fbpx
ದೇವರು

ಇಷ್ಟ ದೈವ ಕಂಡುಕೊಳ್ಳುವುದು ಹೇಗೆ ಮತ್ತು ಯಾರು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು.

ಪ್ರತಿಯೊಬ್ಬರೂ ತಮ್ಮ ಕರ್ಮಗಳಿಗೆ  ಆನುಸಾರವಾಗಿ ಇಷ್ಟ ದೈವ ಯಾವುದು ಎಂದು ಕಂಡುಕೊಳ್ಳಬಹುದು. ನಿಮ್ಮ ಜಾತಕದಲ್ಲಿ ಪಂಚಮ ಸ್ಥಾನ ನೋಡಿಕೊಂಡು ಅಂದರೆ 5 ನೆ ಮನೆಯಲ್ಲಿ ಯಾವ ಗ್ರಹ ಇದೆ ಎಂದು ತಿಳಿದುಕೊಂಡು ಅದರ ಪ್ರಕಾರ ನೀವು ನಿಮ್ಮ ಇಷ್ಟ ದೈವವನ್ನು ಕಂಡು ಹಿಡಿಯಬಹುದು.ಪಂಚಮ ಸ್ಥಾನವನ್ನು ಪೂರ್ವಪುಣ್ಯ ಸ್ಥಾನ ಎಂದು ಕೂಡ ಕರೆಯುತ್ತಾರೆ. ಪಂಚಮ ಸ್ಥಾನವೇ ಇಷ್ಟ ದೈವದ ಸ್ಥಾನ.ಕೆಲವರು ಕುಲ ದೇವರು,ಇಷ್ಟ ದೇವರು ಎಂದು ಹೇಳುತ್ತಾರೆ ಹಾಗೆ ಹೇಳುವುದು  ತಪ್ಪು. ಇಷ್ಟ ದೇವರನ್ನು ಆರಾಧಿಸಿದರೆ ನಿಮ್ಮ ಕಷ್ಟಗಳು ದೂರಾಗುತ್ತವೆ.ದೇವರು ಒಂದೇ ಆದರೆ ನಾಮ ಹಲವು. “ಓಂ ನಿತ್ಯಕಾಕ್ಷರಂ ಬ್ರಹ್ಮ”   ಅಂದರೆ  ಇರುವುದು ಒಂದೇ ದೇವರು ಅದೇ “ಪರಬ್ರಹ್ಮ” ದೇವರಿಗೆ  ಆಕಾರ ಇರುವುದಿಲ್ಲ ಮನುಷ್ಯನಿಗೆ ಅನುಕೂಲ ಆಗಲಿ ಅಂತ ಒಬ್ಬೊಬ್ಬರು ಒಂದೊಂದು ದೇವರನ್ನು ಸೃಷ್ಟಿ ಮಾಡಿಕೊಂಡಿದ್ದಾರೆ.ಭಗವಂತ ಎಂದರೆ ಅಪ್ರತಿಮ ಶಕ್ತಿ, ಚೈತನ್ಯ.

 

 

 

ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕು ಎಂದರೆ ಆಧ್ಯಾತ್ಮಿಕ ಚಿಂತನೆ ಮಾಡಬೇಕು.ಭೋಜನ ಸಮಯದಲ್ಲಿ ಧನ್ಯವಾದ ಹೇಳಬೇಕು ನಮಗೆ ತ್ತಿನ್ನುವುದಕ್ಕೆ ಊಟ, ತಿಂಡಿ ಕೊಟ್ಟಿದಕ್ಕಾಗಿ ಭಗವಂತನಿಗೆ ಕೃತಜ್ಞತೆಯನ್ನು ಅರ್ಪಿಸಬೇಕು. ಹೀಗೆ ಗ್ರಂಥಗಳಲ್ಲಿ ಮತ್ತು ಭಗವತ್ಗೀತೆಯಲ್ಲಿ ಹೇಳಲಾಗಿದೆ.ಆಸೆಗಳನ್ನು ಮನುಷ್ಯರು ಕಡಿಮೆ ಮಾಡಿಕೊಳ್ಳಬೇಕು. ಮನುಷ್ಯನಿಗೆ ಬರುವ ತೊಂದರೆಗಳಿಂದ ಪಾರಾಗಲು ಇಷ್ಟ ದೈವವನ್ನು ಪ್ರಾರ್ಥಿಸಬೇಕು ಆಗ ಆಂತರಿಕ ಆರಿವು ಹೆಚ್ಚುತ್ತದೆ.ನಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳಿಗನುಸಾರ ಜಾತಕದಲ್ಲಿ 5 ನೇ ಮನೆಯಲ್ಲಿ ಯಾವ ಗ್ರಹವಿದೆ ಎಂದು ನೋಡಿ ,ಮತ್ತು ಯಾವ ದೆಸೆ ನೆಡೆಯುತ್ತಿದೆ ಎಂದು ತಿಳಿದು ಅದರ ಅನುಸಾರ ಇಷ್ಟ ದೈವವನ್ನು ಕಂಡುಕೊಳ್ಳಬೇಕು. ಯಾವ ಗ್ರಹದ ಪ್ರಭಾವ ಹೆಚ್ಚಿದೆ  ಎಂದು ನೋಡಿಕೊಳ್ಳಬೇಕು.ಎಲ್ಲದಕ್ಕೂ ಒಂದಾಣಿಕೆ ಇರಬೇಕು.  ನಮ್ಮ ದೇಹಕ್ಕೆ ಒಗ್ಗುವ ಆಹಾರವನ್ನು ನಾವು ತಿನ್ನಬೇಕು ಅದೇ ರೀತಿಯಲ್ಲಿ ನಮಗೆ ಯಾವ ದೇವರು ಒಳ್ಳೆಯದನ್ನು ಮಾಡುತ್ತದೆ ಎಂದು ತಿಳಿದು ಪೂಜಿಸಬೇಕು.ಬನ್ನಿ ನೋಡೋಣ ಯಾವ ಗ್ರಹಕ್ಕೆ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂದು..

ಸೂರ್ಯ- ಸೂರ್ಯ ಗ್ರಹದ ಪ್ರಭಾವ ಹೆಚ್ಚಿದ್ದರೆ  ಸೂರ್ಯಾರಾಧನೆ, ಆದಿತ್ಯ ಹೃದಯ ಪಾರಾಯಣ,  ಶ್ರೀ ರಾಮ ದೇವರ ಪೂಜೆ, ಸತ್ಯನಾರಾಯಣ ದೇವರಿಗೆ ಪೂಜೆಯನ್ನು ಮಾಡಬೇಕು.ಚಂದ್ರ-ಈಶ್ವರನ ಆರಾಧನೆ, ರುದ್ರ ಪಾರಾಯಣ, ಪಂಚಾಕ್ಷರಿ ಮಂತ್ರ ಜಪ (ನಮಃ ಶಿವಾಯ),ಮಹಾ ಮೃತ್ಯುಂಜಯ ಮಂತ್ರವನ್ನು 54 ಅಥವಾ 108 ಭಾರಿ ಜಪಿಸಬೇಕು.ಸೋಮವಾರದ ದಿನ ಹಾಲಿನ ಅಭಿಷೇಕ ಮಾಡಬೇಕು.ಕುಜ ಅಥವಾ ಮಂಗಳ ಗ್ರಹ- ಸುಬ್ರಹ್ಮಣ್ಯ ಪೂಜೆ, ಸ್ಕಂದ ಷಷ್ಠಿ ಕವಚ, “ಓಂ ಶರವಣ  ಭವಾಯ ನಮಃ”  ಈ ಮಂತ್ರವನ್ನು ಜಪಿಸುವವರಿಗೆ ಗುರುಗಳಿಂದ ಉಪದೇಶವಾಗಿರಬೇಕು.  ಈ ಮಂತ್ರವನ್ನು ಜಪಿಸುವವರು  ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಆಹಾರ ಪದತ್ತಿಯನ್ನು  ಸರಿಯಾಗಿ ಪಾಲಿಸಬೇಕು ಮತ್ತು ಬ್ರಹ್ಮಚರ್ಯವನ್ನು  ಪಾಲಿಸಬೇಕು.ದೇಹಕ್ಕೆ ಮತ್ತು ಮನಸ್ಸಿಗೆ ಶಕ್ತಿ,ಚೈತನ್ಯ ಬರುತ್ತದೆ.

