fbpx
ಸಿನಿಮಾ

ಕಲಾ ಸರಸ್ವತಿ ಬಿ.ಸರೋಜಾದೇವಿ ಜೀವನದ ಕಲ್ಲು-ಮುಳ್ಳಿನ ದಾರಿ

ಬಿ ಸರೋಜಾದೇವಿ ಎಂದರೆ ನಮಗೆ ನೆನಪಿಗೆ ಬರುವುದು ಅದ್ಬುತವಾದ ನಟನೆ ಮತ್ತು ಮುದ್ದಾದ ಮುಖ .ದಕ್ಷಿಣ ಭಾರತ ಕಂಡ ಅತಿ ಅದ್ಬುತ ನಾಯಕಿ ಈ ಸರೋಜಾದೇವಿ ತಮ್ಮ ನಟನ ಕೌಶಲ್ಯದಿಂದ ಇಡೀ ಮನೆ ಮನಗಳಲ್ಲಿ ಹೆಸರು ಮಾಡಿದ ಪ್ರತಿಭಾವಂತೆ ,ಕನ್ನಡ ಸೇರಿದಂತೆ ತೆಲುಗು ,ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ ಇವರು .

 

 

 

ಇವರು 7 ಜನವರಿ 1938 ,ಬೆಂಗಳೂರಿನಲ್ಲಿ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿದರು .ಇವರ ತಂದೆ ಭೈರಪ್ಪ ವೃತಿಯಲ್ಲಿ ಪೊಲೀಸ್ ಅಧಿಕಾರಿ ತಾಯಿ ರುದ್ರಮ್ಮ ,ಗೃಹಿಣಿ .ಈ ದಂಪತಿಗಳಿಗೆ 4 ನೇ ಮಗುವಾಗಿ ಹುಟ್ಟಿದ ಮಗುವೇ ಸರೋಜಾದೇವಿ.ಸರೋಜಾದೇವಿ ದೇವಿಯವರ ತಾತ ಮಾಯಣ್ಣ ಗೌಡರು ಇವರನ್ನು ದತ್ತು ಕೊಡಬೇಕು ಎಂದು ನಿರ್ಧರಿಸಿದರಂತೆ ಆದರೆ ಸರೋಜಾದೇವಿಯವರ ತಂದೆ ಇದಕ್ಕೆ ತಿರಸ್ಕರಿಸುತ್ತಾರೆ, ಸರೋಜಾದೇವಿಯವರಿಗೆ ನೃತ್ಯದ ಮೇಲೆ ಅಷ್ಟು ಆಸಕ್ತಿ ಇಲ್ಲವಾದರೂ ಅವರ ಅಮ್ಮನ ಕೋರಿಕೆಯ ಮೇರೆ ನೃತ್ಯ ಕಲಿಯುತ್ತಾರೆ.ಇವರಿಗೆ 17 ವರ್ಷ ವಯಸ್ಸು ಇರುವಾಗಲೇ ಅನೇಕ ಸಿನಿಮಾ ಅವಕಾಶಗಳು ಬರಲು ಆರಂಭ ವಾಗಿತ್ತು .ಅವರ ಸಿನಿ ಜೀವನ ಶುರು ವಾಗಿದು 1955 ರಲ್ಲಿ , 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ,ಕನ್ನಡ ಚಿತ್ರರಂಗ ಇವರಿಗೆ ಅಭಿನಯ ಸರಸ್ವತಿ ಎಂದು ಬಿರುದು ನೀಡಿತ್ತು .

 

 

 

ಇವರು ಮಾಡಿರುವ ಕನ್ನಡ ಚಿತ್ರಗಳ ಪಟ್ಟಿ ತುಂಬಾ ದೊಡ್ಡದು ,ಅದರಲ್ಲಿ ಮುಖ್ಯವಾದ ಚಿತ್ರಗಳು ಮಹಾಕವಿ ಕಾಳಿದಾಸ ,ಚಿಂತಾಮಣಿ ,ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ , ಕಿತ್ತೂರು ರಾಣಿ ಚೆನ್ನಮ್ಮ ,ಅಮರಶಿಲ್ಪಿ ಜಕಣಾಚಾರಿ ಇನ್ನೂ ಮುಂತಾದವು .
ಇವರಿಗೆ ಬಂದ ಪ್ರಶಸ್ತಿಗಳು ಪದ್ಮ ಭೂಷಣ್ ,ಪದ್ಮ ಶ್ರೀ ,ಕರ್ನಾಟಕ ಸರಕಾರದಿಂದ ರಾಜ್ ಕುಮಾರ್ ಅವಾರ್ಡ್ ಇನ್ನೂ ಹಲವು .ಇವರ ತಾಯಿಇವರ ಬಗ್ಗೆ ಪ್ರತಿಯೊಂದು ವಿಷಯದಲ್ಲೂ ತುಂಬಾ ಕಾಳಜಿ ತೆಗೆದುಕೊಳ್ಳುತ್ತಿದ್ದರಂತೆ.ನಾವು ನೋಡುವ ಹಾಗೇ ಯಾವ ಸಿನಿಮಾದಲ್ಲೂ ಸ್ವಿಮ್ಮಿಂಗ್ ಡ್ರೆಸ್ ಹಾಗೂ ಆಶ್ಲೀಲ ಬಟ್ಟೆಗಳನ್ನೂ ಹಾಕಲು ಬಿಡುತಿರಲಿಲ್ಲವಂತೆ ,ಸರೋಜಾದೇವಿಯವರು ಭಯ ಪಡುತ್ತಿದ್ದ ಒಂದೇಒಂದು ವ್ಯಕ್ತಿ ಅವರ ತಾಯಿ .ಸಿನಿಮಾ ಅವಕಾಶಗಳು ಕೈಯಲ್ಲಿ ತುಂಬಾ ಇರುವಾಗಲೇ ಸರೋಜಾದೇವಿಯವರಿಗೆ ಅವರ ತಾಯಿ ಮದುವೆ ಮಾಡಿಬಿಡುತ್ತಾರೆ .

