ಸಮಾಚಾರ

ಮೀಟೂ ವಿವಾದ- ಅರ್ಜುನ್ ಸರ್ಜಾಗೆ ಕೊಂಚ ನಿರಾಳ.

ಅರ್ಜುನ್ ಸರ್ಜಾ ಮತ್ತು ಶ್ರುತಿ ಮೀಟೂ ಪ್ರಕರಣ ನ್ಯಾಯಾಲಯ ತಲುಪಿರುವುದು ಎಲ್ಲೆರೆಗೂ ಗೊತ್ತೇ ಇದೆ. ಹೀಗಿರುವಾಗ ಮೀಟು ಪ್ರಕರಣದ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದು ಕೊಳ್ಳುತ್ತಲೇ ಇದ್ದು.
ಈಗ ಈ ಪ್ರಕರಣದಲ್ಲಿ ಅರ್ಜುನ್ ಸರ್ಜಾ ರವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಹೌದು, ನಟ ಅರ್ಜುನ್ ಸರ್ಜಾ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಅರ್ಜುನ್ ಸರ್ಜಾ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ನ್ಯಾಯಾಲಯ ಆದೇಶಿಸಿದೆ.

ವಿಸ್ಮಯ ಚಿತ್ರೀಕರಣದ ವೇಳೆ ಶೃತಿ ಹರಿಹರನ್ ತಮಗಾದ ಲೈಂಗಿಕ ಕಿರುಕುಳದ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ದೂರು ದಾಖಲಿಸಿದ್ದರು. ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಗಿದೆ. ಈ ಎಫ್‍ಐಆರ್ ರದ್ದುಗೊಳಿಸಬೇಕೆಂದು ಅರ್ಜುನ್ ಸರ್ಜಾ ಕೋರ್ಟ್ ನ ಮೊರೆ ಹೋಗಿದ್ದಾರೆ.

ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅನ್ಯಾಯವಾದ ದೌರ್ಜನ್ಯದ ಬಗ್ಗೆ ಶೃತಿ ಪೊಲೀಸರಿಗೆ ದೂರು ನೀಡಿದ್ದರು. ಯುಬಿ ಸಿಟಿಗೆ ಚಿತ್ರದ ಬಗ್ಗೆ ಮಾತನಾಡಲು ಕರೆದಿದ್ದು, ಊಟಕ್ಕೆ ಕರೆದುಕೊಂಡು ಹೋಗಿದ್ದರು. ಯುಬಿ ಸಿಟಿಯ ಪಬ್‍ವೊಂದರಲ್ಲಿ ಊಟ ಮಾಡಿದ್ದೆವು. ಈ ವೇಳೆ ನನ್ನ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಶೃತಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಕಂಡುಕೊಳ್ಳಲಿದೆಯೋ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top