fbpx
ಕ್ರಿಕೆಟ್

ಚೆಂಡು ವಿರೂಪ ಪ್ರಕರಣದಲ್ಲಿ ಆಟಗಾರರ ಮೇಲಿನ ನಿಷೇಧವನ್ನು ಹಿಂಪಡೆಯಲು ಅಸಾಧ್ಯ ಎಂದ ಕ್ರಿಕೆಟ್ ಬೋರ್ಡ್.

ಕ್ರಿಕೆಟ್ ನ್ ಕೆಲವು ನಿಯಮಗಳನ್ನು ಆಟಗಾರರು ಉಲ್ಲಂಘಿಸಿದರೆ ಆಟಗಾರರಿಗೆ ದಂಡ ಅಥವಾ ನಿಷೇದ ಶತಸಿದ್ಧ ಎಂಬುದು ಸ್ಪಷ್ಟವಾಗಿರುವಾಗ. ಆಸೀಸ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್ಕ್ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧವನ್ನು ಅನುಭವಿಸಬೇಕಾದ ಸಾಧ್ಯತೆಗಳು ಹೆಚ್ಚಾಗಿವೆ .

 

ಆಸ್ಟ್ರೇಲಿಯನ್​ ಕ್ರಿಕೆಟರ್ಸ್​ ಅಸೋಸಿಯೇಷನ್​ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ, ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ . ನಿಷೇಧವನ್ನು ಹಿಂಪಡೆಯಲು ಇದು ಸೂಕ್ತ ಸಮಯವಲ್ಲ ಎಂದಿದೆ. ಸದ್ಯದ ಬ್ಯಾನ್​ ಸರಿಯಾದ ನಿರ್ಧಾರ ಮತ್ತು ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್​ನ ಘನತೆಗೆ ಕುಂದು ತಂದಿದೆ ಎಂದು ಹೇಳುವ ಮೂಲಕ ಆಟಗಾರರಿಗೆ ನಿರಾಸೆಯನ್ನು ಹೊತ್ತು ತಂದಿದೆ.

 

ಏನಿದು ಚೆಂಡು ವಿರೂಪ ಪ್ರಕರಣ ?

24 ಮಾರ್ಚ್ 2018ನಲ್ಲಿ ಕೇಪ್​ಟೌನ್​ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮೂರನೇ ದಿನದಾಟದಲ್ಲಿ ಊಟದ ವಿರಾಮದ ಬಳಿಕ ಆಸೀಸ್​ ಆಟಗಾರ ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಇದಕ್ಕೆ ಸಹಕಾರ ನೀಡಿದ ಆರೋಪದಲ್ಲಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಮೇಲೆ ನಿಷೇಧ ಹೇರಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top