fbpx
ಮನೋರಂಜನೆ

ದಳಪತಿ ‘ವಿಜಯ್’ ಚಿತ್ರದಿಂದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಔಟ್.

‘ಕಿರಿಕ್ ಪಾರ್ಟಿ’ ಎಂಬ ಅಪ್ಪಟ ಕನ್ನಡ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳಲ್ಲಾ? ರಶ್ಮಿಕಾ ಮಂದಣ್ಣ ಈಗ ಸೌತ್ ಇಂಡಿಯನ್ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿದ್ದಾಳೆ. ಕನ್ನಡ ಚಿತ್ರದ ಮೂಲಕ ಏಕಾಏಕಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಪುನೀತ್‌, ಗಣೇಶ್, ದರ್ಶನ್ ರಂತಹ ದೊಡ್ಡ ನಟರ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡಕ್ಕಿಂತ ತೆಲುಗಿನಲ್ಲೆ ಠಿಕಾಣಿ ಹೂಡಿದ್ದಳು..

 

 

ಒಪ್ಪಿಕೊಂಡಿದ್ದ ಒಂದು ಕನ್ನಡ ಚಿತ್ರದಿಂದಲೂ ಹೊರಬಂದು ಕನ್ನಡ ಸಿನಿಮಾ ಮಾಡೋಲ್ಲ ಅಂತ ರಚ್ಚೆ ಹಿಡಿದಂತೆ ತೆಲುಗಿನಲ್ಲಿ ಈಕೆಯ ಎರಡ್ಮೂರು ತೆಲುಗು ಚಿತ್ರಗಳಲ್ಲಿ ನಟಿಸಿದ ರಶ್ಮಿಕಾ ಇನ್ನೂ ಒಂದೆರೆಡು ತೆಲುಗು ಚಿತ್ರಗಳನ್ನ ತನ್ನ ಕೈನಲ್ಲಿಟ್ಟುಕೊಂಡಿದ್ದಾಳೆ.. ಹೀಗಿರುವಾಗಲೇ ಕಿರಿಕ್ ಹುಡುಗಿ ಕುರಿತಾಗಿ ಮತ್ತೊಂದು ಸುದ್ದಿ ಸೌತ್ ಸಿನಿ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ.. ಅದೇನೆಂದರೆ ಈಗ ರಶ್ಮಿಕಾ ತಮಿಳಿನ ಸ್ಟಾರ್ ನಟನಿಗೆ ಜೋಡಿಯಾಗುತ್ತಿದ್ದಾರೆ ಅನ್ನೋ ಸುದ್ದಿ.

ತಮಿಳು ಸ್ಟಾರ್ ಇಳೆಯದಳಪತಿ ವಿಜಯ್ ಅವರ ಮುಂದಿನ ಚಿತ್ರಕ್ಕೆ ಕನ್ನಡದ ಹುಡುಗಿ ‘ರಶ್ಮಿಕಾ’ ನಾಯಕಿಯಾಗುತ್ತಿದ್ದಾಳೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.. ಆದರೆ ಸುದ್ದಿ ಸುಳ್ಳು ಎಂದು ಸ್ವತಃ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ವಿಜಯ್​ ಜತೆ ಅಭಿನಯಿಸುವ ಅವಕಾಶ ಸಿಕ್ಕಿಲ್ಲವಂತೆ. ಆದರೆ ಮುಂದೆ ಸಿಗುವುದಿಲ್ಲ ಎಂದಲ್ಲ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಾಳಿ ಸುದ್ದಿ ಎಂದು ಅವರೇ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top