fbpx
ದೇವರು

ಕುಬೇರ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದ ! ಹೇಗೆ ಮುಂದೆ ಅಷ್ಟು ಐಶ್ವರ್ಯಕ್ಕೆ ಒಡೆಯನಾದ ತಿಳ್ಕೊಬೇಕಾದ್ರೆ ಮುಂದೆ ಓದಿ

ಹಣ,ಆಸ್ತಿ,ಸಿರಿ- ಸಂಪತ್ತು,ಐಶ್ವರ್ಯದ ಅಧಿಪತಿ ಕುಭೇರ ದೇವನು ತನ್ನ ಹಿಂದಿನ ಜನ್ಮದಲ್ಲಿ  ವೃತ್ತಿಯಲ್ಲಿ ಕಳ್ಳನಾಗಿದ್ದನು.ಆ ಕಳ್ಳನು ಹೇಗೆ ಈ ಸ್ಥಿತಿಗೆ ಬಂದನು ಎನ್ನುವ ಕುತೂಹಲಕಾರಿಯಾದ ಕಥೆ ಇಲ್ಲಿದೆ ಅಷ್ಟೇ ಅಲ್ಲ ಈ ಕಥೆಯಲ್ಲಿ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಒಂದು ಸರಳವಾದ ಉಪಾಯವು ಇದೆ.

 

 

 

ಕುಭೇರನು ಐಶ್ವರ್ಯದ ದೇವರು ಎಂದು ಹೇಳಲಾಗುತ್ತದೆ ಮತ್ತು ಅವನು ಯಕ್ಷ ರಾಜನೂ ಸಹ ಆಗಿದ್ದನು. ಆದರೆ ಬಹಳ ಜನರಿಗೆ ತಿಳಿದಿಲ್ಲ ಹಿಂದೂ ಧರ್ಮದ ಗ್ರಂಥಗಳಲ್ಲಿ  ಅವನು ತನ್ನ ಹಿಂದಿನ ಜನ್ಮದಲ್ಲಿ ಒಬ್ಬ ಕಳ್ಳನಾಗಿದ್ದನು ಅದೇ ವೃತ್ತಿಯನ್ನು ಮಾಡುತ್ತಿದ್ದನು.ಅವನು ದೇವಸ್ಥಾನಗಳಿಂದಲೂ ಸಹ ಕಳ್ಳತನ ಮಾಡುತ್ತಿದ್ದನು.ಅವನ ಕಥೆ  ಕೋಪದಿಂದ ಐಶ್ವರ್ಯದ ಕಡೆಗೆ ಸಾಗಿದೆ ಎಂದು  ಹೇಳಬಹುದು.ಇವನೊಬ್ಬ ವೃತ್ತಿಯಲ್ಲಿ ಕಳ್ಳನಾದರೂ ದೃಢವಾದ ದೇವರು, ಹಣದ ಜಿಜ್ಞಾಸೆ ಹೊಂದಿರುವವನು ಎಂದು ಹೇಳಲಾಗಿದೆ.

ಕುಭೇರನ ಹಿಂದಿನ ಜನ್ಮ.

ಶಿವ ಪುರಾಣದ ಪ್ರಕಾರ ಅನೇಕ ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯಿದ್ದನು. ಅವನ ಹೆಸರು ಗುನ್ನಿಧಿ ಎಂದು .ಅವನು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದನು.ಅವನಿಗೆ ಆಹಾರವನ್ನು ಖರೀದಿಸಿ ತಿನ್ನಲು ಸಹ ಅವನ ಬಳಿ ಹಣವಿರಲಿಲ್ಲ.ಆದ್ದರಿಂದ ಅವನು ಬದುಕಲು,ಜೀವನ ನಡೆಸಲು ಕಳ್ಳತನದ ದಾರಿಯನ್ನು ಹಿಡಿದನು.ಅದನ್ನೇ ಅವನ ವೃತ್ತಿಯನ್ನಾಗಿ ಮಾಡಿಕೊಂಡನು.

