ಸಮಾಚಾರ

ಒಂದು ಕ್ಷುಲ್ಲಕ ಕಾರಣಕ್ಕೆ 5 ತಿಂಗಳ ಗರ್ಭಿಣಿಯನ್ನು ಎರಡು ತಿಂಗಳ ಕಾಲ ಜೈಲಿಗಟ್ಟಿದ ಟೆಸ್ಕೋ ಸೂಪರ್ ಮಾರ್ಕೆಟ್

ಐರ್ಲೆಂಡ್ ನ ಟೆಸ್ಕೋ ಸೂಪರ್ ಮಾರ್ಕೆಟ್ ನಲ್ಲಿ ಒಬ್ಬ ಗರ್ಭಿಣಿ ಮಹಿಳೆ ತೆಗೆದುಕೊಂಡ Pringles ಪೊಟ್ಟಣವನ್ನು ಮೊದಲು ಹಣ ಕಟ್ಟದೆ ಒಡೆದಿದಕ್ಕೆ , ಟೆಸ್ಕೋ ಆ ಮಹಿಳೆಯನ್ನು ಎರಡು ತಿಂಗಳ ಕಾಲ ಜೈಲಿಗೆ ಹಾಕಿಸಿದೆ . ಟೆಸ್ಕೋ ನ ಈ ನಡೆಯ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಪರ ಮತ್ತು ವಿರೋಧ ಮಾತುಗಳು ವ್ಯಕ್ತವಾಗಿವೆ.

‘Kathleen McDonag’ ಅವರು ಗರಿಗರಿಯಾದ Pingles ಪೊಟ್ಟಣದ ಮುಚ್ಚಳವಾ ಹಣ ಕಟ್ಟುವ ಮೊದಲೇ ತೆಗಿದ್ದಕ್ಕೆ ಬಂಧಿಸಲಾಗಿದ್ದು. ಐರ್ಲೆಂಡ್ ನಲ್ಲಿರುವ ಈ ಸೂಪರ್ ಮಾರ್ಕೆಟ್ ನ ನಿಯಮದ ಕೆಲವರಲ್ಲಿ ಅಸಮಾಧಾನ ಮೂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೆಸ್ಕೋ ಸೂಪರ್ ಮಾರ್ಕೆಟ್ , ’25 ವರ್ಷದ ಈ ಗರ್ಭಿಣಿ ಯುವತಿಯು ಈ ಹಿಂದೆ ನಮ್ಮ ಸ್ಟೋರಿನಲ್ಲಿ ಅನೇಕ ಅಪರಾಧಗಳನ್ನು ಎಸೆಗಿದ್ದರಿಂದ ಆಕೆಯನ್ನು ನಾವು ಬ್ಯಾನ್ ಮಾಡಿದ್ದೆವು, ಆದರೆ ಬ್ಯಾನ್ ಆದಮೇಲೂ ಬಂದ ಯುವತಿ ಈ ಬಾರಿಯೂ ಅಪರಾಧ ವೆಸಗಿದ್ದ ಪರಿಣಾಮ ಆಕೆಗೆ ಶಿಕ್ಷೆಗೆ ಗುರಿಮಾಡಿದೆವು ‘ ಎಂದು ಹೇಳಿದೆ.

ಆಕೆಗೆ ಶಿಕ್ಷೆ ಯಾಗಬೇಕಂದು ನ್ಯಾಯಾಲಯದಲ್ಲಿ ಮನವಿ ಮಾಡಿರುವುದಾಗಿ ಟೆಸ್ಕೋ ತಿಳಿಸಿದೆ.

ಈ ಬಗ್ಗೆ ಕಾರ್ಕ್ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಜಡ್ಜ್ McDonogh ಳ ಹೆಸರು 31 ಪ್ರಕರಣದಲ್ಲಿ ದಾಖಲಾಗಿದ್ದು, ಈ ಕುರಿತು McDonagh ಹೆಚ್ಚು ಜಾಗ್ರತೆ ವಹಿಸಲ್ಲ
ಎಂದು ಹೇಳಿಕೆ ನೀಡಿದೆ.

McDonagh ‘Pringles ಪೊಟ್ಟಣವನ್ನು ತೆಗೆದುಕೊಂಡು ಹಣ ಕಟ್ಟಲು ಬರುವಾಗ ನಾವು ಬ್ಯಾನ್ ಮಾಡಿದ ಗ್ರಾಹಕಿ ಇವರೇ ಎಂದು ನಮ್ಮ ಸಿಬ್ಬಂದಿ ಗುರುತಿಸಿದ್ದಾರೆ. ಗುರುತಿಸಿದ ಬಳಿಕ
ಸೂಪರ್ ಮಾರ್ಕೆಟ್ ಸಿಬ್ಬಂದಿಗಳು ಆಕೆಯನ್ನು ಹೋಗುವಂತೆ ಹೇಳಿದ್ದಾರೆ ಆದರೆ ಅದನ್ನು ಧಿಕ್ಕರಿಸಿದ ಆಕೆ , ‘Pringles ‘ ಪೊಟ್ಟಣವನು ಒಡೆದು , ಮೇಲಿನ ಕವರ್ ನ್ನು
ಕೂಡ ತೆಗೆದು ನಾನೀಗ ಇದನ್ನುತೆಗಿದ್ದೇನೆ ಹಾಗಾಗಿ ನೀವು ನಾನು ಬಿಲ್ ಕಟ್ಟುವುದಕ್ಕೆ ಬಿಡಬೇಕು ಎಂದು ಸಿಬ್ಬಂದಿಗಳಿಗೆ ಮರುತ್ತಿರಿಸಿದ್ದಾರೆ.

€ 1.50 (£ 1.32) ಟ್ಯೂಬ್ ಅನ್ನು ಮತ್ತೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆಕೆಯ ಮೇಲೆ ಟೆಸ್ಕೋ ಕೇಸ್ ದಾಖಲಿಸಿದೆ. ಈ ಮುಂಚೆಯೇ ಆಕೆಯ ಮೇಲೆ ಅನೇಕ ಕೇಸ್ ಗಳು ದಾಖಲಾಗಿದ್ದ ವಿಷಯವು ತದನಂತರ ಬೆಳಕಿಗೆ ಬಂದಿದೆ.

ನ್ಯಾಯಾಲಯದಲ್ಲಿ McDonogh ಳ ವಕೀಲರು, ‘ McDonogh ಳು ಐದು ತಿಂಗಳ ಗರ್ಭಿಣಿಯಾಗಿದ್ದಾಳೆ ಮತ್ತು ಆಕೆ ಆತಂಕ-ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಅದರಿಂದ ಅವಳಿಗೆ ಶಿಕ್ಷೆ ವಿಧಿಸಬಾರದೆಂಬ’ ವಾದ ಮಂಡಿಸಿದ್ದಾರೆ.

ಆದರೆ ನ್ಯಾಯಾಧೀಶರು McDonogh ಳ ಹಿಂದಿನ ಅಪರಾಧಗಳ ಸಂಗ್ರಹವನ್ನು ಗಮನಿಸಿ ಆಕೆಗೆ ಜೈಲು ಶಿಕ್ಷೆಯ ಅಗತ್ಯವಿದೆ ಎಂದು ತೀರ್ಪಿತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top