ದೇವರು

ಡಿಸೆಂಬರ್ 3ನೇ ತಾರೀಖಿನಂದು ಕಾರ್ತಿಕ ಮಾಸದ ವೈಕುಂಠ ಏಕಾದಶಿ,ಈ ದಿನ ಯಾವ ಕೆಲಸ ಮಾಡಿದ್ರೆ ನಿಮ್ಮ ಭವಿಷ್ಯ ಬದಲಾಗಿ ಸ್ವರ್ಗದ ಬಾಗಿಲು ತೆರೆದು ಮೋಕ್ಷ ಪ್ರಾಪ್ತಿಯಾಗುತ್ತೆ ಗೊತ್ತಾ

ನಮ್ಮ ಹಿಂದೂ ಧರ್ಮದಲ್ಲಿ ಅನೇಕ ಆಚರಣೆಗಳು, ಸಂಪ್ರದಾಯಗಳು, ಶಾಸ್ತ್ರಗಳು, ಅತಿ ಮುಖ್ಯವಾಗಿ ಪಾಲಿಸಬೇಕು ಮತ್ತು ಅವು ತುಂಬಾ ಮಹತ್ವವನ್ನು ಕೂಡ ಪಡೆದುಕೊಂಡಿವೆ. ಡಿಸೆಂಬರ್ ಮೂರನೇ ತಾರೀಖು ಕಾರ್ತಿಕ ಮಾಸ, ಸೋಮವಾರ , ಚಿತ್ತ ನಕ್ಷತ್ರ, ಕೃಷ್ಣ ಪಕ್ಷದ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ.

ಪದ್ಮ ಪುರಾಣದ ಪ್ರಕಾರ ವೈಕುಂಠ ಏಕಾದಶಿಯ ತುಂಬಾ ಹೆಚ್ಚಿನ ಮಹತ್ವವನ್ನು ಪಡೆದುಕೊಂದಿದೆ.ಇದನ್ನು ಸಾಕಷ್ಟು ಸವಿಸ್ಥಾರವಾಗಿ ತಿಳಿಸಿದ್ದಾರೆ. ಶ್ರೀಮನ್ನಾರಾಯಣ ಭಗವಂತ ವಿಷ್ಣುವಿನ ಸ್ತ್ರೀಶಕ್ತಿ ಏಕಾದಶ ರೂಪವನ್ನು ಪಡೆದುಕೊಂಡು ಈ ವೈಕುಂಠ ಏಕಾದಶಿಯ ದಿನ ಮುರಾ ಎಂಬ ಅಸುರನನ್ನು ವಧಿಸಿದ್ದನು ಎಂದು ಹೇಳಲಾಗುತ್ತದೆ. ಈ ದಿನ ವಿಷ್ಣು ದೇವನು ಸಂಪ್ರೀತನಾದನು.ಆದ್ದರಿಂದ ಈ ದಿನವನ್ನು ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ. ಏಕಾದಶಿಯ ದಿನ ಉಪವಾಸವನ್ನು ಕೈಗೊಳ್ಳುವವರು ಮರಣದ ನಂತರ ವೈಕುಂಠವನ್ನು ತಲುಪುತ್ತಾರೆ ಎಂದು ವರವನ್ನು ನೀಡಿದ್ದಾನೆ ಶ್ರೀಮನ್ನಾರಾಯಣ.ಎಲ್ಲಾ ಏಕಾದಶಿಗಳಿಗಿಂತ ಈ ವೈಕುಂಠ ಏಕಾದಶಿ ತುಂಬಾ ಶ್ರೇಷ್ಠವಾದದ್ದು.ವರ್ಷದಲ್ಲಿ ಬರುವ 12 ಏಕಾದಶಿಗಳಲ್ಲಿ ಈ ವೈಕುಂಠ ಏಕಾದಶಿ ತುಂಬಾ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಅದಕ್ಕಾಗಿ ಇದನ್ನು ವೈಕುಂಠ ಏಕಾದಶಿ ಎಂದೇ ಕರೆಯಲಾಗುತ್ತದೆ. ವೈಕುಂಠದ ಬಾಗಿಲು ಈ ದಿನ ತೆರೆದಿರುತ್ತದೆ. ನೀವು ಬಾಕಿ ಉಳಿದ 11 ಏಕಾದಶಿಗಳನ್ನು ಆಚರಿಸದೆ ಇದ್ದರೂ ಪರವಾಗಿಲ್ಲ,ಈ ಒಂದು ವೈಕುಂಠ ಏಕಾದಶಿಯನ್ನು ಭಕ್ತಿ, ಶ್ರದ್ಧೆಯಿಂದ ಉಪವಾಸವಿದ್ದು, ವಿಷ್ಣುವಿನ ಸ್ಮರಣೆ ಮತ್ತು ಪೂಜೆಯನ್ನು ಮಾದಿದ್ದೆ ಆಗಿದ್ದಲ್ಲಿ ವಿಷ್ಣುವಿನ ಸಂಪೂರ್ಣ ಕೃಪೆ ನಿಮಗೆ ಲಭಿಸುತ್ತದೆ. ವರ್ಷದಲ್ಲಿ ಬರುವ 11 ಏಕಾದಶಿಗಳನ್ನು ಮಾಡಿದಷ್ಟೇ ಪುಣ್ಯ ಫಲ ಈ ವೈಕುಂಠ ಏಕಾದಶಿಯನ್ನು ಆಚರಿಸುವುದರಿಂದ ಪ್ರಾಪ್ತಿಯಾಗುತ್ತದೆ.ಮುರಾ ಎನ್ನುವ ಅಸುರನು ಅಕ್ಕಿಯಲ್ಲಿ ಅಡಗಿ ಕುಳಿತಿದ್ದ ಕಾರಣಕ್ಕೆ ಈ ದಿನ ಅಕ್ಕಿಯ ಆಹಾರವನ್ನು ಸೇವಿಸುವುದಿಲ್ಲ.

