ಇತರೆ

ನನ್ನ ತಂದೆಯ ಚಿಕಿತ್ಸೆಯ ವೆಚ್ಚವ ಭರಿಸಲು ಸಹಾಯ ಮಾಡಿ ಎಂದು ಎಲ್ಲರ ಬಳಿಯು ಅಂಗಲಾಚಿ ಬೇಡಿದ ಮಗ

ವೈಭವ್ ವಿ ಎಂಬುವರು ಜೆ. ವಿವೇಕಾನಂದ ಪಾಟೀಲ್ ರವರ ಮಗನಾಗಿದ್ದು. ವೈಭವ್ ರವರ ತಂದೆ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದು. ಅವರ ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ವೈಭವ್ ಮತ್ತು ಅವರ ತಾಯಿ ಒಡ್ಡಾಡ್ಡುತ್ತಿದ್ದಾರೆ. ಈ ನಿಮಿತ್ತ ತಮ್ಮ ತಂದೆಯ ಚಿಕಿತ್ಸೆಯ ವೆಚ್ಚವ ಭರಿಸಲು ವೈಭವ್ ಎಲ್ಲೆರಲ್ಲಿಯೂ ಸಹಾಯ ಕೋರಿದ್ದು ತಮ್ಮ ತಂದೆಯ ಅನಾರೋಗ್ಯದ ಸ್ಥಿತಿಯ ಕುರಿತು ಮತ್ತು ತಮ್ಮ ಅಸಹಾಯಕತೆಯ ಬಗ್ಗೆ ಸವಿವರವಾಗಿ ಬರೆದು ಕೊಂಡಿದ್ದಾರೆ. ಇಲ್ಲಿ ವೈಭವ್ ಅವರು ಬರೆದುಕೊಂಡಿರುವ ಸಾಲುಗಳನ್ನು ಯಥಾವತ್ತಾಗಿ ನೀಡಲಾಗಿದ್ದು, ಈ ಲೇಖನವನ್ನು ಓದಿ ವೈಭವ್ ಅವರಿಗೆ ಸಹಾಯ ಹಸ್ತ ಚಾಚುವ ಮನಸು ಮಾಡೋಣ ಎಂದು ಹೇಳಲು ಇಚ್ಛಿಸುತ್ತೇವೆ.

ಹಾಯ್,

ವೈಭವ್ ವಿ ಆದ ನಾನು ಜೆ. ವಿವೇಕಾನಂದ ಪಾಟೀಲ್ ರವರ ಮಗನಾಗಿದ್ದು. ನನ್ನ ತಂದೆ ಲಿವರ್ ಗೆ ಸಂಬಂಧ ಪಟ್ಟ ಖಾಯಿಲೆಯಿಂದ ಬಳಲುತ್ತಿದ್ದಾರೆ. ನನ್ನ ತಂದೆ ಫೆಬ್ರವರಿಯಿಂದ ಚಿಕಿತ್ಸೆಗೆ ಒಳಗಾಗಿದ್ದು . ಅಲ್ಲಿಯತನಕ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನಾನು ಭರಿಸಿದ್ದೇನೆ. ಆದರೆ ಈ ನವೆಂಬರ್ 14 ರಿಂದ ನನ್ನ ತಂದೆಯ ಅನಾರೋಗ್ಯ  ಉಲ್ಬಣಿಸಿದ್ದು, ತೀವ್ರ ಅನಾರೋಗ್ಯದಿಂದ ನರಳುತ್ತಿದ್ದಾರೆ ಹಾಗೂ ಅವರಿಗೆ ನಿಂತುಕೊಳ್ಳಲು ಸಹ ಶಕ್ತಿ ಇಲ್ಲದಂತಾಗಿದ್ದು, ನೆನಪಿನ ಶಕ್ತಿಯು ಕೊಂಚ ಕುಂದಿದೆ. ನಾನು ಮತ್ತು ನನ್ನ ಅಮ್ಮ ನನ್ನ ತಂದೆಯನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಗಾಯತ್ರಿ ಹಾಸ್ಪಿಟಲ್ ಗೆ ಸೇರಿಸಿದ್ದು , ಅವರನ್ನು ಈಗ ಐ .ಸಿ. ಯು ಗೆ ಶಿಫ್ಟ್ ಮಾಡಲಾಗಿದೆ.

ನನ್ನ ತಂದೆ ಹೆಪಟಿಕ್ ಎನ್ಸೆಫಲೋಪತಿಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಅವರಿಗೆ ಅಲ್ಪ ಪ್ರಮಾಣದ ಮೆಮೊರಿ ನಷ್ಟ ಉಂಟಾಗಿದ್ದು. ಮೂತ್ರಪಿಂಡದ ಮೇಲೆ ಈ ಕಾಯಿಲೆ ಬಹಳ ಪರಿಣಾಮವನ್ನು ಬೀರಿದೆ. ನನ್ನ ತಂದೆಯ ಆರೋಗವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಅವರಿಗೆ ಮಾತನಾಡಲು ಸಹ ಸಾಧ್ಯವಾಗುತ್ತಿಲ್ಲ ಮತ್ತು ಅವರು ಮೂಗಿನ ಪೈಪ್ ಮೂಲಕ ಆಹಾರ ಸೇವಿಸುತ್ತಿದ್ದಾರೆ.

