fbpx
ಸಿನಿಮಾ

ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿತೆಂದು ಟ್ವೀಟ್ ಮಾಡಿದ ನಟಿ ಹರ್ಷಿಕಾ ಪೂಣಚ್ಚ

ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದ ರೆಬಲ್ ಸ್ಟಾರ್ ಅಂಬರೀಶ್ ಕೊನೆಯುಸಿರೆಳೆದು ಒಂದು ವಾರ ಆಗುತ್ತಲೇ ಬಂತು. ಆದರೆ ಇಂದಿಗೂ ಕನ್ನಡಿಗರು ಅಂಬಿ ನಮ್ಮೊಂದಿಗಿಲ್ಲ ಎಂಬ ವಿಚಾರವನ್ನು ನಂಬಿಯೂ ಇಲ್ಲ ಮತ್ತು ಅರಗಿಸಿ ಕೊಂಡಿಯು ಇಲ್ಲ. ಹೀಗಿರುವಾಗ ಅಂಬಿಯ ನಿಧನದ ಬಗ್ಗೆ ಟ್ವೀಟ್ ಮಾಡಿರುವ ನಟಿ ಹರ್ಷಿಕಾ ಪೂಣಚ್ಚ ಪೇಚಿಗೆ ಸಿಲುಕಿ ಕೊಂಡಿದ್ದಾರೆ.

ಹರ್ಷಿಕಾ ಮಾಡಿದ ಟ್ವೀಟ್ ಏನು ?

“ಇಂದು ನನ್ನ ಅತ್ಯಂತ ದುಃಖದ ದಿನ ನಾನು ಒಂದು ಶೂಟ್ಗಾಗಿ 23 ರ ರಿಂದ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು ನನ್ನ ನೆಚ್ಚಿನ ಅಂಬರೀಷ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು ನಾನು ಎಂಥ ದುರದೃಷ್ಟವಂತೆ , ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ ಮಿಸ್ ಯು #ಅಂಬರೀಶ್ ಅಂಕಲ್ ರಿಪ್ ಎಂದು ಬರೆದುಕೊಂಡಿದ್ದಾರೆ..”

 

 

ಆದರೆ ಹರ್ಷಿಕಾ ಟ್ವೀಟ್ ನಲ್ಲಿ ಸತ್ಯ ಇದೆಯೋ ಇಲ್ಲವೋ ತಿಳಿದು ಬರುತ್ತಿಲ್ಲ. ಏಕೆಂದರೆ ಹಿಂದೆ ಸ್ವತಃ ಹರ್ಷಿಕಾ ಪೂಣಚ್ಚ ರವರೇ, ನ.24ರಂದು ‘ಅಂಬಿ ಅಂಕಲ್ ರಿಪ್ ‘ ಎಂದು ಬರೆದು ಟ್ವಿಟ್ಟರ್ ನಲ್ಲಿ ಪಿನ್ ಮಾಡಿದ್ದಾರೆ.. ಆದರೆ ಈಗ ನೋಡಿದರೆ ತನಗೇನು ಗೊತ್ತೇ ಇಲ್ಲ ಎಂಬಂತೆ ಟ್ವೀಟ್ ಮಾಡಿರುವ ಹರ್ಷಿಕಾ ಹೇಳುತ್ತಿರುವುದಕ್ಕೆ ಹಾಗೂ ಟ್ವೀಟ್ ಮಾಡಿರುವುದಕ್ಕೂ ಸಂಬಂಧವೇ ಇಲ್ಲದಂತಾಗಿದ್ದು. ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top