fbpx
ದೇವರು

ಅಯ್ಯಪ್ಪ ಸ್ವಾಮಿಯೇ ಗೌತಮ ಬುದ್ಧ ಅನ್ನೋದಿಕ್ಕೆ ಸಿಕ್ಕಿವೆ ಅಚ್ಚರಿ ಮೂಡಿಸುವ ಸಾಕ್ಷ್ಯಾಧಾರಗಳು

ಸುಮಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮತ್ತು ಗೌತಮ ಬುದ್ಧ ಒಂದೇ ಎಂಬ ವಿಚಾರಗಳು ತೆಲೆಯಿತ್ತಿ ನಿಂತಿದ್ದು. ಇದಕ್ಕೆ ಅನುಗುಣವಾಗಿ ಅನೇಕ ಸಂಶೋಧನೆಗಳು ಈ ಕ್ಷಣಕ್ಕೂ ನಡೆಯುತ್ತಲೇ ಇವೆ. ಆದರೆ ಇದೀಗ ಅಯ್ಯಪ್ಪ ಸ್ವಾಮಿ ಮತ್ತು ಗೌತಮ ಬುದ್ಧ ಒಂದೇ ಎಂಬ ವಿಚಾರಕ್ಕೆ ಪುಷ್ಟಿ ನೀಡುವಂತೆ ಅನೇಕ ಸಾಕ್ಷ್ಯಾಧಾರಗಳು ದೊರೆತಿದ್ದು ಎಲ್ಲರಲ್ಲೂ ಇದು ಅಚ್ಚರಿಯನ್ನುನುಂಟು ಮಾಡಿದೆ.

ಹಾಗಾದರೆ ಅಚ್ಚರಿ ಮೂಡಿಸುವ ಆ ಸಾಕ್ಷ್ಯಧಾರಗಳು ಯಾವುವು ಎಂದು ಮುಂದೆ ಓದಿ ತಿಳಿಯೋಣವೇ?
1. ಕೇರಳಿಗರು ಶಬರಿಮಲೆ ಅಯ್ಯಪ್ಪ ಸ್ವಾಮಿ ಯನ್ನು ‘ಧರ್ಮಶಾಸ್ತ’ ಎಂದು ಕರೆಯುತ್ತಾರೆ. ಇದರಲ್ಲೇನು ವಿಶೇಷ ಅಂತೀರಾ ? ಹೌದು ವಿಶೇಷವಿದೆ. ‘ಧರ್ಮಶಾಸ್ತ’ ಎನ್ನುವುದು ಬುದ್ಧನ ಮತ್ತೊಂದು ಹೆಸರು ಮತ್ತು ಧಮ್ಮ ಅಥವಾ ಧರ್ಮ ಅನ್ನೋದು ಬೌದ್ಧಧರ್ಮಕ್ಕೆ ಇರುವ ಇನ್ನೊಂದು ಹೆಸರು ಕೂಡ. ಹೀಗೆ ಧರ್ಮವನ್ನು ಶಾಸನವಾಗಿಸಿದವನನ್ನೇ ಬುದ್ಧ ಎಂದು ಕರೆಯೋದು. ಬುದ್ದನಿಗೆ ‘ಶಾಸ್ತ’ ಅನ್ನೋ ಮತ್ತೊಂದು ಹೆಸರಿತ್ತು ಅನ್ನುವ ವಿಷಯ ಅಮರಕೋಶದಲ್ಲಿಯೇ ದಾಖಲಾಗಿದೆ.

 

 

2. ಸ್ವಾಮಿ ಅಯ್ಯಪ್ಪನ ಆರಾಧಕರು ಕೇವಲ ದಕ್ಷಿಣದವರಾಗಿದ್ದು, ಉತ್ತರ ಭಾರತದಲ್ಲಿ ಅಯ್ಯಪ್ಪನ ಪೂಜೆ ನಡೆಯೋಲ್ಲ.ಆದ್ದರಿಂದ ಕೆಲವೊಂದು ಸಾರಿ ಅಯ್ಯಪ್ಪನನ್ನು ದಕ್ಷಿಣದ ದೇವರು ಎಂದು ಸಹ ಕರೆಯುವುದುಂಟು. ಈ ವಿಷಯದ ತಿರುಳು ಏನೆಂದರೆ ದಕ್ಷಿಣದಲ್ಲಿ ಪೂಜಿಸಲ್ಪಡುವ ಬಹುತೇಕ ಹಿಂದೂ ದೇವರುಗಳು ಉತ್ತರದಲ್ಲೂ ಪೂಜಿಸಲ್ಪಡುತ್ತಾರೆ. ಆದರೆ ಅಯ್ಯಪ್ಪ ಸ್ವಾಮಿಯ ಪೂಜೆ ಉತ್ತರದಲ್ಲಿ ನಡೆಯದು ಏಕೆಂದರೆ ಅಯ್ಯಪ್ಪ ಸ್ವಾಮಿ ಹಿಂದೂ ದೇವರಲ್ಲ ಎಂಬುದಾಗಿದೆ. ಆದರಿಂದ ಅಯ್ಯಪ್ಪ ಸ್ವಾಮಿಯು ಬುದ್ದನೇ ಆಗಿರಬಹುದೆಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ.

