fbpx
ಸಮಾಚಾರ

ಸರ್ಕಸ್ ಗಳಲ್ಲಿ ಇನ್ನು ಮುಂದೆ ಪ್ರಾಣಿಗಳ ಬಳಕೆ ನಿಷೇಧ – ಕೇಂದ್ರ ಸರ್ಕಾರದಿಂದ ದಿಟ್ಟ ನಿರ್ಧಾರ

ಸರ್ಕಸ್ ಎಂದರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕವೂ ಸರ್ಕಸ್ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು . ಸರ್ಕಸ್ ನ ಜೋಕರ್, ಸರ್ಕಸ್ ನಲ್ಲಿ ಬರುವ ಪ್ರಾಣಿಗಳು ಇವೆಲ್ಲವೂ ನೋಡುಗರ ಮನಸ್ಸನ್ನು ಮುದಗೊಳಿಸುತತದೆ ಅಲ್ಲವೇ? ಇತ್ತೀಚಿಗೆ ಸರ್ಕಸ್ ಗಳ ಪ್ರದರ್ಶನ ಕಡಿಮೆಯಾಗಿದ್ದರೂ, ನಿಂತಿಲ್ಲ. ಹೀಗಿರುವಾಗ ಸರ್ಕಸ್ ವಿಚಾರದಲ್ಲಿ ಸರ್ಕಾರ ಒಂದು ಹೊಸ ನಿರ್ಧಾರವನ್ನು ಕೈ ಗೊಳ್ಳಲು ಮುಂದಾಗಿದೆ.

ಹೌದು, ಪ್ರಾಣಿಗಳ ಮೇಲಿನ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಸ್ ಕಂಪನಿಗಳಲ್ಲಿ ಪ್ರಾಣಿಗಳ ಬಳಕೆ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರಸ್ತುತ ದೇಶದಲ್ಲಿ ಹುಲಿ, ಸಿಂಹಗಳನ್ನು ಸರ್ಕಸ್ ಗಳಲ್ಲಿ ಬಳಸಿಕೊಳ್ಳುವಂತಿಲ್ಲ ಎಂಬ ಕಾನೂನು ಇದ್ದೆ ಇದೆ. ಆದರೆ ಇನ್ನು ಮುಂದೆ ಕುದುರೆ, ಆನೆ, ನಾಯಿ, ಕೋತಿ ಸೇರಿದಂತೆ ಇತರೆ ಪ್ರಾಣಿಗಳನ್ನೂ ಕೂಡ ಸರ್ಕಸ್ ಕಂಪನಿಗಳಲ್ಲಿ ಬಳಸಬಾರದೆಂಬ ನಿಷೇದಾಜ್ಞೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತಾದ ಪ್ರಸ್ತಾವನೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾದ ಪ್ರಾಣಿಗಳ ಪ್ರದರ್ಶನ ನೋಂದಣಿ ತಿದ್ದುಪಡಿ ನಿಯಮಗಳು-2018ರ ಕರಡು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕೇಂದ್ರ ಸರಕಾರದ ಈ ನಿಷೇದಾಜ್ಞೆ ಗೆ ಸರ್ಕಸ್ ಕಂಪನಿಗಳು ಹೇಗೆ ಪ್ರತಿಕ್ರಿಯಿಸಲಿವೆಯೋ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top