fbpx
ಸಮಾಚಾರ

ಫೆಬ್ರವರಿಗೆ ಸೆಟ್ಟೇರುತ್ತಿದೆ ಶಿವಣ್ಣನ ಮತ್ತೊಂದು- ಹ್ಯಾಟ್ರಿಕ್ ಹೀರೊ ಈಗ ಮತ್ತಷ್ಟು ಬ್ಯುಸಿ.

ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ಯಾಕಂದ್ರೆ ಶಿವಣ್ಣನ ಕೈಯಲ್ಲಿರುವ ಸಿನಿಮಾಗಳನ್ನು ನೋಡಿದರೆ ಎಂಥವರೂ ಕಂಗಾಲಾಗುತ್ತಾರೆ. ಸಧ್ಯ ಕವಚ ಚಿತ್ರದ ಬಿಡುಗಡೆಗೆ ತಯಾರಾಗಿದ್ದು ಇದರೊಂದಿಗೆ ರುಸ್ತುಂ, ದ್ರೋಣ ಚಿತ್ರಗಳೂ ಒಂದಷ್ಟು ಭಾಗಗಳ ಚಿತ್ರೀಕರಣವನ್ನು ಮುಗಿಸಿಕೊಂಡಿವೆ. ಈಗಿರುವಾಗ ಮತ್ತೊಂದು ಸಿನಿಮಾದಲ್ಲಿ ಶಿವಣ್ಣ ತೊಡಗಿಸಿಕೊಳ್ಳುತ್ತಿದ್ದಾರೆ.

ಶಿವಣ್ಣ SRK ಎಂಬ ಸಿನಿಮಾ ಮಾಡುತ್ತಿದ್ದಾರಲ್ಲಾ, ಆ ಚಿತ್ರ ಶೂಟಿಂಗ್ ಫಿಕ್ಸ್ ಆಗಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಸೆಟ್ಟೇರಲಿದೆಯಂತೆ. ಪಕ್ಕಾ ಮಾಸ್ ಹಾಗೂ ಆ್ಯಕ್ಷನ್ ಕಥಾಹಂದರವುಳ್ಳ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮೂರು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ನವೆಂಬರ್ ನಲ್ಲಿ ಟೈಟಲ್ ಮತ್ತು ಮೋಷನ್ ಪೋಸ್ಟರ್ ಲಾಂಚ್ ಆಗಿದ್ದ ಈ ಚಿತ್ರವನ್ನು ಡಾ.ರಾಜ್‌ ಕುಟುಂಬದ ಲಕ್ಕಿ ಗೋಪಾಲ್‌ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ, ಈ ಚಿತ್ರದಲ್ಲೂ ಲಕ್ಕಿ ಶಿವಣ್ಣ ಅವರನ್ನು ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಈ ಹಿಂದೆ ಶಿವಣ್ಣ ಮಾಡಿರದ ಪಾತ್ರವನ್ನು ಇಲ್ಲಿ ಬರೆದಿದ್ದಾರಂತೆ. ಕಿರಣ್ ಕುಮಾರ್ ಪ್ರೊಡಕ್ಷನ್ ಬ್ಯಾನರಿನ ಅಡಿಯಲ್ಲಿ ಕಿರಣ್ ಕುಮಾರ್ ಸಿ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಶಿವಣ್ಣನಿಗೆ ತೆಲುಗು ನಟಿ ಈಶಾ ರೆಬ್ಬ ನಟಿಸುತ್ತಿದ್ದು ಮಫ್ತಿ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದ ನವೀನ ಅವರೇ ಇಲ್ಲೂ ಛಾಯಾಗ್ರಹಣ ಮಾಡಲಿದ್ದು ಅಜನೀಶ್‌ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ.

ಉಳಿದಂತೆ ದೀಪು ಎಸ್‌.ಕುಮಾರ್‌ ಸಂಕಲನ ಮಾಡಲಿದ್ದಾರೆ. “ಭರ್ಜರಿ’ ಚೇತನ್‌ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಹೀರೋ ಹಾಗು ತಂತ್ರಜ್ಞರ ಆಯ್ಕೆ ಮಾತ್ರ ಆಗಿದ್ದು. ಉಳಿದ ತಾರಾಗಣ ಮತ್ತು ನಾಯಕಿಯ ಆಯ್ಕೆ ಆಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top