ದೇವರು

ವಿಷ್ಣು ಪುರಾಣದಲ್ಲಿ ಹೇಳಿರುವ ಪ್ರಕಾರ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತಿಗಾಗಿ ಈ 4 ನಿಯಮಗಳನ್ನು ತಪ್ಪದೆ ಪಾಲಿಸಿ

ವಿಷ್ಣು  ಪುರಾಣದಲ್ಲಿ ಹೇಳಿರುವ ಪ್ರಕಾರ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತಿಗಾಗಿ ಈ ನಾಲ್ಕು ನಿಯಮಗಳನ್ನು ಪಾಲಿಸಿ.ವಿಷ್ಣು  ಪುರಾಣದಲ್ಲಿ ಹೇಳಿರುವ ಪ್ರಕಾರ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತಿಗಾಗಿ ಈ ನಾಲ್ಕು ನಿಯಮಗಳನ್ನು ಪಾಲಿಸಿ. ವಿಷ್ಣು ಪುರಾಣದಲ್ಲಿ ಹೇಳಿದಂತೆ ಗೃಹಸ್ಥರು ಪಾಲನೆ ಮಾಡಿದರೆ ಭಗವಂತನಾದ ಶ್ರೀ ಹರಿ ವಿಷ್ಣು ಮತ್ತು ಮಹಾಲಕ್ಷ್ಮೀ  ದೇವಿಯ ಜೊತೆಗೆ ಎಲ್ಲಾ ದೇವಾನು ದೇವತೆಗಳು ಪ್ರಸನ್ನರಾಗುತ್ತಾರೆ. ಯಾರು ಈ ನಿಯಮಗಳನ್ನು ಪಾಲಿಸುವುದಿಲ್ಲವೋ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

 

 

 

ಮೂರು ರಸ್ತೆ ಕೂಡಿರುವ ಜಾಗ ಛೇದಕದ ಮೇಲೆ ರಾತ್ರಿ ಅವಶ್ಯವಿಲ್ಲವೆಂದರೆ ಹೋಗಬೇಡಿ:ಮೂರು ರಸ್ತೆ ಕೂಡುವ ಛೇದಕದ ಮೇಲೆ ರಾತ್ರಿ ಅವಶ್ಯವಿಲ್ಲವೆಂದರೆ ಹೋಗಬೇಡಿ. ರಾತ್ರಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಆ ಸ್ಥಳದಲ್ಲಿ ಹೆಚ್ಚಾಗಿ ಇರುತ್ತದೆ. ಪವಿತ್ರ ಆತ್ಮ ಅಲ್ಲಿ ಓಡಾಡಿದರೆ ಅದನ್ನು ನಕಾರಾತ್ಮಕ ಶಕ್ತಿಗಳು ಆಕರ್ಷಿಸುತ್ತವೆ .

ಸ್ಮಶಾನಕ್ಕೆ ಹೋಗಿ ಬಂದ ನಂತರ ಅವಶ್ಯಕವಾಗಿ ಸ್ನಾನ ಮಾಡಬೇಕು:ಸ್ಮಶಾನದಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿಯ ಪ್ರಭಾವವಿರುತ್ತದೆ. ಸ್ಮಶಾನಕ್ಕೆ ಹೋಗುವುದರಿಂದ ಆರೋಗ್ಯ ಹಾಗೂ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ಸ್ಮಶಾನಕ್ಕೆ ಹೋಗಿ ಬಂದ ನಂತರ ಅವಶ್ಯಕವಾಗಿ ಸ್ನಾನ ಮಾಡಬೇಕು.

ಮಹಿಳೆಯರು ರಾತ್ರಿಯ ಹೊತ್ತು ಕೂದಲು ಹರಡಿಕೊಂಡು ಮಲಗಬಾರದು:ರಾತ್ರಿಯ ಸಮಯದಲ್ಲಿ ಕೂದಲು ಹರಡಿಕೊಂಡು ಮಲಗುವ ಮಹಿಳೆಯರನ್ನು ನಕಾರಾತ್ಮಕ ಶಕ್ತಿಯು ಆಕರ್ಷಿಸುತ್ತದೆ. ದೇಹ ಹಾಗೂ ಮನಸ್ಸು ಎರಡರ ಮೇಲೂ ಇದರ ಪ್ರಭಾವ ಬೀರುತ್ತದೆ. ಆದ್ದರಿಂದ ಮಹಿಳೆಯರು ರಾತ್ರಿಯ ಸಮಯದಲ್ಲಿ ಕೂದಲುಗಳನ್ನು ಹರಡಿಕೊಂಡು ಮಲಗಬಾರದು.

ರಾತ್ರಿಯ ಹೊತ್ತು ಪರಿಮಳಯುಕ್ತ ಸುಗಂಧ ದ್ರವ್ಯಗಳನ್ನು  ಬಳಸಬಾರದು:ಪರಿಮಳ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಸೆಳೆಯುತ್ತದೆ. ರಾತ್ರಿಯ ಸಮಯದಲ್ಲಿ ಪರಿಮಳಯುಕ್ತ ಸುಗಂಧ ದ್ರವ್ಯಗಳನ್ನು ಹಾಗೂ ಡಿಯೋಗಳನ್ನು ಹಾಕಿ ಮಲಗಬಾರದು, ಅವು ನಕಾರಾತ್ಮಕ ಶಕ್ತಿಗಳನ್ನು  ಆಕರ್ಷಿಸುತ್ತವೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ಸುಗಂಧ ದ್ರವ್ಯಗಳನ್ನು ಬಳಸಬಾರದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top