ಕುಜ ಮತ್ತು ಬುಧ- ಕುಜ ಮತ್ತು ಬುಧ ಒಟ್ಟಿಗೆ ಇದ್ದರೆ ನರಸಿಂಹಸ್ವಾಮಿ ಆರಾಧನೆಯನ್ನು ಮಾಡಬೇಕು.ನರಸಿಂಹ ಮಂತ್ರವನ್ನು ಜಪಿಸಬೇಕು“ಉಗ್ರಂ ವೀರಂ ಮಹಾವಿಷ್ಣುo ಜಾಲ್ವಂತಂ  ಸರ್ವೋತೋಮುಖಂ. ನಾರಸಿಂಹo ಬೀಷಣಂ ಭದ್ರಂ ಮೃತ್ಯುರ್ ಮೃತ್ಯುರ್ ನಮಾಮೃಹಂ”.ಈ ಮಂತ್ರವನ್ನು 108  ಭಾರಿ  ಬೆಳ್ಳಗ್ಗೆ  ಮತ್ತು  ಸಂಜೆ  ಜಪಿಸಬೇಕು. ಇನ್ನು ಕುಜನ ಪ್ರಭಾವ ಹೆಚ್ಚಿದ್ದರೆ ಗರ್ಭಧಾರಣೆ  ಆಗುವುದಿಲ್ಲ ಅಂತವರು   ಈ ಮಂತ್ರವನ್ನು ಸತತವಾಗಿ  ಜಪಿಸಿದರೆ  7 ರಿಂದ 8 ತಿಂಗಳ ವಳಗೆ ಮಹಿಳೆಯರು ಗರ್ಭ ಧರಿಸುತ್ತಾರೆ .ಇದನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಚಾರಣೆ ಮಾಡಬೇಕು.

 

 

 

ಬುಧ-ಬುಧನ ಅಧಿಪತಿ ಮಹಾವಿಷ್ಣು ಆದ್ದರಿಂದ ಕೃಷ್ಣ, ನಾರಾಯಣನ ಆರಾಧನೆ ಮಾಡಬೇಕು.ಅಷ್ಟಾಕ್ಷರಿ ಮಂತ್ರವನ್ನು  108 ಭಾರಿ ಜಪಿಸಬೇಕು. “ಓಂ ನಮೋ ನಾರಾಯಣಾಯ ನಮಃ”.ಗುರು-ಗುರು ಗ್ರಹದ ಪ್ರಭಾವ ಹೆಚ್ಚಿದ್ದರೆ ಶಿವನ ಆರಾಧನೆ ಮಾಡಬೇಕು ಶಿವ ಸಹಸ್ರನಾಮ ಪಾರಾಯಣ,ಪಂಚಮುಖಿ ಗಣಪತಿ ಆರಾಧನೆ, ದತ್ತಾತ್ರೇಯ ಪೂಜೆ ಮಾಡಬೇಕು.ಜಾತಕದಲ್ಲಿ ಗುರು ಕೆಟ್ಟಿದ್ದರೆ  ಶಿವನನ್ನು ವೀರಭದ್ರ ಹಾಗೂ ಮುನೇಶ್ವರನ ರೂಪದಲ್ಲಿ ಆರಾಧಿಸಬೇಕು.ಶುಕ್ರ-ಶುಕ್ರನ ಪ್ರಭಾವ ಹೆಚ್ಚಿದ್ದರೆ ಮಹಾಲಕ್ಷ್ಮೀ, ಪಾರ್ವತಿ, ದುರ್ಗಿ,ಲಲಿತಾ ತ್ರಿಪುರ ಸುಂದರಿ ಆರಾಧನೆ ಮಾಡಿದರೆ ಒಳ್ಳೆಯದು.ಜಾತಕದಲ್ಲಿ ಶುಕ್ರ ಕೆಟ್ಟಿದ್ದರೆ ಕಾಳಿ, ಚಂಡಿ,ಅಥವಾ ಚಾಮುಂಡಿ ರೂಪದಲ್ಲಿ ಆರಾಧನೆ ಮಾಡಿದರೆ ಒಳ್ಳೆಯದು. ಲಲಿತಾ ಸಹಸ್ರನಾಮ ಪಾರಾಯಣದಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಶನಿ-ಶನಿಗೆ ಶಿವ ಎಂದರೆ ಪ್ರಿಯ ಆದ್ದರಿಂದ  ಶಿವನ ಆರಾಧನೆ ಮಾಡಬೇಕು. ಶನಿ ಉಚ್ಛ ಸ್ಥಾನದಲ್ಲಿ ಇದ್ದರೆ ವೆಂಕಟೇಶ್ವರನ ಆರಾಧನೆ  ಮಾಡಬೇಕು.ಶನಿಯ ಪ್ರಭಾವ ಅತೀ ಹೆಚ್ಚಿದರೆ  ಆಂಜುನೇಯನ ಆರಾಧನೆ ಮಾಡ್ಬೇಕು.ಕೇತು-ಗಣಪತಿಯ ಆರಾಧನೆ ಒಳ್ಳೆಯದು . “ಓಂ ಮಹಾ ಗಣಪತಯೇ ನಮಃ” ಈ ಮಂತ್ರವನ್ನು 108 ಭಾರಿ ಜಪಿಸಬೇಕು.ಗಣಪತಿ ಬೀಜ ಮಂತ್ರ  “ಓಂ ಗಂ ಗಣಪತಯೇ ನಮಃ”   ಈ ಮಂತ್ರವೂ  ಗುರುಗಳಿಂದ ಉಪದೇಶವಾಗಿರಬೇಕು.ಗಕಾರ ಗಣಪತಿ ಸಹಸ್ರ ನಾಮ ಪಾರಾಯಣ, ಗಣಪತಿ ಬೀಜ ಮಂತ್ರ ಪಠಿಸಬೇಕು. ಮನೆಯಲ್ಲಿ  ಗಣಪತಿ ಮೂರ್ತಿಯನ್ನು ಇಟ್ಟುಕೊಳ್ಳುವವರು ಎಡಮುರಿ ಗಣಪತಿಯನ್ನು ಇಟ್ಟು ಪೂಜಿಸಬೇಕು ಅಂದರೆ ಗಣಪತಿಯ ಸೊಂಡಿಲು ಎಡಬಾಗಕ್ಕೆ ಇರಬೇಕು.

