fbpx
ಸಮಾಚಾರ

ರಮ್ಯಾ ಬಗ್ಗೆ ಗೊಂದಲ ಸೃಷ್ಟಿಸಿದೆ ಡಿಕೆ ಶಿವಕುಮಾರ್ ಹೇಳಿಕೆ.

ಮಾಜಿ ಸಂಸದೆ ರಮ್ಯಾ ವಿರುದ್ಧ ನಟ ಅಂಬರೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬಿ ಅಂತಿಮ ದರ್ಶನ ಪಡೆಯಲು ಬಾರದ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ಕನ್ನಡ ಚಿತ್ರರಂಗದ ದಂಡೇ ಭಾನುವಾರ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಅಗಲಿದ ಚಿತ್ರರಂಗದ ಧೃವತಾರೆಗೆ ಅಂತಿಮ ವಿದಾಯ ಸಲ್ಲಿಸಿತು. ಆದರೆ, ರಮ್ಯಾ ಮಾತ್ರ ಬರಲಿಲ್ಲ. ಬದಲಿಗೆ ಟ್ವಿಟರ್ ನಲ್ಲಿ ಅಂಬರೀಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸುಮ್ಮನಾಗಿದ್ದರು. ಆದ್ರೆ ರಮ್ಯಾ ಗೈರಾಗಲು ಅಸಲಿ ಕಾರಣ ಇದೀಗ ಬಯಲಾಗಿದೆ.

ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿರುವ ರಮ್ಯಾ ಅಂಬರೀಷ್ ಅವರ ಅಂತ್ಯಕ್ರಿಯೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ, ರಮ್ಯಾ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, “ಈಗ ನನ್ನ ಕಾಲು ಗೆಡ್ಡೆ ಮತ್ತು ಕ್ಯಾನ್ಸರ್​ ಮುಕ್ತವಾಗಿದೆ. ಆದರೆ, ಕೆಲವು ದಿನಗಳವರೆಗೆ ನಾನು ವಿಶ್ರಾಂತಿಯಲ್ಲಿ ಇರಬೇಕಿದೆ. ಮತ್ತೆ ದೈಹಿಕ ಪರೀಕ್ಷೆಗೆ ಒಳಪಡಬೇಕಾಗಿದೆ. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೇ ಅದನ್ನು ನಿರ್ಲಕ್ಷ್ಯಿಸಬೇಡಿ, ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ” ಎಂದು ಸಲಹೆ ಪೋಸ್ಟ್ ನಲ್ಲಿ ಸಲಹೆ ನೀಡಿದ್ದಾರೆ.

ರಮ್ಯಾ ಪೋಸ್ಟ್​ ಕುರಿತು ಹಲವರು ಪರ-ವಿರೋಧ ಕಾಮೆಂಟ್​ ಮಾಡಿದ್ದಾರೆ. ಕೆಲವರು ಬೇಗ ಚೇತರಿಸಿಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಗಾಯವಾಗಿ ಒಂದು ತಿಂಗಳು ಕಳೆದಿದ್ದರೂ ಅಂಬಿ ಅಂತ್ಯಕ್ರಿಯೆಗೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ನಡುವೆ ರಮ್ಯಾ ಬಗ್ಗೆ ಸಚಿವ ಡಿಕೆಶಿ ನೀಡಿದ ಹೇಳಿಕೆ ಗೊಂದಲ ಸೃಷ್ಠಿಸಿದೆ.

ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಂಬರೀಶ್ ನಿಧನದ ಸುದ್ದಿಯನ್ನು ರಮ್ಯಾರಿಗೆ ಫೋನ್ ಮಾಡಿ ತಿಳಿಸಿದೆ. ಆಗ ಅವರು, ಅಂಕಲ್ ಕಾಲು ಫ್ರ್ಯಾಕ್ಚರ್ ಆಗಿದೆ. ಅಂತಿಮ ದರ್ಶನ ಪಡೆಯಲು ಬರೋದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ನಾನು ಫೋನ್ ಮಾಡಿದಾಗ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡರು. ಸದ್ಯ ರಮ್ಯಾ ಜಾರಿ ಬಿದ್ದಿದ್ದರಿಂದ ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಅವರು ರಮ್ಯಾ ಗೈರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.. ಡಿಕೆಶಿ ಅವರ ಈ ಹೇಳಿಕೆಗೂ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವುದಕ್ಕೂ ವ್ಯತ್ಯಾಸ ಇರುವುದರಿಂದ ಗೊಂದಲ ಸೃಷ್ಟಿಯಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top