fbpx
ಸಮಾಚಾರ

ಬ್ಯಾಂಕ್ ಗ್ರಾಹಕರಿಗೆ ಕಹಿ ಸುದ್ದಿ – ಇನ್ನೂ ಮುಂದೆ ಉಚಿತಸೇವೆಗಳಿಗೂ ಕಟ್ಟಬೇಕಾಗಬಹುದು ಶುಲ್ಕ

ಬ್ಯಾಂಕ್ ಗ್ರಾಹಕರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಈ ಹಿಂದೆ ಗ್ರಾಹಕರಿಗೆ ಬ್ಯಾಂಕ್ ಎಟಿಎಂಗಳಲ್ಲಿ ಐದು ಬಾರಿ ಹಣ ಹಿಂಪಡೆಯುವುದು, ಚೆಕ್‌ ಪುಸ್ತಕ ವಿತರಿಸುವುದು ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿತ್ತು. ಆದರೆ ಇನ್ನೂ ಮುಂದೆ ಗ್ರಾಹಕರಿಗೆ ಉಚಿತವಾಗಿ ಈ ಸೌಲಭ್ಯ ಸಿಗುವುದರ ಬಗ್ಗೆ ಸಂದೇಹ ವ್ಯಕ್ತವಾಗಿದೆ.

ಏಕೆಂದರೆ ಬ್ಯಾಂಕ ಗ್ರಾಹಕರಿಗೆ ಒದಗಿಸುತ್ತಿರುವ ಈ ಸೌಲಭ್ಯಗಳಿಗೆ ತೆರಿಗೆ ಇಲಾಖೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೇಳಿದೆ .ಆದ್ದರಿಂದ ಬ್ಯಾಂಕ್ ಗಳ ಹೊರೆ ಗ್ರಾಹಕರ ಮೇಲೆ ಬೀಳುವ ಸಾಧ್ಯತೆಗಳು ಹೆಚ್ಚಿವೆ ಶೀಘ್ರದಲ್ಲೇ ಬ್ಯಾಂಕುಗಳಿಂದ ಈ ಕುರಿತಂತೆ ಅಧಿಕೃತ ಘೋಷಣೆ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ.

ಬ್ಯಾಂಕುಗಳು ಗ್ರಾಹಕರಿಗೆ ಒದಗಿಸುತ್ತಿರುವ ಸೌಲಭ್ಯಗಳು ಉಚಿತವಾಗಿದ್ದರು ಅದಕ್ಕೊಂದು ಬೆಲೆ ಇರುತ್ತದೆ. ಆದ್ದರಿಂದ ತೆರಿಗೆ ಕಟ್ಟಿ ಎಂದು, ತೆರಿಗೆ ಇಲಾಖೆ ಬ್ಯಾಂಕುಗಳಿಗೆ ಕಳೆದ ಎರಡು ತಿಂಗಳಿನಿಂದ ನೋಟಿಸುಗಳನ್ನು ಕಳಿಸುತ್ತಿದೆಯಂತೆ .

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕುಗಳು ತಮ್ಮ ಹೊರೆಯನ್ನು ಹೀಗಾಗಲೇ ಗ್ರಾಹಕರ ಮೇಲೆ ಹಾಕಲು ರೆಡಿ ಆಗಿದ್ದು, ಈ ತಿಂಗಳಿನಿಂದಲೇ ಈ ಬದಲಾವಣೆಗಳು ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಚೆಕ್‌ಬುಕ್‌, ಹೆಚ್ಚುವರಿ ಕ್ರೆಡಿಟ್‌ ಕಾರ್ಡ್‌, ಎಟಿಎಂ ಬಳಕೆ ಮುಂತಾದ ಹಲವು ಉಚಿತ ಸೇವೆಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿದ್ದು , ಇನ್ನೂ ಮುಂದೆ ಇವುಗಳಿಗೆ ಗ್ರಾಹಕರು ಹಣ ಪಾವತಿಸಬೇಕಾಗಬಹುದೇನೋ.

ಆದರೆ ಜಿಎಸ್‌ಟಿ ನಲ್ಲಿ ಬ್ಯಾಂಕುಗಳಿಂದ ಬ್ಯಾಂಕುಗಳಿಗೆ ವ್ಯತ್ಯಾಸವಾಗಬಹುದಾಗಿದ್ದು. ಯಾವ ಬ್ಯಾಂಕು ಯಾವ ಸೇವೆಗೆ ಎಷ್ಟು ಮೌಲ್ಯ ಎಂದು ನಿಗದಿಪಡಿಸುತ್ತದೋ ಅದರ ಮೇಲೆ ಶೇ.18ರ ಜಿಎಸ್‌ಟಿ ಲೆಕ್ಕಾಚಾರ ನಡೆಯುತ್ತದೆ. ಈ ರೀತಿ ಸಂಗ್ರಹವಾಗುವ ಹಣ ನೇರವಾಗಿ ಸರ್ಕಾರಕ್ಕೆ ಹೋಗಲಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘದ ಸಿಇಒ ವಿ.ಜಿ. ಕಣ್ಣನ್‌ ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top