fbpx
ಸಮಾಚಾರ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೆರಳಂಚಿನಲ್ಲಿ ಪ್ರತ್ಯಕ್ಷವಾಯಿತು ಚಿರತೆ -ತಪ್ಪದೆ ಫೋಟೋ ನೋಡಿ

ಕ್ರಿಕೆಟ್ ದೇವರು ತಮ್ಮ ಬ್ಯುಸಿ ಷೆಡ್ಯೂಲ್ ನಿಂದ ಆಚೆ ಬಂದು, ಸದ್ಯಕ್ಕೆ ರಾಜಸ್ತಾನ ಟ್ರಿಪ್ ನಲ್ಲಿದ್ದಾರೆ.ಕುಟುಂಬದವರೊಂದಿಗೆ ರಾಜಸ್ತಾನ್ ಟ್ರಿಪ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಹೀಗಿರಬೇಕಾದರೆ ಸಚಿನ್ ಮತ್ತು ಅವರ ಕುಟುಂಬದವರಿಗೆ ಮರುಭೂಮಿಯಲ್ಲಿ ಚಿರತೆಯೊಂದು ಎದುರಾಗಿದೆ.

ಹೌದು, ಮರುಭೂಮಿಯಲ್ಲಿ ಸಚಿನ್ ಮತ್ತು ಕುಟುಂಬದವರು ಸಫಾರಿ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಸ್ವಲ್ಪ ದೂರದಲ್ಲೇ ಅವರಿಗೆ ಚಿರತೆಯೊಂದು ಹಾಯಾಗಿ ವಿಶ್ರಾಂತಿ ಪಡೆಯುತ್ತಿರುವುದು ಕಣ್ಣಿಗೆ ಬಿದ್ದಿದೆ. ಈ ಕ್ಷಣವನ್ನು
ಮಿಸ್ ಮಾಡಿಕೊಳ್ಳದ ಸಚಿನ್ ತತಕ್ಷಣವೇ ತಮ್ಮ ಮೊಬೈಲ್ ತೆಗೆದು ಸೆಲ್ಫಿಯೊಂದನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಚಿನ್ ರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಲೈಕ್ಸ್ ಗಿಟ್ಟಿಸಿದೆ.

ಆದರೆ ವಿಶೇಷ ಏನೆಂದರೆ ಸಚಿನ್ ಚಿರತೆ ಜತೆಗೆ ತೆಗೆದುಕೊಂಡಿರುವ ಸೆಲ್ಫಿ ಕೊಂಚ ಡಿಫರೆಂಟ್ ಆಗಿದ್ದು ಸಚಿನ್ ಬೆರಳಂಚಿನಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವಂತೆ ಕಾಣುವುದರಿಂದ ಚಿತ್ರಪಟ ರೋಚಕತೆಗೆ ಸಾಕ್ಷಿಯಾಗಿದೆ.

ಪ್ರಸ್ತುತ ರಾಜಸ್ತಾನದ ಪ್ರವಾಸದಲ್ಲಿರುವ ಸಚಿನ್ ಕುಟುಂಬ ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದೆ. ಈ ಮೊದಲು ಬಾಲಿವುಡ್‌ನ ಜನಪ್ರಿಯ ಶೋಲೆ ಚಲನಚಿತ್ರ ಚಿತ್ರೀಕರಣಗೊಂಡ ಸ್ಥಳಕ್ಕೂ ಭೇಟಿ ಕೊಡುವ ಮೂಲಕ ಇಡೀ ಕುಟುಂಬ ಜನರ ಗಮನ ಸೆಳೆದಿದ್ದರು.

 

 

View this post on Instagram

 

Look who I found relaxing in the desert 👀 #LeopardSpotted #RajasthanTales

A post shared by Sachin Tendulkar (@sachintendulkar) on

 

 

View this post on Instagram

 

Kitne Aadmi The? It was a complete Sholay experience. Ek photo toh banta hai. #rajasthantales

A post shared by Sachin Tendulkar (@sachintendulkar) on

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top