ತಿಂಡಿ ತೀರ್ಥ

ಬಾಯಲ್ಲಿ ನೀರೂರಿಸುವ ಖಾದ್ಯ ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ

ಬಾಳೆಹಣ್ಣಿನ ಹಲ್ವಾ .

ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು:

ಕಳಿತ ಏಲಕ್ಕಿ ಬಾಳೆಹಣ್ಣಿನ ಗುಳ 4 ಕಪ್ ನಷ್ಟು
ಎರಡು ಕಪ್ ಸಕ್ಕರೆ
ಏಲಕ್ಕಿ ಪುಡಿ ಸ್ವಲ್ಪ
ಕಾಲು ಕಪ್ ನಷ್ಟು ತುಪ್ಪ
ಸ್ವಲ್ಪ ಗೋಡಂಬಿ

 

 

 

ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ:ಒಂದು ಪಾತ್ರೆಯಲ್ಲಿ ಕಳಿತ ಏಲಕ್ಕಿ ಬಾಳೆಹಣ್ಣಿನ ಗುಳ ಮತ್ತು ಸಕ್ಕರೆಯನ್ನು ಸೇರಿಸಿ ಕಡಿಮೆ ಉರಿ ಇಟ್ಟು ಕುಡಿಯಲು ಬಿಡಿ. ಆಗಾಗ ಸ್ವಲ್ಪ ಸ್ವಲ್ಪ ತುಪ್ಪವನ್ನು ಬೆರೆಸುತ್ತಾ ಮಿಶ್ರಣವನ್ನು ತಿರುವುತ್ತಿರಿ. ಈಗ ಈ ಮಿಶ್ರಣವು ಗಟ್ಟಿಯಾಗುತ್ತದೆ, ಆಗ ಮಿಶ್ರಣ ಬಾಣಲೆಯು ಬಿಡುತ್ತ ಬಂದಾಗ ಅದಕ್ಕೆ ಮೇಲೆ ಸೂಚಿಸಿದ ಪ್ರಮಾಣದಲ್ಲಿ ಏಲಕ್ಕಿ ಪುಡಿ ಮತ್ತು ಗೋಡಂಬಿಗಳನ್ನು ಸೇರಿಸಿ. ನಂತರ ಒಂದು ಪಾತ್ರೆಗೆ ತುಪ್ಪವನ್ನು ಸವರಿ ಈ ಮಿಶ್ರಣವನ್ನು ಅದಕ್ಕೆ ಹಾಕಿ. ಮಿಶ್ರಣ ತಣ್ಣಗಾದಾಗ ನಿಮಗೆ ಇಷ್ಟವಾದ ಆಕಾರದಲ್ಲಿ ಅದನ್ನು ಕತ್ತರಿಸಿ.ಈಗ ಸವಿಯಾದ ಬಾಳೆಹಣ್ಣಿನ ಹಲ್ವಾ ಸಿದ್ದ. ಮತ್ಯಾಕೆ ತಡಾ ಈಗಲೇ ನಿಮ್ಮ ಮನೆಯಲ್ಲಿ ನಾವು ಹೇಳಿರುವ ವಿಧಾನದಲ್ಲಿ ತಯಾರು ಮಾಡಿ. ಬಾಳೆ ಹಣ್ಣಿನ ಹಲ್ವದಿಂದ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನವಾಗಲಿದೆ ತಿಳಿಯೋಣ ಬನ್ನಿ.ಈ ಬಾಳೆಹಣ್ಣಿನ ಹಲ್ವಾ ಉತ್ತಮ ಪೋಷ್ಟಿಕಾಂಶ ಹೊಂದಿದ್ದು. ಕಬ್ಬಿನಂಶದ ಕೊರತೆ ಇರುವವರು ಇದನ್ನು ತಿಂದರೆ ಸಮಸ್ಯೆ ದೂರವಾಗುತ್ತದೆ. ಈ ಹಲ್ವಾ 15 ದಿವಸ ವರೆಗೂ ಕೆಡದೆ ಇರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top