ತಿಂಡಿ ತೀರ್ಥ

ಸಖತ್ ರುಚಿಯಾಗಿರುವ ಬಾಯಲ್ಲಿ ನೀರು ಬರಿಸೋ ಸ್ಟಫ್ಡ್ ಮಶ್ರೂಮ್ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ

 ಸ್ಟಫ್ಡ್ ಮಶ್ರೂಮ್ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು :ಅಣಬೆ (ಮಶ್ರೂಮ್) 10,ಮೊಸರು 2 ಚಮಚ,ಕಡಲೆ ಹಿಟ್ಟು 1 ಚಮಚ,ನಿಂಬೆ ರಸ ಕಾಲು ಚಮಚಧನಿಯಾ ಪುಡಿ ಅರ್ಧ ಚಮಚ,ಅಚ್ಚ ಖಾರದ ಪುಡಿ 1 ಚಮಚ,ಅರಿಶಿಣ 2 ಚಿಟಿಕೆ,ಗರಂ ಮಸಾಲಾ ಅರ್ಧ ಚಮಚಶುಂಠಿ ಪೇಸ್ಟ್ 1 ಚಮಚ,ಬೆಳ್ಳುಳ್ಳಿ ಪೇಸ್ಟ್ 1 ಚಮಚ,ರುಚಿಗೆ ಬೇಕಾದ ಉಪ್ಪು,ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ಅರ್ಧ,ಚಿಕ್ಕದಾಗಿ ಕತ್ತರಿಸಿಕೊಂಡ ಕ್ಯಾಪ್ಸಿಕಂ,ಎಣ್ಣೆ,ಚಿಕ್ಕದಾಗಿ ಕತ್ತರಿಸಿಕೊಂಡ ಹಸಿ ಮೆಣಸಿನಕಾಯಿ 2,ಕೊತ್ತಂಬರಿಸೊಪ್ಪು,ಬ್ರೆಡ್ ಕ್ರ್ಮ್ಪ್ಸ್ 2 ಚಮಚ,ಚೀಸ್ 1 ಚಮಚ.

 

 

 

ಮಾಡುವ ವಿಧಾನ :ಮೊದಲು ಒಂದು ಪಾತ್ರೆಗೆ ಮೊಸರು,ಕಡಲೆ ಹಿಟ್ಟು,ನಿಂಬೆ ರಸ,ಧನಿಯಾ ಪುಡಿ,ಅಚ್ಚ ಖಾರದ ಪುಡಿ,ಅರಿಶಿಣ,ಗರಂ ಮಸಾಲಾ ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ .ನಂತರ ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ,ಎಣ್ಣೆ ಬಿಸಿಯಾದ ಮೇಲೆ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ,ಚಿಕ್ಕದಾಗಿ ಕತ್ತರಿಸಿಕೊಂಡ ಕ್ಯಾಪ್ಸಿಕಂ ,ಹಸಿ ಮೆಣಸಿನಕಾಯಿ,ಆಗಲೇ ಕಲಸಿಟ್ಟುಕೊಂಡ ಮಸಾಲೆ 1 ಚಮಚ , ಕೊತ್ತಂಬರಿಸೊಪ್ಪು ,ಚೀಸ್ ,ಬ್ರೆಡ್ಕ್ರ್ಮ್ಪ್ಸ್ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಚೆನ್ನಾಗಿ ಪಲ್ಯದಂತೆ ಕಲಸಿಕೊಳ್ಳಿ .ಅಣಬೆಯನ್ನು ಚೆನ್ನಾಗಿ ಶುಚಿಗೊಳ್ಳಿಸಿ ಅದರ ಕೆಳಗಿನ ತೊಟ್ಟನ್ನು ಕತ್ತರಿಸಿಕೊಳ್ಳಿ ,ತೊಟ್ಟು ತೆಗೆದ ಮೇಲೆ ಉಳಿಯುವ ಅಣಬೆಯ ಉಳಿದ ಭಾಗವನ್ನು ಆಗಲೇ ಮಾಡಿಟ್ಟುಕೊಂಡ ಮಸಾಲೆಯಲ್ಲಿ ಸೇರಿಸಿ ಚೆನ್ನಾಗಿ ಅದರಲ್ಲಿ ಉರುಳಿಸಿ ನಂತರ ತೊಟ್ಟನ್ನು ಕತ್ತರಿಸಿಕೊಂಡ ಭಾಗದಿಂದ ಮಾಡಿಟ್ಟುಕೊಂಡ ಪಲ್ಯದಂತ ಮಿಶ್ರಣವನ್ನು ಸೇರಿಸಿ .ನಂತರ ಇನ್ನೊಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಮಾಡಿಟ್ಟುಕೊಂಡ ಅಣಬೆಯ ಮಿಶ್ರಣವನ್ನು ಷಲ್ಲೋ ಫ್ರೈ ಮಾಡಿಕೊಳ್ಳಿ .ಸುಲಭವಾಗಿ ಮಾಡಬಹುದಾದ ಖಾದ್ಯ ಸ್ಟಫ್ಡ್ ಮಶ್ರೂಮ್,ಮಾಡಿಕೊಂಡು ತಿಂದು ಆಸ್ವಾದಿಸಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top