ರಾಹು-ದುರ್ಗಾ ಆರಾಧನೆ, “ಓಂ ಶ್ರೀ ಮಹಾ ದುರ್ಗಾಯಯ್ಯೆ ನಮಃ” ಈ ಮಂತ್ರವನ್ನು ಕೆಂಪು ಬಣ್ಣದ ಅಕ್ಷರದಿಂದ  108 ಭಾರಿ ಪೂರ್ವಾಭಿಮುಖವಾಗಿ ಕುಳಿತು 9 ತಿಂಗಳು ಬರೆಯಬೇಕು.ಆಗ ಬೇಗ ಕಷ್ಟಗಳು ದೂರಾಗಿ ಇಷ್ಟಾರ್ಥ ಸಿದ್ಧಿಸುತ್ತವೆ.ರಾಹು ಕೆಟ್ಟಿದ್ದರೆ  ಸರ್ಪ ಸೂಕ್ತ ಪಾರಾಯಣ ಮತ್ತು ಸುಬ್ರಮಣ್ಯ ಆರಾಧನೆ ಮಾಡ್ಬೇಕು.ರಾಹು,ಕೇತು,ಹಾಗೂ ಶನಿ ಪ್ರಭಾವ ಹೆಚ್ಚಿರುವವರು  ಸಂಜೆ ಸೂರ್ಯಾಸ್ತದ  ಸಮಯದ ನಂತರ ಜಪಿಸುವುದು ಒಳ್ಳೆಯದು.ಸೂರ್ಯ,ಚಂದ್ರ, ಕುಜ,ಗುರು,ಶುಕ್ರನ ಪ್ರಭಾವ ಇರುವಂತಹ ಜಾತಕದವರು ಬೆಳ್ಳಗ್ಗೆ 9 ಗಂಟೆಯ ಒಳಗೆ ಆರಾಧನೆ ಮಾಡಿದರೆ ಒಳ್ಳೆಯದು.ಬುಧನ ಪ್ರಭಾವ ಇದ್ದರೆ ಸಂಜೆ ಗೋಧೂಳಿ ಮುಹೂರ್ತದಲ್ಲಿ ಅಂದರೆ  6 ರಿಂದ 7 ಗಂಟೆಯ ಒಳಗೆ  ಆರಾಧನೆ ಮಾಡಿದರೆ ಒಳ್ಳೆಯದು.ಗಣೇಶ ,ಶಿವ,ಪಾರ್ವತಿಗೆ ಸಂಭಂದ ಪಟ್ಟ ಜಪಗಳನ್ನು ಉತ್ತಾರಾಭಿಮುಖವಾಗಿ ಕುಳಿತು ಜಪ ಮಾಡಿದರೆ ಒಳ್ಳೆಯದು.ಮಹಾಲಕ್ಷ್ಮೀ ಹಾಗೂ ವಿಷ್ಣುವಿಗೆ ಸಂಬಂಧಿಸಿದ ಮಂತ್ರಗಳನ್ನು ಪೂರ್ವಾಭಿಮುಖವಾಗಿ ಕುಳಿತು ಜಪ ಮಾಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top