ಸಮಾಚಾರ

ರಾಜಮೌಳಿ- ರಾಮ್ ಚರಣ್- ಜೂ.NTR ಕಾಂಬಿನೇಷನ್ ‘RRR’ ಚಿತ್ರದಲ್ಲಿ ಪ್ರಿಯಾಮಣಿ.

ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿರುವ ಜಕ್ಕಣ್ಣ ಎಂದೇ ಹೆಸರಾಗಿರುವ ಎಸ್.ಎಸ್. ರಾಜಮೌಳಿ ಬಾಹುಬಲಿ ಎಂಬ ಮಹೋನ್ನತ ಸಿನಿಮಾದ ಮೂಲಕ ಇಂಡಿಯಾದ ಸಿನಿಮಾರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ್ದ ವಿಚಾರ ಈಗ ಇತಿಹಾಸ. ಇಂಥ ರಾಜಮೌಳಿಯವರು ಬಾಹುಬಲಿ ಸರಣಿಯ ನಂತರ ಮುಂದಿನ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಬಾಹುಬಲಿ ಭರ್ಜರಿ ಯಶಸ್ಸಿನ ನಂತರ ರಾಜಮೌಳಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಕ್ಕೆ ಕೈ ಹಾಕಿದ್ದು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂನಿಯರ್ NTR ಒಟ್ಟಾಗಿ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.. ಚಿತ್ರಕ್ಕೆ ಚಿತ್ರಕ್ಕೆ ‘(RRR)ರಾಮ ರಾವಣ ರಾಜ್ಯಂ ” ಎಂದು ಟೈಟಲ್ ಇಡಲಾಗಿದೆ. ಚಿತ್ರದ ಶೂಟಿಂಗ್‌ ಅದಾಗಲೇ ಪ್ರಾರಂಭವಾಗಿದ್ದು ಬಿರುಸಿನಿಂದ ನಡೆಯುತ್ತಿದೆ.

ಇನ್ನು ಪ್ರಿಯಾಮಣಿ ‘ಆರ್ ಆರ್ ಆರ್’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಮಾಹಿತಿ ಈಗ ಹೊರಬಿದ್ದಿದೆ.. ಮೂಲಗಳ ಪ್ರಕಾರ ಅದಾಗಲೇ ಶೂಟಿಂಗಿನಲ್ಲೂ ಕೂಡ ಪ್ರಿಯಾಮಣಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ಪ್ರಿಯಾಮಣಿ ಹಿಂದೆ ರಾಜಮೌಳಿ ನಿರ್ದೇಶನದ ‘ಯಮದೊಂಗ’ ಚಿತ್ರದಲ್ಲಿ ಅಭಿನಯಿಸಿದ್ದರು.

ಉಳಿದಂತೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಈ ಚಿತ್ರಕ್ಕೂ ಕೂಡ ಕಥೆ ಬರೆದಿದ್ದು ಎಂದಿನಂತೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರಂತೆ. ರಾಮ ರಾವಣ ರಾಜ್ಯಯಂ(RRR) ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾಗೆ ಹೂಡುತ್ತಿರುವ ಬಂಡವಾಳ ಸುಮಾರು 300 ಕೋಟಿ ರೂಪಾಯಿ ಅಂತ ಸಿನಿಮಾ ನಿರ್ಮಾಪಕ ಡಿವಿವಿ ಧನಯ್ಯಾ ಸ್ಪಷ್ಟನೆ ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top