ಮನೋರಂಜನೆ

ನಟಿ ಐಂದ್ರಿತಾ ರೈ ಮತ್ತು ನಟ ದಿಗಂತ್ ಮದುವೆಗೆ ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟ್ ಅಯ್ತು ಹೊಸ ಹ್ಯಾಷ್ ಟ್ಯಾಗ್.

ನಟಿ ಐಂದ್ರಿತಾ ರೈ ಮತ್ತು ದಿಗಂತ್ ಜೋಡಿ ದಾಂಪತ್ಯ ಜೀವನವಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ತಿಂಗಳ 12 ರಂದು ರಿಂಗ್ ಬದಲಿಸುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಆ್ಯಂಡಿ ಮತ್ತು ದಿಗಂತ್‌. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿರುವ ಈ ಜೋಡಿ, ಡಿಸೆಂಬರ್ 12 ರಂದು ಸರಳವಾಗಿ ಮದುವೆ ನಡೆಯಲಿದೆ ಎಂದಿದ್ದಾರೆ ಹಾಗೂ ಈ ಜೋಡಿ ಡಿಸೆಂಬರ್ 15 ರಂದು ಆಪ್ತರು ಹಾಗೂ ಚಿತ್ರರಂಗದ ಗಣ್ಯರಿಗೆ ಔತಣಕೂಟ ಏರ್ಪಡಿಸಲಿದ್ದಾರೆಂದು ತಿಳಿದು ಬಂದಿದೆ.

ಹೀಗಿರುವಾಗ ಮದುವೆ ತಯಾರಿಯ ಸಂಭ್ರಮದ ನಡುವೆ ಈ ಜೋಡಿ ಸುದ್ದಿಯಾಗಿದ್ದಾರೆ. ಹೌದು, ಇವರ ಮದುವೆಗೆ ಐಂದ್ರಿತಾ ರೇ ಮತ್ತು ದಿಗಂತ್‌ ಅವರ ಸಹೋದರಿ ಕೂತು ಸೋಶಿಯಲ್ ಮೀಡಿಯಾ ದಲ್ಲಿ ಹೊಸ ಹ್ಯಾಷ್‌ಟ್ಯಾಗ್‌ ಆರಂಭಿಸುವುದರ ಮೂಲಕ ಮತ್ತಷ್ಟು ಸುದ್ದಿಯಾಗಿದ್ದಾರೆ.

ಏನದು ಅಂತೀರಾ?

ಐಂದ್ರಿತಾ ರೇ ಮತ್ತು ದಿಗಂತ್‌ ಅವರ ಸಹೋದರಿ ಕೂತು ರಚಿಸಿರುವ ಹೊಸ ಟ್ಯಾಗ್ ಯಾವುದೆಂದರೆ,’ ಬಾಂಗ್‌ ವೆಡ್ಸ್‌ ಬೊಮ್ಮನ್‌’ . ಏನಿದರ ಅರ್ಥ ಅಂದರೆ ಐಂದ್ರಿತಾ ಪಶ್ಚಿಮ ಬಂಗಾಳದವರಾಗಿದ್ದರಿಂದ ‘ಬಾಂಗ್‌ ‘ಎಂದು ಬರೆಯಲಾಗಿದೆ, ದಿಗಂತ್‌ ಬ್ರಾಹ್ಮಣರಾದ್ದರಿಂದ‘ ಬೊಮ್ಮನ್‌ ‘ಎಂದು ರಚಿಸಲಾಗಿದೆ. ಹೌದು ಈ ರೀತಿಯ ನವೀನ ಹ್ಯಾಷ್‌ ಟ್ಯಾಗ್‌ ಕ್ರಿಯೇಟ್‌ ಆಗಿದ್ದು, ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಆಗುವ ಸಾಧ್ಯತೆಗಳಿವೆ.

ಇನ್ನೊಂದು ವಿಶೇಷವೆಂದರೆ, ಆ್ಯಂಡಿ ದಿಗಂತ್‌ ಮದುವೆ ಸರಳವಾಗಿದ್ದರೂ ಊಟ ಮಾತ್ರ ಸ್ಪೆಷಲ್‌ ಆಗಿರುತ್ತದಂತೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು. ದಿಗಂತ್‌ ಮನೆಯಲ್ಲಿ ಬ್ರಾಹ್ಮೀನ್‌ ಶೈಲಿಯ ಮಿಡಿ ಉಪ್ಪಿನಕಾಯಿಯನ್ನು ಸ್ಪೆಷಲ್‌ ಆಗಿ ತಯಾರಿಸಿದರೆ, ಐಂದ್ರಿತಾ ಮನೆಯಲ್ಲಿ ಬಂಗಾಳಿ ಶೈಲಿಯ ನೋಲರ್‌ಗುರ್‌ ರಸಗುಲ್ಲಾ ಊಟದಲ್ಲಿ ವಿಶೇಷವಾಗಿರುತ್ತದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಓಡಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top