fbpx
ಸಮಾಚಾರ

ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರನ್ನು ಇಡುವಂತೆ ಸಿಎಂಗೆ ಮನವಿ.

ಬೆಂಗಳೂರಿನ ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಡಬೇಕು ಎಂದು ನಿರ್ಮಾಪಕ, ಫಿಲ್ಮ್​ಚೇಂಬರ್​ ಕಾರ್ಯದರ್ಶಿ ಭಾ.ಮಾ.ಹರೀಶ್​ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.

 

 

ಈ ಬಗ್ಗೆ ಟ್ವೀಟ್​ ಮಾಡಿರುವ ಹರೀಶ್​, ಅಂಬರೀಶ್​ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರ ಹೆಸರನ್ನು ರೇಸ್​ಕೋರ್ಸ್​ ರೋಡ್​ಗೆ ಇಡಬೇಕು. ಅದನ್ನು ಅಂಬರೀಷ್​ ರಸ್ತೆಯೆಂದು ಬದಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.

ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಂಬರೀಷ್ ಸಲ್ಲಿಸಿರುವ ಸೇವೆ ಅಪಾರ. ಹಾಗಾಗಿ ಆನಂದ್​ರಾವ್ ವೃತ್ತದಿಂದ ಚಾಲುಕ್ಯ ವೃತ್ತದ ವರೆಗಿನ ರಸ್ತೆಗೆ ಅಂಬರೀಷ್ ರಸ್ತೆ ಎಂದು ಹೆಸರಿಡಬೇಕು. ಇದು ಬರೀ ವಾಣಿಜ್ಯ ಮಂಡಳಿಯ ಅಭಿಪ್ರಾಯವಲ್ಲ, ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಒತ್ತಾಯ ಎಂದು ಭಾ.ಮಾ ಹರೀಶ್ ತಿಳಿಸಿದ್ದಾರೆ. ಈ ಸಂಬಂಧ ಫಿಲ್ಮ್ ಚೇಂಬರ್ ಮೂಲಕ ಶೀಘ್ರದಲ್ಲೇ ಸಿಎಂಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಸಭೆ ನಂತರ ಎಲ್ಲಾ ಸದಸ್ಯರ ಒಮ್ಮತದ ಒಪ್ಪಿಗೆ ಮೇರೆಗೆ ನಿರ್ಧಾರ ಮಾಡಲಾಗುತ್ತದೆ ಎಂದು ಭಾ.ಮಾ ಹರೀಶ್​ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top