 

 

 

ಹೀಗೆ ಕಳ್ಳತನವನ್ನೇ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗುನ್ನಿಧಿಯು. ಒಂದು ದಿನ ಶಿವ ದೇವರ ದೇವಸ್ಥಾನದೊಳಗೆ  ಕಳ್ಳತನ ಮಾಡುವ ಉದ್ದೇಶವನ್ನಿಟ್ಟುಕೊಂಡು  ರಾತ್ರಿಯ ಸಮಯದಲ್ಲಿ ಹೋದನು.ಆ ದೇವಸ್ಥಾನದೊಳಗೆ ಅತ್ಯಂತ ಬೆಲೆ ಬಾಳುವ ಬಂಗಾರ,ಬಂಗಾರದಿಂದ ಮಾಡಲ್ಪಟ್ಟ ವಸ್ತುಗಳು ಸಹ ಇದ್ದವು.ಆದರೆ ಆ ದೇವಸ್ಥಾನದಲ್ಲಿ  ಗುನ್ನಿಧಿಯು ಕಳ್ಳತನ ಮಾಡಲು ಹೋದ ದಿನ ಸಂಪೂರ್ಣವಾಗಿ ಕತ್ತಲು ಆವರಿಸಿತ್ತು.ದೇವಸ್ಥಾನದೊಳಗೆ  ಶಿವ ದೇವನ ಮುಂದೆ ಪ್ರಜ್ವಲಿಸುತ್ತಿದ್ದ ದೀಪವು  ಜೋರಾದ ಗಾಳಿ ಬೀಸಿದ ಕಾರಣ ಹಾರಿಹೋಗಿತ್ತು.ಗುನ್ನಿಧಿಗೆ ಕತ್ತಲಿನಲ್ಲಿ  ಕಳ್ಳತನ ಮಾಡುವುದು ಕಷ್ಟವಾಗಿತ್ತು.

ಆದ್ದರಿಂದ ಅವನು ದೀಪ ಹಚ್ಚಲು ಮುಂದಾದನು ಅವನು ಅನೇಕ ಬಾರಿ ಪ್ರಯತ್ನಿಸಿದರೂ ಸಹ ದೀಪ ಪದೇ ಪದೇ ಗಾಳಿಯಿಂದ  ಹಾರಿ ಹೋಗುತ್ತಿತ್ತು.ಕೊನೆಗೆ ಅವನು ತಾನು ಧರಿಸಿದ್ದ ಅಂಗಿಯನ್ನು (shirt) ಬಿಚ್ಚಿ  ಅದರಿಂದ ದೇವಸ್ಥಾನದಲ್ಲಿ  ಬೆಳಕು  ಮೂಡಿತು.ಭಗವಂತನಾದ ಶಿವ ಅವನ ನಿರಂತರವಾದ,  ದೀರ್ಘವಾದ,ಹಠ,ಛಲದ   ಪ್ರಯತ್ನವನ್ನು  ಕಂಡು ಸಂತೋಷಗೊಂಡನು. ನಿಜ ಸಂಗತಿ ಏನೆಂದರೆ ಗುನ್ನಿಧಿಯು ಶಿವ ದೇವನ ದೇವಸ್ಥಾನದೊಳಗೆ ಯಾವುದೇ ಉದ್ದೇಶವಿಲ್ಲದೆ ಬೆಳಕನ್ನು ಹೊತ್ತಿಸಿದನು.

ಭಗವಂತನಾದ ಆ ಶಿವನು ಆಶೀರ್ವದಿಸಿದನು.

