರೆ 600 ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ.

11. ಫಿನ್ಲಂಡ್ ನಲ್ಲಿ ಖಾಸಗಿ ಶಾಲೆಗಳು ಇಲ್ಲ. ಬರೀ ಸರ್ಕಾರಿ ಶಾಲೆಗಳು. ಪ್ರತಿಯೊಬ್ಬ ಮಗುವಿಗೂ ವಿದ್ಯಾಭ್ಯಾಸದಲ್ಲಿ ಸಮಾನತೇ ಎದ್ದು ಕಾಣುವುದು ಅಲ್ಲಿನ ವಿಶೇಷವಾಗಿದೆ.

12. ಫಿನ್ಲಂಡ್ ನಲ್ಲಿ 99% ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಸಿಗುತ್ತದೆ.

13. ಒಂದು ಸರ್ವೇ ಪ್ರಕಾರ ಫಿನ್ಲಂಡ್ ನಲ್ಲಿ ಜಗತ್ತಿನಲ್ಲೇ ಅತ್ಯಂತ ಸಂತೋಷವಾಗಿರುವ ಶಾಲಾ ಮಕ್ಕಳು ಇದ್ದಾರೆ.

14. ಫಿನ್ಲಂಡ್ ವಿದ್ಯಾಭ್ಯಾಸ ಪದ್ದತಿ ಅರಿಯಲು ಬೇರೆ ಬೇರೆ ದೇಶದ ಪ್ರತಿನಿಧಿಗಳು ಬರುತ್ತಾರೆ. ಆಲ್ಲಿ ಎಜುಕೇಶನ್ ಟೂರಿಸಮ್ ನಿಂದ ದೇಶಕ್ಕೆ ದೊಡ್ಡ ಆದಾಯವಿದೆ ಎನ್ನಲಾಗಿದೆ.

 

ಎಲ್ಲಕ್ಕಿಂತ ಮನಸೂರೆಗೊಳ್ಳುವ ಪದ್ಧತಿ ಯಾವುದೆಂದರೆ-

ಫಿನ್ಲಂಡ್ ನಲ್ಲಿ ಶಾಲೆಯ ಟೀಚರ್ ಆಗುವುದೆಂದರೆ ಇಲ್ಲಿನ IAS / IPS ಹುದ್ದೆಗೆ ಸಮಾನ. ಅಲ್ಲಿ ಟೀಚರ್ ಕೆಲಸ ಸಿಗುವುದು ತೀರಾ ಕಷ್ಟವಂತೆ. (ನಮ್ಮಲ್ಲಿ ಯಾವುದೇ ಕೆಲಸ ಸಿಗದಿದ್ದರೆ ಟೀಚರ್ ಕೆಲಸಕ್ಕೆ ಬರುವವರು ಜಾಸ್ತಿ – ಅಪವಾದವಿದೆ). ಫಿನ್ಲಂಡ್ ನಲ್ಲಿ ತುಂಬಾ ಸಾಮರ್ಥ್ಯವಿರುವವರಿಗೆ ಮಾತ್ರ ಟೀಚರ್ ಕೆಲಸ ಸಿಗುವುದಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top