 

 

 

ಏಕಾದಶಿಯಂದು ಉಪವಾಸವನ್ನು ಕೈಗೊಳ್ಳಬೇಕು ಮತ್ತು ಮರುದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸಿ ಆಹಾರವನ್ನು ಸ್ವೀಕರಿಸಬೇಕು.ಉದ್ದಿನಬೇಳೆ ಮತ್ತು ವಿಶೇಷವಾದ ಹಸಿರು ತರಕಾರಿಗಳು ಮತ್ತು ಮೊಸರಿನಲ್ಲಿ ಬೇಯಿಸಿ ಮಾಡಿದ ಆಹಾರವನ್ನು ಈ ದಿನ ಸೇವಿಸಲಾಗುತ್ತದೆ.ಏಕಾದಶಿಯ ದಿನ ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸಬಹುದು ಮತ್ತು ರಾತ್ರಿಯ ಸಮಯದಲ್ಲಿ ಲಘು ಉಪಹಾರವನ್ನು ಸೇವಿಸಬಹುದು.

ದ್ವಾದಶಿಯ ದಿನ ತುಳಸಿ ನೀರನ್ನು ಸೇವಿಸುವುದನ್ನು “ತುಳಸಿ ಬರಣಿ” ಎಂದು ಹೇಳಲಾಗುತ್ತದೆ. ಏಕಾದಶಿಯಂದು ಜನರು ಲಘುವಾದ ಉಪಹಾರವನ್ನು ಸೇವಿಸುತ್ತಾರೆ. ಏಕಾದಶಿಯನ್ನು ದಿನ ವಿಷ್ಣುವಿನ ಮಂತ್ರವನ್ನು ಪಠಿಸಿಕೊಂಡು, ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ವಿಷ್ಣುವಿಗೆ ಸಂಬಂಧಪಟ್ಟ ಸೇವೆ, ಮಂತ್ರ, ಜಪ, ತಪಗಳನ್ನು ಮಾಡುವುದರಿಂದ ವಿಷ್ಣುವಿನ ಸಂಪೂರ್ಣ ಕೃಪೆ ನಿಮಗೆ ಲಭಿಸುತ್ತದೆ.
ಈ ವೈಕುಂಠ ಏಕಾದಶಿಯ ದಿನ ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎನ್ನುವ ವಿಶ್ವಾಸ ಇದೆ. ಜನನ ಮತ್ತು ಮರಣದ ಕ್ರಿಯೆಯಿಂದ ಆತ್ಮವು ಮುಕ್ತಗೊಂಡು.ವಿಷ್ಣುವಿನಲ್ಲಿ ಲೀನವಾಗುತ್ತದೆ. ಆದ್ದರಿಂದ ಇದು ತುಂಬಾ ಪವಿತ್ರವಾದ ದಿನ.ಆದ್ದರಿಂದ ವೈಕುಂಠ ಏಕಾದಶಿಯನ್ನು ಭಕ್ತಿ,ಶ್ರದ್ಧೆ,ನಂಬಿಕೆಯಿಂದ ಆಚರಿಸಬೇಕು.
ಮುರಾ ಎನ್ನುವ ರಾಕ್ಷಸನನ್ನು ವಿಷ್ಣುವಿನಲ್ಲಿರುವ ಸ್ತ್ರೀ ಶಕ್ತಿಯ ಸಂಹಾರ ಮಾಡಿದ್ದರಿಂದ ಆ ಸ್ತ್ರೀಶಕ್ತಿಗೆ “ಏಕಾದಶಿ” ಎನ್ನುವ ಹೆಸರನ್ನು ವಿಷ್ಣುವೇ ಇಡುತ್ತಾನೆ.ಆಕೆಗೆ ವರವನ್ನು ನೀಡಿ ಆಕೆಯನ್ನು ಅನುಗ್ರಹಿಸುತ್ತಾನೆ. ಯಾರೆಲ್ಲಾ ಈ ವೈಕುಂಠ ಏಕಾದಶಿಯ ದಿನ ಉಪವಾಸ ವನ್ನು ಕೈಗೊಳ್ಳುತ್ತಾರೆ ಅವರಿಗೆ ವೈಕುಂಟ ಸಿದ್ಧಿಸುತ್ತದೆ ಎಂದು ಸ್ವಯಂ ವಿಷ್ಣುವೇ ಘೋಷಿಸಿದ್ದಾನೆ. ನಂಬಿಕೆಗಳ ಪ್ರಕಾರ ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೂ ಕೂಡ ವೈಕುಂಠ ಪ್ರಾಪ್ತಿಯಾಗುತ್ತದೆ. ಜ್ಞಾನ, ಕರ್ಮ, ಧರ್ಮ ಮತ್ತು ಭಕ್ತಿಯಲ್ಲಿ ತೊಡಗಿಕೊಳ್ಳುವವರಿಗೆ ಸದಾ ವೈಕುಂಠದ ಬಾಗಿಲು ತೆರೆದಿರುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top