ಸಮಾಚಾರ

ಅಂಬರೀಷ್ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ, ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ: ಸಿಎಂ ಕುಮಾರಸ್ವಾಮಿ.

ಅಂಬರೀಷ್​ ಆಸೆಯಂತೆ ಮೈಸೂರಿನಲ್ಲೇ ಫಿಲ್ಮ್​ ಸಿಟಿ ನಿರ್ಮಾಣ ಮಾಡಿ, ಅದಕ್ಕೆ ಅವರ ಹೆಸರಿಡಲಾಗುವುದು. ಅಂತೆಯೇ ರಾಮನಗರದಲ್ಲಿ ಫಿಲ್ಮ್​ ಯೂನಿವರ್ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು..

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬರೀಷ್ ಗೆ ಪುಷ್ಮ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು “ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ನೂರಾರು ಎಕರೆ ಜಾಗ ನೀಡಿದ್ದಾರೆ. ಅವರ ಮನವಿಯಂತೆ, ಅಂಬರೀಷ್​ ಆಸೆಯಂತೆ ಅಲ್ಲಿಯೇ ಫಿಲ್ಮ್​ ಸಿಟಿ ನಿರ್ಮಾಣ ಮಾಡಿ ಅಂಬಿ ಹೆಸರಿಡಲು ಸರ್ಕಾರ ಬದ್ಧವಾಗಿರುತ್ತದೆ” ಎಂದು ಹೇಳಿದರು.

ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆಯೇ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುತ್ತದೆ. ಅಂತೆಯೇ ರಾಮನಗರದಲ್ಲಿ ಸಿನಿಮಾ ಯೂನಿವರ್ಸಿಟಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

“ಕನ್ನಡ ಚಿತ್ರರಂಗದ ಹಲವು ಸಮಸ್ಯೆಗಳನ್ನು ಅಂಬಿ ಬಗೆಹರಿಸುತ್ತಿದ್ದರು. ಅಂಬರೀಷ್ ತುಂಬ ಅಪರೂಪದ ವ್ಯಕ್ತಿಯಾಗಿದ್ದರು. ರಾಜ್ ಕುಮಾರ್, ವಿಷ್ಣು ವರ್ಧನ್ ನಿಧನದ ನಂತರ ಚಿತ್ರರಂಗಕ್ಕೆ ಅಂಬರೀಷ್ ಬೆನ್ನೆಲುಬಾಗಿ ನಿಂತಿದ್ದರು ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.” ಎಂದು ಕುಮಾರಸ್ವಾಮಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top