fbpx
ದೇವರು

ಮಾಟ, ಮಂತ್ರ, ತಂತ್ರ ದೋಷಗಳಿಂದ ಮುಕ್ತರಾಗಲು ಕಾರ್ತಿಕ ಮಾಸ ಶ್ರೇಷ್ಠ,ಅದಕ್ಕಾಗಿ ಈ ಮಾಸದಲ್ಲಿ ಏನ್ ಮಾಡ್ಬೇಕು ಗೊತ್ತಾ

ದುಷ್ಟ ಶಕ್ತಿಗಳ ನಿಗ್ರಹಕ್ಕೆ ಕಾರ್ತಿಕ ಮಾಸ ಶ್ರೇಷ್ಠ ಮಾಸ.ಕಾರ್ತಿಕ ಮಾಸದಲ್ಲಿ ದೈವಶಕ್ತಿ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಶ್ರೀಮನ್ನಾರಾಯಣ ಶಯನದಿಂದ ಎದ್ದೇಳುತ್ತಾನೆ. ಅಂದರೆ ನಾಲ್ಕು ತಿಂಗಳಿನಿಂದ ಮಲಗಿದ್ದ ಶ್ರೀ ವಿಷ್ಣು ಕಾರ್ತಿಕ ಮಾಸದಲ್ಲಿ ಎಚ್ಚೆತ್ತುಕೊಂಡು ಹೇಳುತ್ತಾನೆ. ಆದ್ದರಿಂದಲೇ ವಿಷ್ಣುವಿನ ದರ್ಶನವನ್ನು ಮಾಡಿ ಮಾಟ, ಮಂತ್ರ, ತಂತ್ರ ದೋಷಗಳಿಂದ ಮುಕ್ತರಾಗಲು ತೊಂದರೆ ತಾಪತ್ರಯಗಳನ್ನು ಸರಿಪಡಿಸಿಕೊಳ್ಳಲು ವ್ಯವಸ್ಥಿತವಾಗಿ ನಿವಾರಣೆಯನ್ನು ಮಾಡಿಕೊಳ್ಳಬಹುದು.

 

 

 

ಕಾರ್ತಿಕ ಮಾಸದಲ್ಲಿ ಯಜ್ಞ ಯಾಗಾದಿಗಳನ್ನು ಯಾರು ಮಾಡುತ್ತಾರೋ, ವ್ರತಗಳನ್ನು ಮಾಡುತ್ತಾರೋ, ಯಾರು ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಬಿಲ್ವಾರ್ಚನೆಯನ್ನು ಮಾಡಿ , ಕ್ಷೀರಾಭಿಷೇಕವನ್ನು ಮಾಡುತ್ತಾರೋ, ಏಕಾದಶ ರುದ್ರಾಭಿಷೇಕಗಳನ್ನು ಮಾಡಿಸುತ್ತಾರೋ, ಅಂಥವರಿಗೆ ಈ ಮಾಟ, ಮಂತ್ರ, ತಂತ್ರಗಳ ದೋಷಗಳು ಇದ್ದರೂ ಕೂಡ ಖಂಡಿತವಾಗಿಯೂ ಇವೆಲ್ಲದರಿಂದ ಮುಕ್ತರಾಗುತ್ತಾರೆ ಎಂದು ಹೇಳುತ್ತದೆ ನಮ್ಮ ಧರ್ಮ ಶಾಸ್ತ್ರ. ಇನ್ನು ಕೆಲವರಿಗೆ ಬಹಳಷ್ಟು ದೃಷ್ಟಿ ದೋಷ ಎನ್ನುವುದು ಇರುತ್ತದೆ. ಶತ್ರುಗಳು ಇರುತ್ತಾರೆ,ಶತ್ರುಗಳಲ್ಲಿ ಕ್ರೂರ ಶತ್ರು, ಹಿತ ಶತ್ರು,ಅಹಿತ ಶತ್ರು, ನೀಚ ಶತ್ರು ಎನ್ನುವವರು ಇರುತ್ತಾರೆ. ಸಾರ್ವಜನಿಕ ಕ್ಷೇತ್ರಗಳಲ್ಲೂ ಕೂಡ ಈ ರೀತಿಯ ಶತ್ರುಗಳು ಇರುತ್ತಾರೆ.
ಹಿತಶತ್ರುಗಳಾದವರು ನಿಮ್ಮ ಮುಂದೆ ಚೆನ್ನಾಗಿಯೇ ಇರುತ್ತಾರೆ. ಆದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಹಿಂದೆಯೇ ನಿಮ್ಮ ಬಗ್ಗೆ ಪಿತೂರಿ ಮಾಡಿ ಸಂಚನ್ನು ರೂಪಿಸಿರುತ್ತಾರೆ. ಹಿತ ಶತ್ರು ಎಂದರೆ ನಿನಗೆ ತೊಂದರೆ ಮಾಡುತ್ತಲೇ ಇರುತ್ತಾರೆ. ಕ್ರೂರ ಶತ್ರು ಎಂದರೆ ನಿನ್ನನ್ನು ನಿರ್ನಾಮ ಮಾಡುತ್ತೇನೆ ಎಂದು ಹೇಳುತ್ತಾರೆ. ಇಂತಹ ಶತ್ರು ಬಾಧೆ ಮತ್ತು ದೃಷ್ಟಿ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಇದು ಕಾರ್ತಿಕ ಮಾಸ ಬಹಳಷ್ಟು ಪ್ರಶಸ್ತವಾದ ಮಾಸವಾಗಿದೆ.

ಇನ್ನೂ ಬಹಳಷ್ಟು ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ ಅಥವಾ ದಾಂಪತ್ಯ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ.ಅಂತವರು ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಬಿಲ್ವಾರ್ಚನೆಯನ್ನು ಮಾಡಿ ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡಿರುವ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಸುಖಜೀವನ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top