1 ಮಾರ್ಚ್ 1967 ರಂದು ಶ್ರೀಹರ್ಷ ಎಂಬ ವರನ ಜೊತೆ ಮದುವೆ ಮಾಡುತ್ತಾರೆ ಅವರು ಹುದ್ದೆಯಲ್ಲಿ ಇಂಜಿನಿಯರ್ .ಆ ಸಮಯದಲ್ಲಿ ಸರೋಜಾದೇವಿಯವರಿಗೆ ಬಂದ ಆರ್ಥಿಕ ಮತ್ತು ತೆರಿಗೆ ಸಮಸ್ಯೆ ಗಳಿಗೆ ಅವರ ಪತಿ ಪರಿಹಾರ ಸೂಚಿಸುತ್ತಾರೆ ,ಮದುವೆಯಾದ ಮೇಲೆ ಅವರ ತಾಯಿಯ ಮಾತಿನ ಮೇರೆಗೆ ಇವರು ಚಿತ್ರರಂಗ ದಿಂದ ದೂರ ಇರುತ್ತಾರೆ ,ಆದರೆ ಅವರ ಗಂಡನ ಪ್ರೋತ್ಸಹದಿಂದ ಮತ್ತೆ 1970 ರಲ್ಲಿ ಅವರ ಸಿನಿ ಜೀವನ ಮುಂದುವರೆಸುತ್ತಾರೆ .ಸರೋಜಾ ದೇವಿಯವರಿಗೆ 3 ಮಕ್ಕಳು ಭುವನೇಶ್ವರಿ , ಇಂದಿರಾ, ಮತ್ತು ಮಗ ಗೌತಮ್ ರಾಮಚಂದ್ರನ್ , ಸುಖ ಸಂತೋಷದಿಂದ ನಡೆಯುತ್ತಿದ್ದ ಸಂಸಾರಕ್ಕೆ ಯಾರ ದೃಷ್ಠಿ ಬಿತ್ತೋ ಏನೋ 1986 ರಲ್ಲಿ ಸರೋಜಾದೇವಿಯವರು ಗಂಡ ಮರಣ ಹೊಂದುತ್ತಾರೆ .ತುಂಬಾ ಪ್ರೀತಿ ಮಾಡುತ್ತಿದ್ದ ಗಂಡನನ್ನು ಕಳೆದುಕೊಂಡ ಸರೋಜಾದೇವಿಯವರು ಆ ಸಮಯದಲ್ಲಿ ಮಾನಸಿಕವಾಗಿ ಬಹಳ ನೊಂದಿದ್ದರು ,ಅವರೇ ಹೇಳುವಂತೆ ಆ ಸಮಯದಲ್ಲಿ ಅವರು ಅತ್ತು ಅತ್ತು ಅವರ ಕಣ್ಣುಗಳಲ್ಲಿ ನೀರು ಬತ್ತುಹೋಗಿತಂತೆ.ಈಗ 80 ರ ಹರೆಯದ ಸರೋಜಾದೇವಿಯವರು ತಮ್ಮ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಮಕ್ಕಳ ಜೊತೆ ಖುಷಿಯಾಗಿ ಜೀವನ ಮಾಡುತ್ತಿದ್ದಾರೆ .ಅವರ ಖುಷಿ ಅವರ ಮುಖದ ಮೇಲೆ ಸದಾ ಕಾಲ ಇರಲಿ ಎಂದು ನಾವು ದೇವರಲ್ಲಿ ಕೇಳಿಕೊಳ್ಳೋಣ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top