ಸಮಾಚಾರ

“ವಿಷ್ಣು ಸ್ಮಾರಕ ನಿರ್ಮಿಸದಿದ್ದರೇ ತಪ್ಪುಸಂದೇಶ ರವಾನೆ ಆಗುತ್ತೆ” ನವರಸನಾಯಕ ಜಗ್ಗೇಶ್.

ಕನ್ನಡದ ಮೇರುನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸತ್ತು ಮಲಗಿ ಬರೋಬ್ಬರಿ 9 ವರ್ಷಗಳೇ ಕಳೆದಿದ್ದರು ಇಂಥ ಧೀಮಂತ ನಟನಿಗೊಂದು ನೆಟ್ಟಗಿನ ಸಮಾಧಿಯ ವ್ಯವಸ್ಥೆಯಾಗಿಲ್ಲ.. ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಮುಖ್ಯ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ಸ್ಮಾರಕದ ವಿಚಾರದಲ್ಲಿ ಅಭಿಮಾನಿಗಳು ಕಾದು ಸುಸ್ತಾಗಿದ್ದಾರೆ.. ಅಖಂಡ ಒಂಭತ್ತು ವರ್ಷಗಳು ಸವೆದಿದ್ದರೂ ವಿಷ್ಣು ಸ್ಮಾರಕ ನಿರ್ಮಾಣ ಇನ್ನೂ ನಿರ್ಮಾಣವೇಕೆ ಆಗಿಲ್ಲ ಎಂಬುದು ಕನ್ನಡಿಗರ ಅತಿ ದೊಡ್ಡ ಪ್ರಶ್ನೆಯಾಗಿದೆ.

 

 

ವಿಷ್ಣು ಸ್ಮಾರಕ ವಿಚಾರದಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲವೊಂದು ಕಾಣದ ಕೈಗಳು ಸ್ಮಾರಕ ಆಗದ ಹಾಗೆ ತಡೆಯುತ್ತಿವೆ ಎನ್ನುವುದು ಅಭಿಮಾನಿಗಳ ಆರೋಪವಾಗಿದೆ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೇ ನೋವಿನಿಂದ ವಿಷ್ಣು ಸ್ಮಾರಕ ವಿಚಾರದಲ್ಲಿ

ಮೊನ್ನೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕಂಠೀರವ ಸ್ಟುಡಿಯೋದ ಡಾ.ರಾಜ್ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. “ಡಾ.ರಾಜಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಡಾ.ಅಂಬರೀಶ್ ರವರ ಸ್ಮಾರಕಭಾವನ ನಿರ್ಮಿಸುತ್ತಿರುವಂತೆ ಅಲ್ಲೇ ಪಕ್ಕದಲ್ಲೇ ಈಗ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನೂ ನಿರ್ಮಿಸಿ” ಎಂಬ ಮಾತುಗಳು ಒಂದು ವರ್ಗದಿಂದ ಕೇಳಿಬರುತ್ತಿದೆ…

ಟ್ವೀಟ್ ನಲ್ಲಿ ಜಗ್ಗೇಶ್ ಹೇಳಿದ್ದೇನು:
ವಿಷ್ಣು ಸ್ಮಾರಕ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಜಗ್ಗೇಶ್ “ವಿಷ್ಣು ಸ್ಮಾರಕ ನಿರ್ಮಿಸದಿದ್ದರೇ ತಪ್ಪುಸಂದೇಶ ರವಾನೆ ಆಗುತ್ತೆ” ಎಂದು ಹೇಳಿದ್ದಾರೆ..

  • “ಸಿನಿಮ ಸಂಬಂಧದೊಂದಿಗೆ ಬೆಳೆದ ನಮ್ಮ ಮಾನ್ಯ ಮುಖ್ಯಮಂತ್ರಿಗಳು #CMkarnataka ಶ್ರೀ ಕುಮಾರಸ್ವಾಮಿರವರು
    #ವಿಷ್ಣುಸೇನೆ #ಭಾರತಿವಿಷ್ಣು ರ ಜೊತೆ ಚರ್ಚಿಸಿ ದಯಮಾಡಿ #ವಿಷ್ಣುದಾದಾ ಸ್ಮಾರಕ ನಿರ್ಮಾಣದ ವಿಷಯಕ್ಕೆ ಇತಿಶ್ರೀ ಹಾಡಿ!ದಾದನ ಅಭಿಮಾನಿಗಳಿಗೆ
    ಕನ್ನಡಿಗರಿಗೆ ಸಂತೋಷ ಸಮಾಧಾನ ಸಿಗುವಂತೆಮಾಡಿ..
    ಇಲ್ಲದಿದ್ದರೆ ತಪ್ಪುಸಂದೇಶ ರವಾನೆ ಆಗುತ್ತೆ!🙏 ” ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆಮಾಡಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಂದಕಗಳು ಎದುರಾಗುತ್ತಲೇ ಇವೆ. ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿ ವರ್ಷಗಳೇ ಕಳೆಯುತ್ತಿವೆ.. ಈ ಹಿಂದಿನ ಮುಖ್ಯಮಂತ್ರಿಗಳು ಈ ಬಗ್ಗೆ ತಾತ್ಸಾರವನ್ನಷ್ಟೇ ತೋರಿಸಿದ್ದರು. ಈಗ ಕೆಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top