ಶಿವ ದೇವನು  ಇವನು ಬೆಳಕನ್ನು ಮುಡಿಸಿದಕ್ಕೆ ಪ್ರಸನ್ನನ್ನಾಗಿ. ಆ ರಾತ್ರಿ  ಪ್ರತ್ಯಕ್ಷನಾಗಿ ಗುನ್ನಿದಿಯನ್ನು ಆಶೀರ್ವದಿಸಿ ನೀನು ನಿನ್ನ ಮುಂದಿನ ಜನ್ಮದಲ್ಲಿ ಹಣ,ಐಶ್ವರ್ಯದ ಅಧಿಪತಿಯ ದೇವನಾಗಿ ಜನ್ಮ ಪಡೆಯುವೆ ಎಂದು ಹೇಳಿದನು.ಇದೊಂದು ಶ್ರೇಷ್ಠವಾದ ಕಥೆಗೆ ಉದಾಹರಣೆಯಾಗಿದೆ .ಹೀಗೆ ಶಿವ ದೇವನ ಮನಸ್ಸು  ತನ್ನ ಭಕ್ತರಿಗಾಗಿ ಬೇಗನೆ ಕರಗಿ ಹೋಗುವುದೆಂದು ಬಿಂಭಿತವಾಗಿವೆ.ಯಾರೇ ಆಗಲಿ ಸಂಜೆಯ ಸಮಯದಲ್ಲಿ ಶಿವ ದೇವರ ದೇವಸ್ಥಾನದ ಮುಂದೆ,ಅಥವಾ ಶಿವಲಿಂಗದ ಮುಂದೆ ದೀಪವನ್ನು ಹಚ್ಚಿಡಬೇಕು.ಹೀಗೆ ಮಾಡಿದರೆ ಹಣಕ್ಕೆ ಸಂಬಂಧಪಟ್ಟ ಎಲ್ಲಾ ತೊಂದರೆಗಳನ್ನು ಶಿವ ದೇವರು ನಿವಾರಿಸುತ್ತಾನೆ ಎಂದು ಹೇಳಲಾಗಿದೆ . ಸಂಜೆ ದೀಪವನ್ನು ಹಚ್ಚುವಾಗ ಪಂಚಾಕ್ಷರಿ  ಮಂತ್ರವಾದ   “ ಓಂ ನಮಃ ಶಿವಾಯ” ಎಂದು ಜಪಿಸಬೇಕು.

ಕುಭೇರನು ಐಶ್ವರ್ಯದ ಅಧಿಪತಿಯಾದನು.

ಕುಭೇರ ದೇವನೇ ಐಶ್ವರ್ಯ ,ಹಣ,ಸಿರಿ, ಸಂಪತ್ತನ್ನು ರಕ್ಷಿಸುವವನು.ಸಂಪತ್ತನ್ನು ಇಟ್ಟುಕೊಂಡಿರುವವನು ಕುಭೇರನೇ ಒಡೆಯನು   ಅದರೆ ಅದರ ಒಡೆಯನಲ್ಲ. ಈದೇ ಕಾರಣದಿಂದಾಗಿಯೇ ಕುಭೇರನ ಮೂರ್ತಿಗಳನ್ನು ಯಾರು ದೇವಸ್ಥಾನದ ಒಳಗೆ ಇಡುವುದಿಲ್ಲ ಬದಲಾಗಿ ಹೊರಗೆ ಇಡುವುದು.ಕುಭೇರನು ಶಿವನ ಗಣಗಳಲ್ಲಿ ಒಬ್ಬನಾಗಿದ್ದನು.ಧರ್ಮ ಗ್ರಂಥಗಳ ಪ್ರಕಾರ ಕುಭೇರನು ಶಿವನ ಗಣಗಳ ಗುಂಪಿನಲ್ಲಿ ಒಬ್ಬನಾಗಿದ್ದನು ಮತ್ತು ಕುಭೆರನನ್ನು ವಿಕಾರ ರೂಪದ ದೇಹವನ್ನು ಹೊಂದಿರುವವನೆಂದು ಚಿತ್ರಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top