fbpx
ಸಮಾಚಾರ

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ ವಿಧಿವಶ

ಅಮೆರಿಕಾದ ಜನಪ್ರಿಯ ಮಾಜಿ ಅಧ್ಯಕ್ಷ ಹಾಗೂ ಎರಡನೇ ವಿಶ್ವ ಯುದ್ಧದ ಹೀರೊ ಎಂದು ಗುರುತಿಸಿಕೊಂಡಿದ್ದ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ ಅಮೆರಿಕದ ಕಾಲಮಾನದ ಪ್ರಕಾರ ನವೆಂಬರ್ 30ರಂದು ನಿಧನರಾಗಿದ್ದಾರೆ. 94 ವರ್ಷದ ಬದುಕಿದ್ದ ಬುಷ್ ನಿನ್ನೆ ಕಣ್ಣು ಮುಚ್ಚಿದ್ದಾರೆ. ಅಮೆರಿಕದ ರಾಜಕೀಯ ರಂಗದಲ್ಲಿ ಇವರ ಸಾಧನೆ ಬಹಳ ಇದ್ದು, 1989ರಿಂದ 1993ರವರೆಗೆ ಅಮೆರಿಕದ 41ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಅಮೆರಿಕ – ರಷ್ಯಾ ನಡುವೆ 1990ರ ಸಮಯದಲ್ಲಿ ನಡೆದ ಶೀತಲ ಸಮರದ ಅಂತ್ಯದ ವೇಳೆಯಲ್ಲಿ ಯುಎಸ್‌ಎ ಅನ್ನು ಮುನ್ನಡೆಸಿದ ಕೀರ್ತಿ ಜಾರ್ಜ್ ಹರ್ಬಟ್ ವಾಕರ್ ಬುಷ್‌ ರವರ ಖಾತೆಯಲ್ಲಿದೆ.

2018 ರ ಏಪ್ರಿಲ್‌ ತಿಂಗಳಲ್ಲಿ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ನ ಪತ್ನಿ ಬಾರ್ಬರಾ ಬುಷ್‌ ಪತ್ನಿ ಸಹ ಅಸುನೀಗಿದ್ದರು. ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ನ ಪುತ್ರ ಜಾರ್ಜ್ ಡಬ್ಲ್ಯು ಬುಷ್‌ ಸಹ 2001 ರಿಂದ 2009 ರವರೆಗೆ ಅಮೆರಿಕದ 43 ನೇ ಅಧ್ಯಕ್ಷರಾಗಿದ್ದರು.

ಉಳಿದಂತೆ ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ಗೆ ಐವರು ಮಕ್ಕಳಿದ್ದು, 17 ಮೊಮ್ಮಕ್ಕಳಿದ್ದಾರೆ. ಜಾರ್ಜ್ ಎಚ್‌. ಡಬ್ಲ್ಯು. ಬುಷ್‌ ಒಂದು ಬಾರಿ ಮಾತ್ರ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top