 

 

3. ಶಬರಿಮಲೆ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ದಿನ ಗೋಚರಿಸುವ ಮಕರ ಜ್ಯೋತಿಯ ಕಾರಣ ಶಬರಿಮಲೆಗೆ ‘ಪೋತಲಕ’ ಎಂಬ ಹೆಸರು ಕೂಡ ಇದ್ದು. ವಿಶೇಷ ಏನೆಂದರೆ ಲಾಸದಲ್ಲಿರುವ ಬೌದ್ಧ ‘ಗುರು ದಲೈ ಲಾಮ’ ನ ಅರಮನೆಯ ಹೆಸರು ಕೂಡ ‘ಪೋತಲ’ ಎಂಬುದಾಗಿದೆ.

 

 

4. ಈಗಿನ ಶಬರಿಮಲೇಲಿ ಇರೋ ಅಯ್ಯಪ್ಪನ ದೇವಸ್ಥಾನ ಕಟ್ಟಿಸಿದ್ದು ‘ಪಾಂಡಲಂ’ ಮನೆತನದ ಒಬ್ಬ ರಾಜ ಹಾಗೂ ಆ ರಾಜ ಬೌದ್ಧನಾಗಿದ್ದ ಎಂಬ ವಿಚಾರ ಅಯ್ಯಪ್ಪ ಸ್ವಾಮಿಯೇ ಗೌತಮ ಬುದ್ಧ ಅನ್ನೋದಿಕ್ಕೆ ಸಿಕ್ಕಿರುವ ಒಂದು ಉತ್ತಮ ಸಾಕ್ಷ್ಯಧಾರವಾಗಿದೆ.

 

5. ಸಾಮಾನ್ಯವಾಗಿ ಹಿಂದೂ ದೇವಾಲಯಗಳೆಲ್ಲವು ಜನವಿರುವ ಪ್ರದೇಶಗಳಲ್ಲಿರುತ್ತವೆ. ಆದರೆ ಬೌದ್ಧ ದೇವಾಲಯಗಳು ಕಾಡಿನಲ್ಲಿರುತ್ತವೆ. ಈಗ ನೋಡಿ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ಬೌದ್ಧ ದೇವಾಲಯಗಳಂತೆ ಕಾಡಿನಲ್ಲಿ ಇಲ್ಲವೇ ?

 

 

6. ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದೊಳಗೆ ಜಾತಿ ಧರ್ಮದ ಭೇದವಿಲ್ಲ. ಯಾವುದೇ ಜಾತಿ ಮತ್ತು ಧರ್ಮದ ಜನರಿಗೂ ದೇವಸ್ಥಾನದೊಳಗೆ ಮುಕ್ತ ಪ್ರವೇಶವಿದೆ. ಇದು ಬೌದ್ಧ ಧರ್ಮದ ನಿಯಮವು ಸಹ ಆಗಿದ್ದು, ಬೌದ್ಧ ದೇವಾಲಯಗಳ್ಲಲಿ ಜಾತಿ ಧರ್ಮ ಗಳೆಂಬ ಬೇದಭಾವಗಳಿಲ್ಲ.

 

 

7. ಸಾಮಾನ್ಯವಾಗಿ ಬೌದ್ಧರು “ಅಷ್ಟ ಶೀಲಗಳ” ಪಾಲನೆ ಮಾಡ್ತಾರೆ. ಅದರಂತೆಯೇ ಅಯ್ಯಪ್ಪ ಸ್ವಾಮಿಯ ಭಕ್ತರು
“ಅಷ್ಟ ಶೀಲಗಳ” ನ್ನು ಪಾಲಿಸುತ್ತಾರೆ.

8. ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಮಗೆಲ್ಲರಿಗೂ ಗೋಚರಿಸುವ ಮೊದಲ ವಿಶೇಷತೆ ಏನೆಂದರೆ ಅದು 18 ಮೆಟ್ಟಿಲುಗಳು. ಈ 18 ಮೆಟ್ಟಿಲುಗಳಿಗೂ ಮತ್ತು ಬುದ್ಧನಿಗೂ ಸಂಬಂಧವಿದ್ದು, ಈ 18 ಮೆಟ್ಟಿಲುಗಳು ಬುದ್ಧನ 18 ಹೆಸರುಗಳನ್ನು ಸೂಚಿಸುತ್ತವೆ ಎಂದು ಕೆಲವರು ಹೇಳುತ್ತಾರೆ.
ಈ 18 ಮೆಟ್ಟಿಲುಗಳು ಕುರಿತು ಇನ್ನೊಂದು ವಿಚಾರ ಇದ್ದು ಅದನ್ನು ಹೀಗೆ ವಿವರಿಸಬಹುದಾಗಿದೆ :
18 = 4 ಸತ್ಯಗಳು, 8 ಸತ್ಯ ಮಾರ್ಗಗಳು (ಅಷ್ಟಮಾರ್ಗ), 3 ರತ್ನಗಳು (ಬುದ್ಧ, ಧರ್ಮ ಮತ್ತು ಸಂಘ) ಹಾಗೂ 3 ಚಿತ್ತಭಾವನೆಗಳು (ಕರುಣ, ಮುದಿತ ಮತ್ತು ಮೈತ್ರಿ).

 

 

 

9. ಭಾರತದಲ್ಲಿ ಅಯ್ಯಪ್ಪ ಸ್ವಾಮಿಯ ಆರಾಧನೆ ಅಂತ್ಯವಾಗಿದ್ದು 8 ನೆ ಶತಮಾನದಲ್ಲಿ ಅಂದರೆ ಆ ವೇಳೆಗಾಗಲೇ ಭಾರತದಲ್ಲಿ ಬೌದ್ಧ ಧರ್ಮದ ಅಂತ್ಯ ಸಮೀಪಿಸಿತ್ತು. ಇದರಿಂದ ನಮಗೇನು ತಿಳಿದು ಬರುತ್ತದೆ ಎಂದರೆ ಶಬರಿಮಲೆ ಅಯ್ಯಪ್ಪ ಸ್ವಾಮಿಯು 8 ನೆ ಶತಮಾನದ ಸಮಯದಲ್ಲಿ ಬುದ್ದನೇ ಆಗಿದ್ದು, ಬೌದ್ಧ ಧರ್ಮ ಭಾರತದಲ್ಲಿ ನಶಿಸಿದ ನಂತರ ಕೆಲವರು ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ಹಿಂದೂ ದೇವರೆಂದು ಪ್ರಚಾರ ಮಾಡಿರಬಹುದು
ಎಂದು ಊಹಿಸಲಾಗಿದೆ.

 

10. ಅಯ್ಯಪ್ಪ ಸ್ವಾಮಿಯ ಬಲಗೈನಲ್ಲಿ ವಜ್ರದಂಡವಿದ್ದು, ಇದು ಬೋಧಿಸತ್ವನ ಗುರುತಾಗಿದೆ.

 

 

11. ಅಯ್ಯಪ್ಪ ಸ್ವಾಮಿ ಭಕ್ತರು “ಸ್ವಾಮಿ ಶರಣಂ ಅಯ್ಯಪ್ಪ” ಅಂತ ಭಜನೆ ಮಾಡುವುದನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಾ ಹಾಗದರೆ ಇದು ಬೌದ್ಧರ “ಬುದ್ಧಂ ಶರಣಂ ಗಚ್ಚಾಮಿ” ಅನ್ನೋ ಮಂತ್ರದ ತರಹವೇ ಇದೆ ಅನಿಸೋದಿಲ್ಲವೇ?. ಮತ್ತು ಮತ್ಯಾವ ಹಿಂದೂ ದೇವರ ಸ್ತುತಿಯಲ್ಲೂ “ಶರಣಂ” ಅಂತ ಬಳಕೆ ಮಾಡದಿರುವುದನ್ನು ನೀವು ಗಮನಿಸಬಹುದಾಗಿದೆ.

 

 

ಈ ಮೇಲಿನ ಸಾಕ್ಷ್ಯಧಾರಗಳನ್ನು ಗಮನಿಸಿದಾಗ ಅಯ್ಯಪ್ಪ ಸ್ವಾಮಿಯೇ ಗೌತಮ ಬುದ್ಧ ಅನ್ನೋ ಯೋಚನೆಗಳು ನಮ್ಮ ತಲೆಯನ್ನು ಹೊಕ್ಕುತ್ತವೆ ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top