ತಿಂಡಿ ತೀರ್ಥ

ಬಾಯಲ್ಲಿ ನೀರು ಬರಿಸೋ ಗರಿಗರಿಯಾದ ಮಶ್ರೂಮ್ ಬೋಂಡಾ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ.

 ಮಶ್ರೂಮ್ಬೋಂಡಾ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ.

ಮಶ್ರೂಮ್ ಬೋಂಡಾ :

 

 

 

ಬೇಕಾಗುವ ಸಾಮಗ್ರಿಗಳು :

ಚಿಕ್ಕದಾಗಿ ಕತ್ತರಿಸಿಕೊಂಡ ಅಣಬೆ 1 ಕಪ್
ಬೇಯಿಸಿಕೊಂಡು ಸಿಪ್ಪೆ ತೆಗೆದ ಆಲೂಗೆಡ್ಡೆ 2
ಜೀರಿಗೆ 1 ಚಮಚ

ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ 3
ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ 1 ಚಮಚ
ಗರಂ ಮಸಾಲಾ ಪುಡಿ 1 ಚಮಚ

ಕೊತ್ತಂಬರಿ ಸೊಪ್ಪು ಸ್ವಲ್ಪ
ಅಚ್ಚ ಖಾರದ ಪುಡಿ ರುಚಿಗೆ ಬೇಕಾದಷ್ಟು
ಉಪ್ಪು ರುಚಿಗೆ ಬೇಕಾದಷ್ಟು
ಎಣ್ಣೆ

ಕಡಲೆ ಹಿಟ್ಟು ಅರ್ಧ ಕಪ್
ಕಾಳು ಮೆಣಸಿನಪುಡಿ ಅರ್ಧ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ

 

 

 

ಮಾಡುವ ವಿಧಾನ :ಮೊದಲಿಗೆ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ,ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ,ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ,ಚಿಕ್ಕದಾಗಿ ಕತ್ತರಿಸಿಕೊಂಡ ಅಣಬೆ,ಉಪ್ಪು ಹಾಕಿ ಚೆನ್ನಾಗಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು .ನಂತರ ಇದಕ್ಕೆ ಬೇಯಿಸಿಕೊಂಡು ಸಿಪ್ಪೆ ತೆಗೆದು ಪುಡಿಯ ರೀತಿ ಮಾಡಿಕೊಂಡ ಆಲೂಗೆಡ್ಡೆ ,ಗರಂ ಮಸಾಲಾ ಪುಡಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಬೇಕು .ಈ ಸಮಯದಲ್ಲಿ ಕಡಲೆ ಹಿಟ್ಟು ,ಕಾಳು ಮೆಣಸಿನಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್,ಉಪ್ಪು ,ಅಚ್ಚ ಖಾರದ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು .ನಂತರ ಆಗಲೇ ಕಲಸಿ ಪಕ್ಕದಲ್ಲಿ ಇಟ್ಟುಕೊಂಡ ಮಿಶ್ರಣವನ್ನು ಚಿಕ್ಕ ಚಿಕ್ಕದಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಾಡಿಕೊಂಡು ಬೋಂಡಾದ ಹಿಟ್ಟಿನಲ್ಲಿ ಇದನ್ನು ಮುಳುಗಿಸಿ ಬಿಸಿಯಾದ ಎಣ್ಣೆಯಲ್ಲಿ ಇದನ್ನು ಕರಿಯಬೇಕು .ಹೀಗೆ ಮಶ್ರೂಮ್ ಬೋಂಡಾ ಮಾಡಿಕೊಂಡು ತಿನ್ನಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top