fbpx
ಕ್ರಿಕೆಟ್

ಸಿಒಎ ಡಯಾನಾ ಎಡಲ್ಜಿ ಮತ್ತು ಕೋಚ್ ರಮೇಶ್ ಪೋವಾರ್ ವಿರುದ್ಧ ಆಕ್ರೋಶ ಹೊರಹಾಕಿದ ಮಿಥಾಲಿ ರಾಜ್

ಭಾರತ ಮಹಿಳಾ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ್ತಿ ಮತ್ತು ಒಡಿಐ ನಾಯಕಿ ಮಿಥಾಲಿ ರಾಜ್, ಸಿಒಎ ಹಾಗೂ ಕೋಚ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಅಧಿಕಾರದಲ್ಲಿರುವ ಕೆಲವರು ನನ್ನನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಿಥಾಲಿ ರಾಜ್ ಆರೋಪಿಸಿದ್ದು, ಸಿಒಎ ಡಯಾನಾ ಎಡಲ್ಜಿ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದರೆ ಕೋಚ್ ರಮೇಶ್ ಪೋವಾರ್ ನನಗೆ ಅವಮಾನ ಮಾಡಿದ್ದಾರೆ ನೊಂದುಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಟಿ20 ಸೆಮಿಫೈನಲ್ಸ್ ಪಂದ್ಯದಿಂದ ಮಿಥಾಲಿ ರಾಜ್ ರವರನ್ನು ಕೈ ಬಿಟ್ಟಿರುವ ಕಾರಣವನ್ನು ಸಮರ್ಥಿಸಿಕೊಂಡಿದ್ದ ಡಯಾನಾ ಎಡಲ್ಜಿ ಪಕ್ಷಪಾತಿ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ ನನ್ನ ವಿರುದ್ಧ ಡಯಾನ ಅಧಿಕಾರ ಚಲಾವಣೆ ಮಾಡಿದ್ದಾರೆ ಎಂದೂ ನೇರವಾಗಿ ಡಯಾನಾ ನಡೆಯ ಬಗ್ಗೆ ಮಿಥಾಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ತಮ್ಮನ್ನು ಈ ವಿಶ್ವಕಪ್ ಟಿ20 ಸೆಮಿಫೈನಲ್ಸ್ ಪಂದ್ಯದಿಂದ ಕೈಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ ಮಿಥಾಲಿ ರಾಜ್ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಆಪರೇಷನ್ಸ್ ಜಿಎಂ ಸಬಾ ಕರಿಮ್ ಗೆ ಪತ್ರ ಬರೆದಿದ್ದು ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಲು ಅಧಿಕಾರದಲ್ಲಿರುವ ಕೆಲವರು ಯತ್ನಿಸುತ್ತಿದ್ದಾರೆ ಎಂದು ಮಿಥಾಲಿ ರಾಜ್ ತಮ್ಮ ನೋವನ್ನು ಹೊರಹಾಕಿದ್ದಾರೆ.

ಮಿಥಾಲಿ ರಾಜ್ ರ ಪರವಾಗಿ ಅನೇಕರು ಟ್ವೀಟ್ ಮಾಡಿದ್ದು , ಎಲ್ಲೆಡೆಯಿಂದ ಆವರಿಗೆ ವ್ಯಾಪಕ ಬೆಂಬಲ ದೊರೆತಿದೆ.

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top