ನಾನು ನನ್ನ ತಾಯಿ ನನ್ನ ತಂದೆಯ ಚಿಕೆತ್ಸೆಯ ವೆಚ್ಚ ಭರಿಸಲು ನಮ್ಮೆಲ್ಲ ಹಣವನ್ನು ವಿನಿಯೋಗಿಸಿದ್ದು ನಾವೀಗ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ನನ್ನ ತಂದೆಗೆ ಸೂಕ್ತ ಚಿಕಿತ್ಸೆ ಕೊಡಿಸಲು ನಾವು ಇದ್ದ ಹಣವನ್ನೆಲ್ಲ ಖರ್ಚು ಮಾಡಿದ್ದೂ. ಈಗ ನನ್ನ ತಂದೆಯನ್ನು ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ನಮ್ಮ ಕೈ ಖಾಲಿಯಾಗಿದೆ. ನಾವೀಗ ಸದ್ಯಕ್ಕೆ ಮುಂದಿನ 6 ತಿಂಗಳುಗಳಿಗಾದರು ನಮ್ಮ ತಂದೆಯ ಚಿಕಿತ್ಸೆಯ ವೆಚ್ಚ ಭರಿಸಬೇಕಿದ್ದು, ಅವರ ಚಿಕಿತ್ಸೆಗಾಗಿ ಮಾತ್ರೆ -ಟಾನಿಕ್ ಗಳಿಗಾಗಿ ನಮಗೆ ಹಣ ಬೇಕೇಬೇಕಾಗಿದೆ. ಆದರಿಂದ ನಿಮ್ಮೆಲ್ಲರಲ್ಲೂ ವಿನಯಪೂರ್ವಕವಾಗಿ ಈ ಒಂದು ಕಾರ್ಯಕ್ಕೆಕೈ ಜೋಡಿಸಿ ಎಂದು ಪ್ರಾರ್ಥಿಸಿ ಕೊಳ್ಳುತ್ತಿದ್ದೇನೆ. ಹಾಗೂ ನಾನು ನಮ್ಮ ತಂದೆಯ ಆನಾರೋಗ್ಯ ಪ್ರಕರಣ ಮೊದಲ ಪುಟವನ್ನು ಹಾಗೂ ಇಲ್ಲಿಯವರೆಗೆ ನಾವು ಕೈ ಕೊಂಡ ಖರ್ಚಿನ ಅಂದಾಜು ಮೊತ್ತವನ್ನು ಇಲ್ಲಿ ರಶೀದಿಗಳೊಂದಿಗೆ ಲಗತ್ತಿಸುತ್ತಿದ್ದೇನೆ.

 

 

ನನ್ನ ತಂದೆ ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೆ ಇದ್ದು ಹಾಗೂ ಡಿಸ್ಚಾರ್ಜ್ ಆದ ಕೂಡಲೇ ಮುಂದೆ ನೀವು ಆರ್ಥಿಕವಾಗಿ ಚಾಚುವ ಸಹಾಯ ಹಸ್ತ ದಿಂದ ನನ್ನ ತಂದೆಯ ಮೆಡಿಕಲ್ ವೆಚ್ವನ್ನು ಕೈ ಗೊಳ್ಳುತ್ತೇವೆ ಆದ್ದರಿಂದ ನನಗೆ ಮತ್ತು ನನ್ನ ತಾಯಿಗೆ ಈ ಒಂದು ಉತ್ತಮ ಕಾರ್ಯಕ್ಕಾಗಿ ಸಹಾಯ ಮಾಡಿ ಎಂದು ನಿಮ್ಮಲ್ಲಿ ಒಕ್ಕೊರಲಿನಿಂದ ಬೇಡಿಕೊಳ್ಳುತ್ತೇನೆ.

ಇತಿ ನಿಮ್ಮ ವಿಶ್ವಾಸಿ,
ವೈಭವ್ ವಿ

 

ವೈಭವ್ ರವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲಿಚ್ಛಿಸುವರು ತಮ್ಮ ಕೈಲಾದಷ್ಟು ಹಣವನ್ನು ಅವರ  ಬ್ಯಾಂಕ್ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಬಹುದಾಗಿದೆ :

ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಹೀಗಿದೆ :

UPI: [email protected]

                 ಅಥವಾ
Account number: 8080811055231
Account name: Vivekananda Patil
IFSC code: YESB0CMSNOC

 

ಹೆಚ್ಚಿನ ಮಾಹಿತಿಗೆ ಅಥವಾ ಸಹಾಯ ಮಾಡಲು ಈ ಲಿಂಕ್ ತೆರೆಯಿರಿ :

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top