ಸಮಾಚಾರ

ಅಂಬಿ ಜೊತೆ ತೆಲುಗಿನ ಈ ಸೂಪರ್ ಹಿಟ್ ಸಿನೆಮಾವನ್ನು ರಿಮೇಕ್ ಮಾಡಬೇಕೆಂದಿದ್ದರಂತೆ – ಸಿ ಎಂ ಕುಮಾರಸ್ವಾಮಿ

ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಟ ಅಂಬಿ ನುಡಿ ನಮನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ , ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಅಂಬಿ ಪತ್ನಿ ಸುಮಲತಾ ಹಗಲು ಮಗ ಅಭಿಷೇಕ್, ಕಲಾವಿದರಾದ ಜಗ್ಗೇಶ್, ದೊಡ್ಡಣ್ಣ, ಉಮಾಶ್ರೀ, ಶಿವರಾಜ್ ಕುಮಾರ್, ಬಿ.ಸರೋಜಾದೇವಿ, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗಿಯಾಗಿದ್ದರು

ಈ ವೇಳೆ ಪತಿಯನ್ನು ನೆನೆದು ಭಾವುಕರಾದ ಅಂಬಿ ಪತ್ನಿ ಸುಮಲತಾ , ಅಂಬರೀಶ್ ರಾಜನಂತೆ ಬದುಕಿದ್ದರು ಹಾಗೆ ರಾಜಂತೆಯೇ ಹೋದರು ಎಂದು ಹೇಳುತ್ತಾ. ಅಂಬಿಯಾ ಅಂತಿಮ ಯಾತ್ರೆಯಲ್ಲಿ ಸಹಕರಿಸಿದ ಮುಖ್ಯಮಂತ್ರಿಗಳಿಗೆ, ಫೋಲಿಸ್ ಇಲಾಖೆಗೆ, ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ದನಿವಾದಗಳನು ಅರ್ಪಿಸಿದರು. ಅಂಬಿಯ ಪುತ್ರ ಅಭಿಷೇಕ್ ಕೂಡ ಅಪ್ಪನನ್ನು ಸ್ಮರಿಸಿ ಭಾವುಕರಾದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಮತ್ತು ಅಂಬರೀಶ್ ನಡುವಿನ ಒಡನಾಟದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅಂಬಿಗಾಗಿ ತೆಲುಗು ‘ರೆಬೆಲ್’ ಸಿನಿಮಾ ರೈಟ್ಸ್ ಖರೀದಿಸಿದ್ದೆ,ಅಂಬರೀಶ್ ಮತ್ತು ನನ್ನ ಮಗನನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದಕ್ಕಾಗಿ ತೆಲುಗಿನ ‘ರೆಬೆಲ್’ ಸಿನಿಮಾ ರೈಟ್ಸ್ ತೆಗೆದುಕೊಂಡಿದ್ದೆ. ಈ ಚಿತ್ರದಲ್ಲಿ ಕೃಷ್ಣಂ ರಾಜು ಪೋಷಿಸಿದ್ದ ಪಾತ್ರವನ್ನು ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮತ್ತು ಪ್ರಭಾಸ್ ಪಾತ್ರವನ್ನು ನಿಖಿಲ್ ಪೋಷಿಸಲು ಬಯಸಿದ್ದೆ. ರಾಜಕೀಯ ಒತ್ತಡದಿಂದ ಅದು ಸಾಧ್ಯವಾಗಲಿಲ್ಲ. ಈಗಲೂ ನನ್ನಲ್ಲೇ ರೈಟ್ಸ್ ಇವೆ. ಒಟ್ಟಿನಲ್ಲಿ , “ಅಂಬರೀಶ್ ಮತ್ತು ನನ್ನ ಮಗನ ಜತೆಗಿನ ಸಿನಿಮಾ ಕನಸು ಕಡೆಗೂ ನೆರವೇರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ತೆಲುಗಿನ ರೆಬೆಲ್ ಸಿನಿಮಾದಲ್ಲಿ ಪ್ರಭಾಸ್, ತಮನ್ನಾ ಭಾಟಿಯಾ, ಕೃಷ್ಣಂ ರಾಜು ದೀಕ್ಷಾ ಸೇಠ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ರಾಘವ ಲಾರೆನ್ಸ್ ನಿರ್ದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top